ಬ್ರಿಟನ್ನಲ್ಲಿ ಜೂ.8ಕ್ಕೆ ಸಾರ್ವತ್ರಿಕ ಚುನಾವಣೆ
Team Udayavani, Apr 19, 2017, 3:45 AM IST
ಲಂಡನ್: ಅಚ್ಚರಿಯ ನಡೆಯೊಂದರಲ್ಲಿ ಬ್ರಿಟನ್ನಲ್ಲಿ ಅವಧಿಪೂರ್ವ ಚುನಾವಣೆಯನ್ನು ಪ್ರಧಾನಿ ಥೆರೇಸಾ ಮೇ ಘೋಷಿಸಿದ್ದಾರೆ. ಈ ಹಿಂದೆ 2020ರ ಮೊದಲು ಚುನಾವಣೆ ಘೋಷಣೆಯನ್ನು ಥೆರೇಸಾ ನಿರಾಕರಿಸುತ್ತಲೇ ಬಂದಿದ್ದರು. ಸದ್ಯ ಅವಧಿ ಪೂರ್ವ ಚುನಾವಣೆಯ ಘೋಷಣೆ ಮಿತ್ರಪಕ್ಷಗಳಲ್ಲಿ, ಪ್ರತಿಪಕ್ಷಗಳಲ್ಲಿ ಅಚ್ಚರಿ ಉಂಟುಮಾಡಿದೆ. ಐರೋಪ್ಯ ಒಕ್ಕೂಟದಿಂದ ಹೊರ ಬರುವ “ಬ್ರೆಕ್ಸಿಟ್’ ಜಾರಿಗೆ ತರುವ ನಿಟ್ಟಿನಲ್ಲಿ ಥೆರೇಸಾ ಈ ಕ್ರಮ ಕೈಗೊಂಡಿದ್ದಾರೆ.
ಸದ್ಯ ಮೇ ಅವರ ಘೋಷಣೆ ಜಾರಿಗೆ ಬರಬೇಕಾದರೆ ಬ್ರಿಟನ್ನ ಕೆಳಮನೆ, ಹೌಸ್ ಆಫ್ ಕಾಮನ್ಸ್ನಲ್ಲಿ ಈ ಪ್ರಸ್ತಾವನೆ ಅಂಗೀಕಾರಗೊಳ್ಳಬೇಕಿದೆ. ಇದು ಬುಧವಾರವೇ ಮಂಡನೆಯಾಗುವ ನಿರೀಕ್ಷೆ ಇದೆ. ಚುನಾವಣೆ ಪ್ರಸ್ತಾಪಕ್ಕೆ ಜಯ ಸಿಗಬೇಕಾದಲ್ಲಿ 650 ಸಂಸದರಲ್ಲಿ 434 ಮಂದಿ ಸಂಸದರು ಪರವಾಗಿ ಮತ ಚಲಾಯಿಸಬೇಕಾಗುತ್ತದೆ.
ಬ್ರಿಟನ್ ಪ್ರಧಾನಿ ಮಾತನಾಡಿ ಪ್ರತಿಪಕ್ಷಗಳು ಬ್ರೆಕ್ಸಿಟ್ ಕುರಿತ ನಮ್ಮ ನಡೆಯನ್ನು ಆಲೋಚನೆಯನ್ನು ಟೀಕಿಸಿವೆ ಮತ್ತು ಸವಾಲು ಹಾಕಿದೆ. ಈ ಸಂದರ್ಭ ನಿಮಗೆ ನಮ್ಮ ನಡೆ ಯನ್ನು ತಡೆಯಲು ನಿಮಗೆ ಅವಕಾಶವಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್ಗೆ ಕ್ಲೀನ್ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.