ರಾಧಿಕಾ ಮಿಸ್ಸಿಂಗ್
Team Udayavani, Apr 18, 2017, 11:27 AM IST
ಕಳೆದ ವರ್ಷ “ಹೋಮ್ ಸ್ಟೇ’ ಎಂಬ ಹಾರರ್ ಸಿನಿಮಾವೊಂದು ಬಿಡುಗಡೆಯಾಗಿರೋದು ನಿಮಗೆ ಗೊತ್ತಿರಬಹುದು. ಆ ಸಿನಿಮಾವನ್ನು ನಿರ್ದೇಶಿಸಿದ್ದು ಸಂತೋಷ್ ಕೊಡಂಕೇರಿ. ಈಗ ಮತ್ತೆ ಸಂತೋಷ್ ನಿರ್ದೇಶನಕ್ಕೆ ಸಿದ್ಧರಾಗಿದ್ದಾರೆ. ಹೊಸ ಚಿತ್ರದ ತಯಾರಿಯಲ್ಲಿರುವ ಅವರಿಗೆ ಮೊದಲ ಹಂತವಾಗಿ ಅಂದುಕೊಂಡ ಟೈಟಲ್ ಸಿಕ್ಕ ಖುಷಿ ಇದೆ.
ಅಷ್ಟಕ್ಕೂ ಆ ಟೈಟಲ್ ಏನು ಅಂತೀರಾ?. ಅದು “ರಾಧಿಕಾ ಮಿಸ್ಸಿಂಗ್’. ಹೌದು, ಸಂತೋಷ್ “ರಾಧಿಕಾ ಮಿಸ್ಸಿಂಗ್’ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಫೈನಲ್ ಆಗಿದ್ದು ಕಲಾವಿದರ ಆಯ್ಕೆ ನಡೆಯುತ್ತಿದೆ. ಜೂನ್ 15 ರ ನಂತರ ಚಿತ್ರೀಕರಣ ಆರಂಭವಾಗಲಿದೆ.
ಸಹಜವಾಗಿಯೇ ಟೈಟಲ್ ಕೇಳಿದಾಗ ಏನಪ್ಪಾ ಕಥೆ ಎಂಬ ಕುತೂಹಲ ಸಹಜವಾಗಿ ಬರುತ್ತದೆ. ಅದಕ್ಕೆ ನಿರ್ದೇಶಕ ಸಂತೋಷ್ ಉತ್ತರಿಸುತ್ತಾರೆ. “ಚಿತ್ರದ ಕಥೆ ಪಕ್ಕಾ ಯೂತ್ಫುಲ್ ಆಗಿದೆ. ಇಂದಿನ ಟ್ರೆಂಡ್ಗೆ ತಕ್ಕಂತಹ ಕಥೆ ಮಾಡಿದ್ದು, ಆ ಕಥೆಗೆ ಈ ಟೈಟಲ್ ಬೇಕಿತ್ತು. ಹಾಗಾಗಿ ಅದನ್ನಿಟ್ಟಿದ್ದೇವೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಚಿತ್ರದಲ್ಲಿ ಹೊಸ ಮುಖಗಳಿಗೂ ಅವಕಾಶ ಕೊಡುವ ಉದ್ದೇಶ ಸಂತೋಷ್ಗಿದೆ.
ಈ ಹಿಂದೆ ಕನ್ನಡ, ಹಿಂದಿ ಹಾಗೂ ತಮಿಳಿನಲ್ಲಿ “ಹೋಮ್ ಸ್ಟೇ’ ಮಾಡಿದ್ದ ಸಂತೋಷ್ ಈ ಬಾರಿ “ರಾಧಿಕಾ ಮಿಸ್ಸಿಂಗ್’ ಚಿತ್ರವನ್ನು ಕನ್ನಡ ಹಾಗೂ ಮಲಯಾಳಂನಲ್ಲಿ ಮಾಡುತ್ತಿದ್ದಾರೆ. ಈ ಹಿಂದೆ ಶರಣ್ ಅವರ “ಜೈ ಲಲಿತಾ’ ಸಿನಿಮಾ ನಿರ್ಮಿಸಿದ್ದ ಇಂದಿರಾ ಪ್ರೊಡಕ್ಷನ್ಸ್ನಡಿ ಈ ಸಿನಿಮಾ ತಯಾರಾಗುತ್ತಿದೆ. ತಾರಾಗಣ ಸೇರಿದಂತೆ ಇತರ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.