ಪೈಜಾಮ ಇರುಳಿಗಷ್ಟೇ ಸೀಮಿತವಲ್ಲ!


Team Udayavani, Apr 19, 2017, 3:45 AM IST

paijama.jpg

“ಉಫ್, ಏನ್‌ ಸೆಖೆ… ಯಾವ ಬಟ್ಟೆ ಹೊಕ್ಕೊಂಡ್ರೂ ಮೈಗೆ ಅಂಟಿಕೊಳ್ಳುತ್ತೆ…’ ಈ ಬಿರುಬೇಸಿಗೆಯಲ್ಲಿ ಹಲವು ಹೆಂಗಸರ ಗೊಣಗಾಟವಿದು. ಈ ಸಂದರ್ಭದಲ್ಲಿಯೇ ಕೆಲವು ಜಾಣೆಯರು, ಪೈಜಾಮಾ ಸೂಟ್‌ ಧರಿಸಿ, ಬೇಸಿಗೆಗೆ ಸೆಡ್ಡು ಹೊಡೆದಿದ್ದಾರೆ. ಅಷ್ಟೇ ಅಲ್ಲೇ, ಪೈಜಾಮಾ ಸೂಟ್‌ನ ಡ್ರೆಸ್‌ ಹೀಗೆಲ್ಲಾ ಸುಂದರವಾಗಿ ಕಾಣಬಹುದು ಎಂದೂ ತೋರಿಸಿಕೊಟ್ಟಿದ್ದಾರೆ…

ರಾತ್ರಿ ಮಲಗುವ ಮುನ್ನ ತೊಡುತ್ತಿದ್ದ ಪಜಾಮಾ (ಪೈಜಾಮ) ಸೂಟ್‌ ಇದೀಗ ಸ್ಪ್ರಿಂಗ್‌- ಸಮ್ಮರ್‌ನ (ವಸಂತ-ಬೇಸಿಗೆ) ಫ್ಯಾಶನ್‌ ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು! ಹೌದು! ಮಹಿಳೆಯರು ಕಾಲರ್‌ ಇರುವ, ಇಡೀ ತೋಳಿನ (ಫ‌ುಲ… ಸ್ಲಿàವ್‌) ಪ್ಲೇನ್‌ ಅಥವಾ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ) ಪಜಾಮಾ ಸೂಟ್‌ಗಳನ್ನು ಆಕರ್ಷಕ ಆಕ್ಸೆಸರೀಸ್‌ ಮತ್ತು ಟೈ- ಅಪ್‌ ಹೀಲ್ಸ… ಜೊತೆ ಧರಿಸಿ ಫ್ಯಾಶನ್‌ ಲೋಕದಲ್ಲಿ ಹೊಸ ಅಲೆ ಆರಂಭಿಸಿ¨ªಾರೆ. ನೆನಪಿರಲಿ – ಚೆಕÕ… ಇರುವ ಅಥವಾ ಪ್ರಿಂಟೆಡ್‌ ಪೈಜಾಮಾ ತೊಡಲೇ ಬೇಡಿ! ಬಣ್ಣ ಆಯ್ಕೆ ಮಾಡುವಾಗಲೂ ಹೊಳೆಯುವ ಬಣ್ಣ ಆಯ್ಕೆ ಮಾಡಬೇಡಿ. ಪೇಸ್ಟಲ… ಶೇvÕ…, ಅಂದರೆ ತಿಳಿ ಬಣ್ಣದ ಬಟ್ಟೆಯನ್ನು ಕೊಂಡುಕೊಳ್ಳಿ.

ಆಕ್ಸೆಸರೀಸ್‌ ಎಂದಾಗ ಬೆಲ್ಟ್, ಬಳೆ, ಸರ, ಮತ್ತಿತರ ವಸ್ತುಗಳು ನೆನಪಾದರೂ ಈ ಸೂಟ್‌ ಜೊತೆ ಬರೀ ಕಿವಿಯೋಲೆ ತೊಟ್ಟರಾಯಿತು. ಅದರಲ್ಲೂ ಡ್ಯಾಂಗ್ಲರ್ ಅಂದರೆ ನೇತಾಡುವ ಕಿವಿಯೋಲೆ ಉತ್ತಮ ಆಯ್ಕೆ. ಡ್ಯಾಂಗ್ಲರ್ನಲ್ಲಿ ಇಂಡಿಯನ್‌ ಡಿಸೈನ್‌ನ ಓಲೆಗಳು ಚೆಂದ. ಅಂದರೆ ಮುತ್ತು, ಹವಳ, ಇತರ ಅಮೂಲ್ಯ ರತ್ನಗಳು, ಕನ್ನಡಿ, ಮಣಿ, ಮುಂತಾದವುಗಳಿಂದ ಮಾಡಿದ ಓಲೆಗಳು.

ಇನ್ನು ಟೈ ಅಪ್‌ ಹೀಲ್ಸ… ಎಂದರೆ ಕಣಕಾಲವರೆಗೆ ದಾರ, ಬಳ್ಳಿ ಅಥವಾ ಸ್ಟ್ರಾಪ್‌ನಿಂದ ಕಟ್ಟಬಹುದಾದ ಎತ್ತರದ ಹೀಲ… ಇರುವ ಪಾದರಕ್ಷೆ. ಪೈಜಾಮಾದ ಕಾಲುಗಳು ಕಣಕಾಲವರೆಗೆ ಮಾತ್ರ ಇರಬೇಕು. ಹಾಗಿದ್ದರೆ ಮಾತ್ರ ಟೈ- ಅಪ್‌ ಹೀಲ್ಸ… ಎದ್ದು ಕಾಣುತ್ತವೆ. ಇಲ್ಲವಾದಲ್ಲಿ ಅವು ಕಾಣುವುದೇ ಇಲ್ಲ! ಹೀಗಾಗಿಬಿಟ್ಟರೆ ಪೈಜಾಮ ತೊಟ್ಟೂ ಪ್ರಯೋಜನವಿಲ್ಲದಂತೆ ಆಗುತ್ತದೆ.

