ಡಾ ರಾಜ್ ಹುಟ್ಟುಹಬ್ಬಕ್ಕೆ ಬಂಗಾರದ ಹಾಡುಗಳು
Team Udayavani, Apr 18, 2017, 11:28 AM IST
ಶಿವರಾಜಕುಮಾರ ಅಭಿನಯದ “ಬಂಗಾರ – ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರವು ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವಾದ ಏಪ್ರಿಲ್ 24ಕ್ಕೆ ಬಿಡುಗಡೆಯಾಗಬಹುದು ಎಂದು ಈ ಮುಂಚೆ ಅಂದಾಜಿಸಲಾಗಿತ್ತು. ಆದರೆ, ಚಿತ್ರದ ಕೆಲಸಗಳಲ್ಲಿ ಸ್ವಲ್ಪ ನಿಧಾನವಾದ್ದರಿಂದ, ಚಿತ್ರದ ಬಿಡುಗಡೆ ಮೇ ತಿಂಗಳಿಗೆ ಹೋಗಿದೆ. ಹಾಗಂತ ಶಿವರಾಜಕುಮಾರ್ ಅವರ ಅಭಿಮಾನಿಗಳು ಬೇಸರಗೊಳ್ಳಬೇಕಿಲ್ಲ. ಚಿತ್ರ ಬಿಡುಗಡೆಯಾಗದಿದ್ದರೇನು, ಚಿತ್ರದ ಹಾಡುಗಳು ಅಂದು ಖಂಡಿತಾ ಬಿಡುಗಡೆಯಾಗಲಿದೆ.
ಹೌದು, “ಬಂಗಾರ – ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರಕ್ಕೆ ವಿ. ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿರುವ ಹಾಡುಗಳು ಏಪ್ರಿಲ್ 24ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅನ್ನದಾತ ಸುಖೀಭವ ಎಂಬ ವಿಷಯವನ್ನು ಹೇಳುವುದಕ್ಕೆ ಹೊರಟಿದ್ದಾರಂತೆ ನಿರ್ದೇಶಕ ಯೋಗಿ. “ರೈತ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಅಂತಹ ರೈತ ಯಾಕೆ ಸುಖವಾಗಿರಬಾರದು ಎಂಬ ಕಲ್ಪನೆಯೊಂದಿಗೆ ಮಾಡುತ್ತಿರುವ ಚಿತ್ರ ಇದು. ಒಂದು ಕ್ರಾಂತಿಕಾರಕ ಯೋಚನೆ ಇರುವಂತಹ ಚಿತ್ರ’ ಇದು ಎನ್ನುವ ಯೋಗಿ, ಈ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನು ಅವರೇ ಬರೆದಿದ್ದಾರೆ. ಚಿತ್ರಕ್ಕೆ ಎಂ.ಎಸ್. ರಮೇಶ್ ಅವರ ಸಂಭಾಷಣೆಯಿದೆ.
“ಬಂಗಾರ – ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರದಲ್ಲಿ ಶಿವರಾಜಕುಮಾರ್ ಜೊತೆಗೆ ವಿದ್ಯಾ ಪ್ರದೀಪ್ ನಾಯಕಿಯಾಗಿ ನಟಿಸಿದ್ದು, ಜೊತೆಗೆ ಸಿಕ್ಕಣ್ಣ, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಶಿವರಾಮಣ್ಣ, ಶ್ರೀನಾಥ್, ಸದಾಶಿವ ಬ್ರಹ್ಮಾವರ್, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸುತ್ತಿದ್ದು, ಜೈಆನಂದ್ ಅವರ ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.