ಸಂಗಮದಲ್ಲಿಲ್ಲ ಆದಿಬಣಜಿಗ ಸಮಾವೇಶ

Team Udayavani, Apr 17, 2017, 3:27 PM IST

hub1.jpg

ಹುಬ್ಬಳ್ಳಿ: ಅಖೀಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿಯಿಂದ ಯಾವುದೇ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿಲ್ಲ. ಸಮಾಜದ ಮುಖಂಡ  ಆರ್‌.ವಿ. ಶಂಕರಗೌಡರು ಸುಳ್ಳು ಪ್ರಚಾರ ಮಾಡುವ ಮೂಲಕ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಂಘದ ರಾಜ್ಯಾಧ್ಯಕ್ಷ ಸದಾಶಿವ ಕಾರಡಗಿ ಸುದ್ದಿಗೋಷ್ಠಿಯಲ್ಲಿ  ತಿಳಿಸಿದರು.

ಅಖೀಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ ಸಮಿತಿ 1998ಧಿ-99ನೇ ಸಾಲಿನಲ್ಲಿಯೇ ನೋಂದಣಿಯಾದ ಸಮಿತಿ ಆಗಿದೆ. ಈ ಹಿಂದೆ  ಸಮಾಜದ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ದಿವಟರ ಅವರ ನಿಧನಾನಂತರ ಹಂಗಾಮಿ ಅಧ್ಯಕ್ಷರನ್ನಾಗಿ ಆರ್‌.ವಿ. ಶಂಕರಗೌಡರ ಅವರನ್ನು ಆಯ್ಕೆ ಮಾಡಲಾಗಿತ್ತು.

ಆದರೆ, ಸಮಾಜದವರ ವಿರೋಧ ವ್ಯಕ್ತವಾಗಿದ್ದರಿಂದ ಅವರನ್ನು ವಜಾಗೊಳಿಸಿ, ಎಲ್ಲರ ಸಮ್ಮುಖದಲ್ಲಿ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದನ್ನು  ಒಪ್ಪದ ಆರ್‌.ವಿ. ಶಂಕರಗೌಡರ ಅವರು ತಾವೇ ಅಧ್ಯಕ್ಷರೆಂಬಂತೆ ಸಮಾಜ ಬಾಂಧವರಲ್ಲಿ ತಪ್ಪು ಸುದ್ದಿ ಹಬ್ಬಿಸುತ್ತಾ, ಸಮಾವೇಶ ಮಾಡುತ್ತೇವೆ ಎಂದು ಹಣ ಸಂಗ್ರಹಣೆ  ಮಾಡುತ್ತಿದ್ದಾರೆ.

ಇದರಿಂದ ಸಮಾಜ ಬಾಂಧವರಲ್ಲಿ ತಪ್ಪು ಸಂದೇಶ ರವಾನೆಯಾಗುತ್ತಿದ್ದು ಈ ಕುರಿತು ಹಲವು ಬಾರಿ ಶಂಕರಗೌಡರಿಗೆ ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಶಂಕರಗೌಡರು ಏ. 23ರಂದು ಕೂಡಲಸಂಗಮದಲ್ಲಿ ಅಖೀಲ ಕರ್ನಾಟಕ ವೀರಶೈವ ಆದಿಬಣಜಿಗ ಸಮಾಜ ಕಲ್ಯಾಣ  ಇಲಾಖೆಯಿಂದ ಸಮಾವೇಶ ಮಾಡಲಾಗುತ್ತಿದೆ ಎಂದು ಹೇಳಿಕೊಂಡು ಹಣ ಸಂಗ್ರಹಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಆರ್‌.ವಿ. ಶಂಕರಗೌಡರು ಸ್ವ ಪ್ರತಿಷ್ಠೆಗಾಗಿ  ಸಮಾಜದ ದಿಕ್ಕುತಪ್ಪಿಸುವ ಕಾರ್ಯ ಕೈ ಬಿಡಬೇಕು ಎಂದು ಸಮಿತಿಯ ಎಲ್ಲ ಪದಾಧಿಕಾರಿಗಳು ಒತ್ತಾಯ ಮಾಡಿದ್ದಾಗಿ ಅವರು ತಿಳಿಸಿದರು. ಸಮಿತಿ ಪದಾಧಿಕಾರಿಗಳಾದ ಗಂಗಪ್ಪ ಉಳ್ಳಾಗಡ್ಡಿ, ಗುರುಸಿದ್ದಪ್ಪ ಹವಾಲ್ದಾರ, ಕಲ್ಲಪ್ಪ ಚಿಂಚಲಿ, ರಾಜು ಗುಡಿ, ಬಸವರಾಜ ಪೀರಣ್ಣವರ, ರುದ್ರಪ್ಪ ಉಳ್ಳಾಗಡ್ಡಿ, ಮಂಜು ರೆಡ್ಡಿಗೌಡ್ರ ಇನ್ನಿತರರು ಇದ್ದರು. 

ಟಾಪ್ ನ್ಯೂಸ್

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

basavaraj

Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ

mutalik (2)

B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

ShreeKanth

Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Test Cricket : ಮೆಂಡಿಸ್‌ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ

Nirashritha

Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.