ಎಂಬಿಬಿಎಸ್ ನೆಕ್ಸ್ಟ್ ಗೆ ಕರ್ನಾಟಕ ಸಹಿತ 9 ರಾಜ್ಯಗಳ ವಿರೋಧ
Team Udayavani, Apr 17, 2017, 9:57 AM IST
ಹೊಸದಿಲ್ಲಿ: ಎಂಬಿಬಿಎಸ್ ಕೋರ್ಸ್ ಮುಗಿಸಿದ ಅನಂತರ “ಡಾಕ್ಟರ್’ ಸ್ಥಾನಮಾನ ಪಡೆ ಯಲು ರಾಷ್ಟ್ರೀಯ ನಿರ್ಗಮನ ಪರೀಕ್ಷೆ (ನೆಕ್ಸ್ಟ್ )ಯಲ್ಲಿ ಉತ್ತೀರ್ಣಗೊಳ್ಳುವುದನ್ನು ಕಡ್ಡಾಯಗೊಳಿ ಸುವ ಕೇಂದ್ರ ಸರಕಾರದ ಪ್ರಸ್ತಾವಕ್ಕೆ ಕರ್ನಾಟಕ ಸಹಿತ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೋರಿರುವ ಪ್ರಶ್ನೆ ಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಉತ್ತರದಿಂದ ಈ ಮಾಹಿತಿ ಸಿಕ್ಕಿದೆ. ಝಾರ್ಖಂಡ್, ಮಹಾರಾಷ್ಟ್ರ, ಬಿಹಾರ, ಕೇರಳ ಸಹಿತ 12 ರಾಜ್ಯಗಳು ಹಾಗೂ 4 ಕೇಂದ್ರಾಡಳಿತ ಪ್ರದೇಶಗಳು ಈ ಪ್ರಸ್ತಾವ ವನ್ನು ಬೆಂಬಲಿಸಿವೆ. ಆದರೆ, ಕರ್ನಾಟಕ, ಆಂಧ್ರ, ಗೋವಾ ಸಹಿತ 9 ರಾಜ್ಯಗಳು ಪರೀಕ್ಷೆಯನ್ನು ವಿರೋಧಿಸಿವೆ ಎಂದು ಸಚಿವಾಲಯ ತಿಳಿಸಿದೆ.
ಏನಿದು ನೆಕ್ಸ್ಟ್?: ಈ ವರೆಗೆ ಐದೂವರೆ ವರ್ಷಗಳ ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿದರೆ ಆತ “ಡಾಕ್ಟರ್’ ಆಗುತ್ತಿದ್ದ. ಆದರೆ ಕೇಂದ್ರ ಆರೋಗ್ಯ ಸಚಿವಾಲಯವು 2016ರ ಡಿ.29ರಂದು ಸಿದ್ಧಪಡಿಸಿರುವ ಭಾರತೀಯ ವೈದ್ಯಕೀಯ ಮಂಡಳಿ (ತಿದ್ದುಪಡಿ) ಮಸೂದೆ 2016ರ ಕರಡು ಹೇಳುವಂತೆ, ವಿದ್ಯಾರ್ಥಿಗಳು ಎಂಬಿಬಿಎಸ್ ಮುಗಿಸಿದ ಅನಂತರ, ವೈದ್ಯನಾಗಬೇಕೆಂದರೆ ನ್ಯಾಷನಲ್ ಎಕ್ಸಿಟ್ ಟೆಸ್ಟ್ (ನೆಕ್ಸ್ಟ್ ) ಎಂಬ ಪರೀಕ್ಷೆ ಬರೆದು ಅದರಲ್ಲಿ ಉತ್ತೀರ್ಣರಾಗಬೇಕು.
ಪರೀಕ್ಷೆ ಬರೆಯಬೇಕಾದ್ದು ಯಾರು?
ಕೇವಲ ಸರಕಾರಿ ಮಾತ್ರವಲ್ಲ ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಮುಗಿಸಿದವರೂ ಈ ಪರೀಕ್ಷೆ ಬರೆಯಬೇಕು. ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಆಯಾ ವೈದ್ಯಕೀಯ ಕಾಲೇಜುಗಳಿಗೆ ದರ್ಜೆಗಳನ್ನು ನೀಡಲಾಗುತ್ತದೆ. ಪ್ರತಿ ಕಾಲೇಜು ವಿದ್ಯಾರ್ಥಿಗಳ ಫಲಿತಾಂಶವನ್ನೂ ಬಹಿರಂಗಗೊಳಿಸಲಾಗುತ್ತದೆ.