ಈ ಬಟ್ಟೆಗಳನ್ನು ಬೇಸಿಗೆಯಲ್ಲಿ ಆರಾಮದಾಯಕವಾಗಿದ್ದು, ಬೆವರಿನಿಂದ ಮೈಗೆ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಮಹಿಳೆಯರು ಇದನ್ನು ಕೇವಲ ಕ್ಯಾಶುವಲ… ಔಟಿಂಗ್‌ಗೆ ಅಲ್ಲದೆ, ಕಚೇರಿ ಹಾಗು ಪಾರ್ಟಿಗೂ ತೊಡಬಹುದಾಗಿದೆ. ಪೈಜಾಮಾವನ್ನು ಕೊಳ್ಳುವಾಗ ಒಂದು ಸೈಜ… ದೊಡ್ಡದನ್ನೇ ಕೊಂಡರೆ ಉತ್ತಮ. ಏಕೆಂದರೆ ಪೈಜಾಮಾ ಯಾವತ್ತೂ ಸಡಿಲವಾಗಿರಬೇಕೇ ಹೊರತು, ಬಿಗಿಯಾಗಿರಬಾರದು! ಬಿಗಿಯಾಗಿದ್ದರೆ ಇದನ್ನು ಬೇಸಿಗೆಯಲ್ಲಿ ತೊಡುವ ಉದ್ದೇಶವೇ ವಿಫ‌ಲವಾಗುತ್ತದೆ!

ಈ ಲುಕ್‌ ಪಡೆಯಲು ಹರಸಾಹಸ ಏನೂ ಪಡಬೇಕಾಗಿಲ್ಲ. ಏಷ್ಟು ಸರಳವಾಗಿರುತ್ತದೋ ಅಷ್ಟು ಒಳ್ಳೆಯದು. ಮೇಕಪ್‌ ಕೂಡ ಮಿನಿಮಲ… ಅಂದರೆ ಎಷ್ಟು ಕಡಿಮೆ ಹಚ್ಚಿಕೊಳ್ಳುತ್ತೀರೋ ಅಷ್ಟು ಉತ್ತಮ. ಉಟ್ಟ ಬಟ್ಟೆ ಎದ್ದು ಕಾಣಬೇಕು ಎಂದಾಗ ಯಾವತ್ತೂ ಮೇಕಪ್‌ ಸರಳ ಹಾಗು ಮಿತವಾಗಿ ಬಳಸಬೇಕು.

ಈ ಲುಕ್‌ ಜೊತೆ ಪೋನಿ ಟೇಲ… ಹೇರ್‌ಸ್ಟೈಲ್‌ ಮಾಡುವುದು ಒಳ್ಳೆಯದು. ಬೇಸಿಗೆಯ ಸೆಕೆಯ ದೃಷ್ಟಿಯಿಂದಲೂ ಇದು ಉತ್ತಮ. ಮತ್ತು ನೀವು ತೊಟ್ಟಿರುವ ಡ್ಯಾಂಗ್ಲರ್ ಚೆನ್ನಾಗಿಯೂ ಕಾಣಿಸುವುದು. ಪೋನಿ ಟೇಲ… ಕೇಶವಿನ್ಯಾಸ ಮಾಡುವಾಗ ಹೈ ಪೋನಿಯನ್ನು ಆಯ್ಕೆ ಮಾಡಿರಿ. ಲೋ ಪೋನಿ ಕೂಡ ಹಾಕಿಕೊಳ್ಳಬಹುದು, ಆದರೆ ಹೈ ಪೋನಿ ನಿಮ್ಮ ಮುಖಕ್ಕೆ ನೀಡುವಷ್ಟು ಆತ್ಮವಿಶ್ವಾಸವನ್ನು ಲೋ ಪೋನಿ ನೀಡಲಾರದು.

ಈ ದಿರಿಸಿನ ಜೊತೆ ಸ್ಲಿಂಗ್‌ ಬ್ಯಾಗ್‌ ಬದಲಿಗೆ ಕ್ಲಚ್‌ ಬಳಸಿ. ಕ್ಲಚ್‌ ಪರ್ಸುಗಳನ್ನು ಬಳಸುವುದರಿಂದ ಮತ್ತದೇ ಉಪಯೋಗ- ಫೋಕಸ್‌ ನಿಮ್ಮ ಉಡುಪಿನ ಮೇಲೆ ಇರುತ್ತದೆ. ದೊಡ್ಡ ಹ್ಯಾಂಡ್‌ ಬ್ಯಾಗ್‌, ಸ್ಲಿಂಗ್‌ ಬ್ಯಾಗ್‌, ಶೋಲ್ಡರ್‌ ಬ್ಯಾಗ್‌, ಮುಂತಾದವುಗಳು ಈ ಲುಕ್‌ ಜೊತೆ ಚೆನ್ನಾಗಿ ಕಾಣಿಸುವುದಿಲ್ಲ.

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

13-

Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

ನವೆಂಬರ್‌ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.