ಈ ಬಾರಿ ಸಾಮಾನ್ಯ ಮುಂಗಾರು
Team Udayavani, Apr 19, 2017, 3:45 AM IST
– ಭಾರತ ಹವಾಮಾನ ಇಲಾಖೆಯಿಂದ ಮುನ್ಸೂಚನೆ
– ಈ ಬಾರಿ ಶೇ. 96ರಷ್ಟು ಮಳೆಯಾಗುವ ಸಾಧ್ಯತೆ
ಹೊಸದಿಲ್ಲಿ: ರೈತಾಪಿ ವರ್ಗಕ್ಕೆ ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಇದು ಸಂತಸದ ಸುದ್ದಿ. ಈ ಬಾರಿ ಮುಂಗಾರು ಮಳೆ ಉತ್ತಮವಾಗಿರಲಿದೆ. ಶೇ. 96ರಷ್ಟು ದೀರ್ಘಾವಧಿ ಸರಾಸರಿ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆಯ ಮಹಾ ನಿರ್ದೇಶಕ ಕೆ.ಜೆ. ರಮೇಶ್ ಹೇಳಿದ್ದಾರೆ.
ಶೇ. 96ರಿಂದ ಶೇ. 104ರಷ್ಟು ಮಳೆಯಾದರೆ ಅದು ಸಾಮಾನ್ಯ. ಶೇ. 96ಕ್ಕಿಂತ ಕಡಿಮೆ ಇದ್ದರೆ ಅದು ಸಾಮಾನ್ಯಕ್ಕಿಂತ ಕಡಿಮೆ ಅಥವಾ ಕೊರತೆ ಮತ್ತು ಶೇ. 104ರಿಂದ ಶೇ. 110ರ ವರೆಗೆ ಮಳೆಯಾದರೆ ಅದು ಸಾಮಾನ್ಯಕ್ಕಿಂತ ಹೆಚ್ಚು ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಜೂನ್‌ನಿಂದ ಸೆಪ್ಟಂಬರ್ ವರೆಗೆ ಈ ಬಾರಿ ಶೇ. 96ರಷ್ಟು ಮಳೆ ಬೀಳಲಿದೆ ಎಂದು ಅಂದಾಜಿಸುವ ಮೂಲಕ ಹವಾಮಾನ ಇಲಾಖೆ ಸಂತಸದ ಸುದ್ದಿಯನ್ನೇ ನೀಡಿದೆ.
ಕಳೆದ ವರ್ಷ ಭಾರತ ಹವಾಮಾನ ಇಲಾಖೆ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿದೆ ಎಂದು ಅಂದಾಜಿ ಸಿತ್ತು. ಆದರೆ ಈ ನಿರೀಕ್ಷೆ ಸುಳ್ಳಾಗಿ ತಮಿಳುನಾಡು, ಕರ್ನಾಟಕ ಮತ್ತು ಕೇರಳಗಳಲ್ಲಿ ಬರ ಕಂಡು ಬಂದಿತ್ತು.
ಕಳೆದ ಕೆಲವು ದಿನಗಳ ಹಿಂದಷ್ಟೇ ಖಾಸಗಿ ಸ್ಕೈಮ್ಯಾಟ್ ಹವಾಮಾನ ಸಂಸ್ಥೆ ಈ ಬಾರಿ ನಿಗದಿಗಿಂತ ಕಡಿಮೆ
ಮಳೆಯಾಗಲಿದೆ ಎಂದು ಅಂದಾಜಿ ಸಿತ್ತು. ಇದಕ್ಕೆ ಎಲ್‌ನಿನೋ ಕಾರಣ ಎಂದಿತ್ತು. ಆದರೆ ಭಾರತ ಹವಾ ಮಾನ ಇಲಾಖೆ ಹೇಳುವಂತೆ, ಎಲ್‌ನಿನೋ ಪ್ರಭಾವ ಕಾಣಿಸಿಕೊಳ್ಳುವುದು ಜುಲೈ ಅನಂತರ. ಈ ಸಮಯದ ಹೊತ್ತಿಗೆ ಆಗಲೇ ಹೆಚ್ಚು ಕಡಿಮೆ ಅರ್ಧ ಮುಂಗಾರು ಆಗಿರಲಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ
50 crores ಆಮಿಷ ಸುಳ್ಳಿನ ಕಂತೆ; ಸೂಕ್ತ ಸಾಕ್ಷಿ ನೀಡಿ ಇಲ್ಲವೇ ED ತನಿಖೆಗೊಪ್ಪಿಸಿ: ಬಿಜೆಪಿ
MUDA ಹಗರಣ: ನ.23ಕ್ಕೆ ಸಿಎಂ ಮೇಲ್ಮನವಿ ವಿಚಾರಣೆ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.