ನಕಲ್ ಎಸೆತಗಳು ನನಗಿಷ್ಟ: ಟೈ
Team Udayavani, Apr 16, 2017, 1:26 PM IST
ರಾಜ್‌ಕೋಟ್: ಆ್ಯಂಡ್ರೂ ಟೈ 10ನೇ ಐಪಿಎಲ್‌ನಲ್ಲಿ “ಗುಜರಾತ್ ಲಯನ್ಸ್’ ತಂಡದ ಮೊದಲ ಗೆಲುವಿನ ರೂವಾರಿಯಾಗಿ ಮೂಡಿಬಂದ ಆಸ್ಟ್ರೇಲಿಯದ ವೇಗಿ. ಐಪಿಎಲ್ ಪಾದಾರ್ಪಣಾ ಪಂದ್ಯದಲ್ಲೇ ಹ್ಯಾಟ್ರಿಕ್ ಸಾಧಿಸಿದ ಹಾಗೂ 5 ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೌಲರ್. ಅತ್ತ ಆರ್‌ಸಿಬಿಯ ಕೆರಿಬಿಯನ್ ಲೆಗ್‌ಸ್ಪಿನ್ನರ್ ಸಾಮ್ಯುಯೆಲ್ ಬದ್ರಿ ಮುಂಬೈ ವಿರುದ್ಧ ಹ್ಯಾಟ್ರಿಕ್ ಸಾಧನೆಗೈದ ಕೆಲವೇ ಗಂಟೆಯಲ್ಲಿ ಟೈ ಕೂಡ ಈ ಸಾಹಸವನ್ನು ಪುನರಾವರ್ತಿಸಿದರು. ಪರಿಣಾಮ ಮಾತ್ರ ಬೇರೆ ಬೇರೆಯಾಗಿತ್ತು. ಬದ್ರಿ ಹ್ಯಾಟ್ರಿಕ್ ಸೋಲಿನಲ್ಲಿ ಅಂತ್ಯ ಕಂಡರೆ, ಟೈ ಹ್ಯಾಟ್ರಿಕ್ ಗುಜರಾತ್‌ನ ಗೆಲುವಿನ ಖಾತೆಯನ್ನು ತೆರೆಯಿತು.
ಆ್ಯಂಡ್ರೂé ಟೈ ಶುಕ್ರವಾರ ರಾತ್ರಿ ಮೊದಲ ಐಪಿಎಲ್ ಪಂದ್ಯವಾಡಿದರೂ ಅವರು ಐಪಿಎಲ್‌ನ ಹೊಸ ಮುಖವೇನಲ್ಲ.
ಟೈ 2015ರ ಐಪಿಎಲ್ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದರು. ಕಳೆದ ವರ್ಷ ಗುಜರಾತ್ ಲಯನ್ಸ್ ತೆಕ್ಕೆಗೆ ಬಿದ್ದರು. ಆದರೆ ಈ ಎರಡೂ ವರ್ಷಗಳಲ್ಲಿ ಅವರಿಗೆ ಒಂದೇ ಒಂದು ಪಂದ್ಯವಾಡುವ ಅವಕಾಶವನ್ನು ಈ ಎರಡೂ ಫ್ರಾಂಚೈಸಿಗಳು ಕಲ್ಪಿಸಿರಲಿಲ್ಲ! ಇದೀಗ ಟೈ ಸಾಮರ್ಥ್ಯವೇನೆಂಬುದು ಪುಣೆ ವಿರುದ್ಧದ ಪಂದ್ಯದಲ್ಲಿ ಎಲ್ಲರ ಅರಿವಿಗೆ ಬಂದಿದೆ.
ಈ ಸಂದರ್ಭದಲ್ಲಿ ಮಾತಾಡಿದ ಆ್ಯಂಡ್ರೂé ಟೈ, ತನಗೆ “ನಕಲ್’ ಬೌಲಿಂಗ್ (ಚೆಂಡನ್ನು ಮುಷ್ಟಿಗಟ್ಟಿ ಉಗುರಿನ ಬಿಗಿ ಹಿಡಿತದಲ್ಲಿ ಇರಿಸಿಕೊಂಡು ಎಸೆಯುವುದು) ಇಷ್ಟ, ಈ ಯಶಸ್ಸಿಗೆ ಇದೂ ಕಾರಣ ಎಂದರು.
“ಕಳೆದ ಐದಾರು ವರ್ಷಗಳಿಂದ ನಾನು ಸತತವಾಗಿ ನಕಲ್ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದೆ. ಇಂದು ನಿರ್ಣಾಯಕ ಹಂತ ತಲುಪಿದೆ. ಇದೀಗ ಟಿ-20ಯಲ್ಲಿ ನನ್ನ ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ’ ಎಂದು ಟೈ ಹೇಳಿದರು.