ಕೋಟಾ ಮಾಹಿತಿ
ಎಲ್ಲ ಸರಕಾರಿ ವೈದ್ಯ ಕಾಲೇಜುಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಸರಕಾರ/ ಕೇಂದ್ರಾಡಳಿತ ಪ್ರದೇಶಗಳ ವೈದ್ಯಕೀಯ ಅಧಿಕಾರಿಗಳಿಗೆ ಮೀಸಲಿಡಬೇಕು. ಯಾವ ಅಧಿಕಾರಿಯು ಕುಗ್ರಾಮ ಅಥವಾ ಕಷ್ಟಕರ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದಾರೋ ಅವರಷ್ಟೇ ಕೋಟಾ ಪಡೆಯಲು ಅರ್ಹರಾಗಿರುತ್ತಾರೆ ಎನ್ನುತ್ತದೆ ಮಸೂದೆ.
ವಿರೋಧಿಸುವವರ ವಾದವೇನು?
ಭಾರತದಲ್ಲಿ ಎಂಬಿಬಿಎಸ್ ಎನ್ನುವುದೇ ಅತೀ ಕಷ್ಟದ ಕೋರ್ಸ್. ಪರೀಕ್ಷೆಗಳಂತೂ ಕಬ್ಬಿಣದ ಕಡಲೆ. ಪ್ರತಿಭಾ ವಂತರಷ್ಟೇ ಪಾಸಾಗಿ ಈ ಕೋರ್ಸ್‌ಗೆ ಸೇರುತ್ತಾರೆ. ಹೀಗಿರುವಾಗ ಮತ್ತೂಮ್ಮೆ ಅವರನ್ನು ಪರೀಕ್ಷೆಗೊಳ ಪಡಿಸಬೇಕು ಎನ್ನುವ ವಾದ ಸರಿಯಲ್ಲ.
ಇದು ವೈದ್ಯಕೀಯವಾಗಿ ಪದವೀಧರನಾದ ವ್ಯಕ್ತಿಗೆ ವೈದ್ಯನಾಗಿ ಕೆಲಸ ಮಾಡಲು ಅವಕಾಶ ನಿರಾಕರಿಸಿದಂತೆ ಹಾಗೂ ದೌರ್ಜನ್ಯ ಎಸಗಿದಂತೆ. ಈ ಪರೀಕ್ಷೆಯು ಭಾರತದಲ್ಲಿ ಎಂಬಿಬಿಎಸ್ ಪದವೀಧರರ ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ.
ನೆಕ್ಸ್ಟ್ ಜಾರಿಯಾದರೆ, ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಪಡೆಯುವ ವೈದ್ಯ ಪದವಿಗೆ ಅಂಥ ವ್ಯತ್ಯಾಸ ವೇನೂ ಇರುವುದಿಲ್ಲ. ಹಾಗಾಗಿ ಹೆಚ್ಚಿನವರು ವಿದೇಶ ವನ್ನೇ ಆಯ್ಕೆ ಮಾಡಿಕೊಳ್ಳಬಹುದು.
ನೆಕ್ಸ್ಟ್ನಲ್ಲಿ ಪಾಸಾಗದವರು ನಿರುದ್ಯೋಗಿಗಳಾಗುತ್ತಾರೆ. ಖಾಸಗಿ ಆಸ್ಪತ್ರೆಗಳು ಅವರನ್ನು ಕಡಿಮೆ ವೇತನ ಕೊಟ್ಟು ತಾರತಮ್ಯ ಮಾಡುವ ಸಾಧ್ಯತೆಯಿರುತ್ತದೆ.
ರಾಷ್ಟ್ರೀಯ ನಿರ್ಗಮನ ಪರೀಕ್ಷೆಯನ್ನು ಕರ್ನಾಟಕ ವಿರೋಧಿಸಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಕೇಂದ್ರ ಜಾರಿಗೊಳಿಸಿದರೆ ಅದಕ್ಕೆ ವಿರೋಧ ವ್ಯಕ್ತಪಡಿಸುವ ಪ್ರಶ್ನೆ ಉದ್ಭವಿಸಲ್ಲ.
ಡಾ| ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.