ಸಂಗೀತಾ ಕೈಯಲ್ಲಿ ಲೋಡೆಡ್ ಗನ್!
Team Udayavani, Apr 17, 2017, 11:36 AM IST
“ಎರಡನೇ ಸಲ’ ಚಿತ್ರ ದೊಡ್ಡ ಹಿಟ್ ಆಗುತ್ತದೆ, ಈ ಸಿನಿಮಾ ಮೂಲಕ ತನಗೆ ಒಂದಷ್ಟು ಆಫರ್‌ಗಳು ಬರುತ್ತವೆ ಎಂದು ಭಾವಿಸಿಕೊಂಡಿದ್ದ ಸಂಗೀತಾಗೆ ಆ ಸಿನಿಮಾದಿಂದ ಹೇಳಿಕೊಳ್ಳುವಂತಹ ಲಾಭವಾಗಲಿಲ್ಲ. ಸಿನಿಮಾ ಬಗ್ಗೆ, ಸಂಗೀತಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ ಚಿತ್ರ ಮಾತ್ರ ಹೆಚ್ಚು ದಿನ ಚಿತ್ರಮಂದಿರಗಳಲ್ಲಿ ನಿಲ್ಲಲಿಲ್ಲ.
ನಂಬಿಕೆ ಇಟ್ಟ ಚಿತ್ರ ಕೈ ಹಿಡಿಯದೇ ಹೋದ ಬೇಸರ ಸಂಗೀತಾಗೆ ಕಾಡಿದ್ದು ಸುಳ್ಳಲ್ಲ. ಇದೇ ಬೇಸರದಲ್ಲಿ ಸಂಗೀತಾ ಮತ್ತೆ ಕೈಗೆ “ಲೋಡೆಡ್ ಗನ್’ ತಗೊಂಡಿದ್ದಾರೆ! ಹೌದು, ಸಂಗೀತಾ ಭಟ್ ಈಗ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅದು “ಲೋಡೆಡ್ ಗನ್’. ಈ ಚಿತ್ರ ಆರಂಭವಾಗಿದ್ದು “ಎರಡನೇ ಸಲ’ ಬಿಡುಗಡೆಗೆ ಮುನ್ನವಾದರೂ ನೋಟ್ ಬ್ಯಾನ್ ಎಫೆಕ್ಟ್ ಚಿತ್ರತಂಡಕ್ಕೆ ತಟ್ಟಿದ್ದರಿಂದ ಕೆಲ ಚಿತ್ರೀಕರಣ ನಿಲ್ಲಿಸಿದ ಚಿತ್ರತಂಡ ಈಗ ಮತ್ತೆ ಚಿತ್ರೀಕರಣ ಆರಂಭಿಸಿದೆ.
ಈ ಚಿತ್ರದಲ್ಲಿ ಸಂಗೀತಾ ಭಟ್ ನಾಯಕಿಯಾಗಿ ನಟಿಸುತ್ತಿದ್ದು, ಬ್ಲಾಗ್ ಬರೆಯುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ತಾನು ಕಂಡ ಯಾವುದಾದರೂ ಘಟನೆಯ ಸತ್ಯಾಸತ್ಯತೆ ತಿಳಿದುಕೊಂಡು ಆ ಕುರಿತು ತನ್ನ ಬ್ಲಾಗ್‌ನಲ್ಲಿ ಬರೆದುಕೊಳ್ಳುವ ಪಾತ್ರ ಅವರದಂತೆ. ಚಿತ್ರದಲ್ಲಿ ಕಾಮಿಡಿಗೂ ಹೆಚ್ಚಿನ ಆದ್ಯತೆ ಇದ್ದು, ಕನ್ನಡದ ಬಹುತೇಕ ಹಾಸ್ಯ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.
ಪ್ರತಾಪ್ ಪವನ್ ಈ ಚಿತ್ರದ ನಾಯಕ. ತೆಲುಗಿನ ಶಂಕರ್ ನಾರಾಯಣ ರೆಡ್ಡಿ ಎನ್ನುವವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಬಿಟ್ಟರೆ ಸಂಗೀತಾ ಭಟ್ ಈಗ “ದಯವಿಟ್ಟು ಗಮನಿಸಿ’ ಹಾಗೂ “ಕಿಸ್ಮತ್’ ಚಿತ್ರಗಳಿಗೆ ಎದುರು ನೋಡುತ್ತಿದಾರೆ. ಆ ಎರಡೂ ಚಿತ್ರಗಳು ಬಿಡುಗಡೆಗೆ ರೆಡಿಯಾಗಿದ್ದು, ಎರಡಲ್ಲೂ ಸಂಗೀತಾಗೆ ಒಳ್ಳೆಯ ಪಾತ್ರ ಸಿಕ್ಕಿದೆಯಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
MUST WATCH
ಹೊಸ ಸೇರ್ಪಡೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.