ಭವಿಷ್ಯದ ಜತೆ ಥಳಕು: ಜ್ಯೋತಿಷ್ಯದ ಮಾನ ಹರಾಜು
Team Udayavani, Apr 17, 2017, 12:54 PM IST
ಮೈಸೂರು: ಜ್ಯೋತಿಷ್ಯ ಮತ್ತು ಭವಿಷ್ಯ ಎರಡನ್ನೂ ಥಳಕು ಹಾಕುತ್ತಿರುವುದರಿಂದ ಜ್ಯೋತಿಷ್ಯಶಾಸ್ತ್ರದ ಮಾನ ಹರಾಜಾಗುತ್ತಿದೆ ಎಂದು ತುಮಕೂರು ಹಿರೇಮಠದ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿ ಅಭಿಪ್ರಾಯಪಟ್ಟರು. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಮಾಯಕಾರ ಗುರುಕುಲ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಜ್ಯೋತಿಷ್ಯ ಹಾಗೂ ಹಸ್ತ ಸಾಮುದ್ರಿಕ ಸಮ್ಮೇಳನ ಎರಡನೇ ದಿನದಲ್ಲಿ ಕಾರ್ಯಕ್ರಮದ ಮಾತನಾಡಿದರು.
ಹವಾಮಾನ ಇಲಾಖೆ ದೂರದಲ್ಲಿಯೇ ಕುಳಿತು ಇಂತಹ ಪ್ರದೇಶದಲ್ಲಿ ಹೆಚ್ಚು ಮಳೆ ಯಾಗಲಿದೆ. ಉಷ್ಣತೆ ಇಷ್ಟು ಇರಲಿದೆ ಎಂಬ ಮಾಹಿತಿ ನೀಡುತ್ತಾರೆ. ಅದರಂತೆ ಜ್ಯೋತಿಷ್ಯಶಾಸ್ತ್ರ ಗುರು, ಶುಕ್ರ ಹಾಗೂ ಗ್ರಹಮಾನ ವರದಿ ಮಾಡಲಿದೆ. ಈ ದೇಶದಲ್ಲಿ ಲೌಖೀಕ ಹಾಗೂ ಅಲೌಖೀಕ ಅಂಶಗಳ ತವರು ಮನೆಯಾಗಿದ್ದು ಸಾಧ್ಯ, ಅಸಾಧ್ಯಗಳ ನಡುವೆ ಇದ್ದೇವೆ ಆದ್ದರಿಂದ ನಾನು ಜ್ಯೋತಿಷ್ಯ ನಂಬುತ್ತೇನೆ ಭವಿಷ್ಯ ವನ್ನಲ್ಲ ಎಂದು ತಿಳಿಸಿದರು.
ಕಾಲ ಕೆಟ್ಟಿದೆ ಎಂದು ಎಲ್ಲರೂ ಉದ್ಗರಿಸು ತ್ತಾರೆ. ಆದರೆ ಈ ಕಾಲ ಅದ್ಭುತ ವಾಗಿದೆ. 50 ವರ್ಷಗಳ ಹಿಂದೆ ಹಾಗಿತ್ತು ಮುಂದಿನ 50 ವರ್ಷಗಳಲ್ಲಿ ಹೀಗಾಗಲಿದೆ ಎಂದು ಹೇಳುತ್ತಾರೆ. ಆದರೆ, ನಾವು ದಶಕಗಳ ಹಿಂದಕ್ಕೆ ಹಾಗೂ ಮುಂದಕ್ಕೆ ಹೋಗಿ ಜೀವಿಸಲು ಅಸಾಧ್ಯ. ಭೂತಕಾಲದಲ್ಲಿ ನಡೆದ ಭವಿಷ್ಯದಲ್ಲಿ ನಡೆಯಲಿರುವ ವಿಷಯಗಳಿಂದ ನಮಗೆ ಅನುಕೂಲ ಗಳೇನು ಆಗುವುದಿಲ್ಲ.
ಅದಕ್ಕಾಗಿ ಆ ಕಾಲಗಳ ಚಿಂತೆ ತ್ಯಜಿಸಿ ವರ್ತಮಾನದಲ್ಲಿ ಬದುಕುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಈ ದೇಶ ಕ್ಷಮೆ ಹಾಗೂ ಕ್ಷಮತೆಯ ಕೂಡಲ ಸಂಗಮವಾಗಿ ಮತ್ತೆ ತಪ್ಪು ಮಾಡುತ್ತಿರುವ ಪಾಕಿಸ್ಥಾನವನ್ನೇ ಸಹಿಸಿಕೊಳ್ಳುತ್ತಿರುವ ಕ್ಷಮತಾ ವೀರರಾಗಿದ್ದು, ಅಂತಹ ಹಿರಿಮೆ ಮತ್ತು ಗರಿಮೆ ರಕ್ತದಲ್ಲಿಯೇ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವರ್ತಮಾನವನ್ನು ಪ್ರೀತಿಸುವ ನೆರೆಹೊರೆಯ ಕಷ್ಟ ಕಾರ್ಪಣ್ಯಕ್ಕೆ ಸ್ಪಂದಿಸ ಬೇಕು, ಸಮಕಾಲೀನರನ್ನು ಗೌರವಿಸಬೇಕು, ಪ್ರತಿ ರಂಗದಲ್ಲಿ ಒಳ್ಳೆಯವರು ಅನಿಸಿಕೊಳ್ಳು ವಂತಾಗಬೇಕು. ಡಾಕ್ಟರ್, ಒಳ್ಳೆಯ ಡಾಕ್ಟರ್, ಸ್ವಾಮಿ, ಒಳ್ಳೆಯ ಸ್ವಾಮಿ ಅಂತೆಯೇ ಒಳ್ಳೆಯ ಜ್ಯೋತಿಷ್ಯ ಶಾಸ್ತ್ರಜ್ಞರಾಗಿ ಎಂದು ಸಲಹೆ ನೀಡಿದರು.
ಮಾಜಿ ಸಚಿವ ಎಸ್.ಎ. ರಾಮದಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಷಡಾಕ್ಷರಿಸ್ವಾಮಿ ಎಸ್.ಕೃಷ್ಣಕುಮಾರ್ ಬರೆದ ಭಾವ ಭಾವದ ವಿಸ್ಮಯ ಎಂಬ ಜ್ಯೋತಿಷ್ಯ ಶಾಸ್ತ್ರದ ಕೃತಿ ಬಿಡುಗಡೆ ಮಾಡಿದರು. ಪಡುವಲು ವಿರಕ್ತಮಠ ಮಹದೇವಸ್ವಾಮಿ, ಹುಕ್ಕೇರಿ ಮಠದ ಸ್ವಾಮೀಜಿ, ಶಿವರಾತ್ರೀ ಶ್ವರ ಪಂಚಾಂಗ ಕರ್ತರು ಕೆ.ಜಿ. ಪುಟ್ಟ ಹೊನ್ನಯ್ಯ, ಸರ್ಕಾರಿ ಮಹಾರಾಜ ಸಂಸ್ಕೃತ ಮಹಾ ವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ವಿದ್ವಾನ್ ಮಲ್ಲಣ್ಣ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.