Readers’ Recipe : ಗೋಬಿ ಪಕೋಡ
Team Udayavani, Apr 17, 2017, 11:45 PM IST
ಬೇಕಾಗುವ ಸಾಮಗ್ರಿಗಳು
ಕಾಲಿಫ್ಲವರ್ ಹೂಗೊಂಚಲು – ಒಂದು ಕಪ್
ಕಡ್ಲೆ ಹಿಟ್ಟು – ಒಂದು ಕಪ್
ಕಾಯಿಮೆಣಸು – ಎರಡು
ಕೆಂಪು ಮೆಣಸಿನ ಪುಡಿ – ಒಂದು ಟೀ ಚಮಚ
ಅಜವಾನ- ಒಂದು ಟೀ ಚಮಚ
ಗರಂ ಮಸಾಲಾ – ಒಂದು ಟೀ ಚಮಚ
ಅಡುಗೆ ಸೋಡಾ – ಒಂದು ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ – ಒಂದು ಕಪ್
ನೀರು – ಒಂದು ಕಪ್
ಮಾಡುವ ವಿಧಾನ
ಆರಂಭದಲ್ಲಿ ಕಡ್ಲೆಹಿಟ್ಟಿಗೆ ನೀರನ್ನು ಬೆರೆಸಿ ಅರೆದಪ್ಪವಾದ ಹಿಟ್ಟನ್ನು ಸಿದ್ಧಪಡಿಸಿಟ್ಟುಕೊಳ್ಳಿ.
ಈ ಹಿಟ್ಟಿನಲ್ಲಿ ಗಂಟುಗಳು ಉಂಟಾಗದಂತೆ ಅದನ್ನು ಚೆನ್ನಾಗಿ ಕಲಕಿರಿ.
ಅಜವಾನ, ಕೆಂಪು ಮೆಣಸಿನ ಪುಡಿ, ಉಪ್ಪು, ಅಡುಗೆ ಸೋಡಾ, ಕಾಯಿ ಮೆಣಸು, ಹಾಗೂ ಗರಂ ಮಸಾಲಾವನ್ನು ಇದಕ್ಕೆ ಸೇರಿಸಿರಿ.
ಇವೆಲ್ಲವನ್ನೂ ಚೆನ್ನಾಗಿ ಬೆರೆಸಿರಿ ಹಾಗೂ ಬಳಿಕ ಮಿಶ್ರಣವನ್ನು ಬದಿಗಿರಿಸಿರಿ.
ಈಗ ತವಾದಲ್ಲಿ ಎಣ್ಣೆಯನ್ನು ಬಿಸಿ ಮಾಡಿರಿ. ಎಣ್ಣೆ ಕುದಿಯುವಷ್ಟರ ಮಟ್ಟಿಗೆ ಬಿಸಿಯಾದ ಬಳಿಕ, ಕಾಲಿಫ್ಲವರ್‌ನ ಹೂಗಳನ್ನು ಹಿಟ್ಟಿನಲ್ಲಿ ಹಾಕಿ, ಹಿಟ್ಟು ಅವುಗಳಿಗೆ ಲೇಪನಗೊಳ್ಳುವಂತೆ ಮಾಡಿರಿ.ಇನ್ನು ಹಿಟ್ಟು ಮೆತ್ತಿರುವ ಕಾಲಿಫ್ಲವರ್ ಹೂಗಳನ್ನು ಎಣ್ಣೆಯಲ್ಲಿ ಹಾಕಿರಿ. ಗೋಬಿ ಪಕೋಡವು ಹೊಂಬಣ್ಣಕ್ಕೆ ತಿರುಗುವವರೆಗೆ ಹಾಗೂ ಗರಿಗರಿಯಾಗಿ ಕಂಡುಬರುವಂತಾಗುವವರೆಗೆ ಪಕೋಡಾಗಳನ್ನು ಗಾಢವಾಗಿ ಕರಿಯಿರಿ.
– ಪ್ರಮೀಳಾ, ದೇರೆಬೈಲು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.