ಪುಣೆ ವಿರುದ್ಧ ಪವರ್ ಪ್ಲೇ ಅವಧಿಯ ಕೊನೆಯ ಓವರ್ ಎಸೆಯಲು ಬಂದ ಟೈ, ಕೇವಲ 4 ರನ್ ನೀಡಿ ಬೇರೂರಿ ನಿಂತಿದ್ದ ರಾಹುಲ್ ತ್ರಿಪಾಠಿ ವಿಕೆಟ್ ಹಾರಿಸಿದರು. ಬಳಿಕ ಚೆಂಡು ಕೈಗೆ ಸಿಕ್ಕಿದ್ದು 13ನೇ ಓವರಿನಲ್ಲಿ. ಆಗ ಬೆನ್ ಸ್ಟೋಕ್ಸ್ ವಿಕೆಟ್ ಸಿಕ್ಕಿತು. ಅನಂತರ 18ನೇ ಹಾಗೂ 20ನೇ ಓವರಿನಲ್ಲಿ ಬೌಲಿಂಗ್ ಮುಂದುವರಿಸಿದರು. ಪಂದ್ಯದ ಅಂತಿಮ ಓವರಿನ ಮೊದಲ 3 ಎಸೆತಗಳಲ್ಲಿ ಅಂಕಿತ್ ಶರ್ಮ, ಮನೋಜ್ ತಿವಾರಿ ಹಾಗೂ ಶಾದೂìಲ್ ಠಾಕೂರ್ ವಿಕೆಟ್ ಕಿತ್ತು ಹ್ಯಾಟ್ರಿಕ್ ಪೂರ್ತಿಗೊಳಿಸಿದರು.
ಈ ಪಂದ್ಯದಲ್ಲಿ ಆ್ಯಂಡ್ರೂé ಟೈ ಶೇ. 60ರಷ್ಟು “ನಕಲ್’ ಎಸೆತಗಳನ್ನೇ ಎಸೆದಿದ್ದರು ಹಾಗೂ ಇವು 120 ಕಿ.ಮೀ. ವೇಗವನ್ನು ಹೊಂದಿದ್ದವು. ಐದರಲ್ಲಿ 4 ವಿಕೆಟ್‌ಗಳು ನಕಲ್ ಎಸೆತಗಳಲ್ಲೇ ಬಂದಿದ್ದವು.
“ನಾನು ಬಿಗ್ ಬಾಶ್‌ನಲ್ಲೂ ಹ್ಯಾಟ್ರಿಕ್ ಸಂಪಾದಿಸಿದ್ದೆ. ಆದರೆ ಇಲ್ಲಿ ನನಗೆ ಹ್ಯಾಟ್ರಿಕ್ ಒಲಿಯುತ್ತದೆಂಬ ದೃಢವಾದ ನಂಬಿಕೆ ಇತ್ತು. ರನ್‌ಅಪ್‌ನತ್ತ ತೆರಳುವಾಗ ನಾನು ಯಾವ ರೀತಿಯ ಎಸೆತವಿಕ್ಕಲಿ ಎಂದು ಆಲೋಚಿಸುವುದುಂಟು. ಇಲ್ಲಿ ನಿಧಾನ ಗತಿಯ ಎಸೆತದ ಯೋಜನೆ ಹಾಕಿಕೊಂಡೆ. ಇದು ನೇರವಾಗಿ ಸ್ಟಂಪ್ ಮೇಲೆರಗಿತು…’ ಎಂದು ಹ್ಯಾಟ್ರಿಕ್ ಸಾಧನೆಯ “ರಹಸ್ಯ’ವನ್ನು ಬಿಚ್ಚಿಟ್ಟರು.
“ನನ್ನ ಐಪಿಎಲ್ ಪಾದಾರ್ಪಣೆ ಬಗ್ಗೆ ಬೆಳಗ್ಗೆಯೇ ಕೋಚ್ ಬ್ರಾಡ್ ಹಾಜ್ ತಿಳಿಸಿದರು. ಮೊದಲ ಓವರಿನಲ್ಲೇ ವಿಕೆಟ್ ಕಿತ್ತೆ. ನನ್ನ ಸುದೀರ್ಘ ಕಾಯುವಿಕೆಗೆ ಫಲ ಸಿಕ್ಕಿದೆ ಎಂದು ಭಾವಿಸಿದ್ದೇನೆ’ ಎಂದರು ಆ್ಯಂಡ್ರೂé ಟೈ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.