ಮತ್ತೆ ಫಾರ್ಮ್ಗೆ ಬಂದ ರವಿವರ್ಮ
Team Udayavani, Apr 19, 2017, 11:35 AM IST
“ಮಾಸ್ತಿಗುಡಿ’ ಚಿತ್ರದ ದುರ್ಘಟನೆಯ ನಂತರ ಕಂಗಾಲಾಗಿ ಹೋಗಿದ್ದ ಸಾಹಸ ನಿರ್ದೇಶಕ ರವಿವರ್ಮ, ಈಗ ಕ್ರಮೇಣ ಚೇತರಿಸಿಕೊಂಡು ಕೆಲಸಕ್ಕೆ ವಾಪಸ್ಸಾಗಿದ್ದಾರೆ. “ಮಾಸ್ತಿಗುಡಿ’ ಚಿತ್ರದ ನಂತರ ಕನ್ನಡದಲ್ಲಿ “ಮಫ್ತಿ’ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಿದ ನಂತರ ರವಿವರ್ಮ ಇದೀಗ ಮತ್ತೆ ತೆಲುಗಿಗೆ ಹಾರಿದ್ದಾರೆ.
ಹೌದು, ರವಿವರ್ಮ ಇದೀಗ ಪವನ್ ಕಲ್ಯಾಣ್ ಅವರ 25ನೇ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿಕೊಂಡಿರುವ ಅವರು, ಪವನ್ ಕಲ್ಯಾಣ್ ಚಿತ್ರಕ್ಕೆ ಕೆಲಸ ಮಾಡುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿದ್ದಾರೆ.
ಇದಕ್ಕೂ ಮುನ್ನ ಪವನ್ ಕಲ್ಯಾಣ್ ಅಭಿನಯದಲ್ಲಿ ತ್ರಿವಿಕ್ರಮ್ ಅವರು “ಅತ್ತಾರಿಂಟಿಕಿ ದಾರೇದಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರ ಹಿಟ್ ಆಗಿತ್ತು. ಆ ನಂತರ ಪವನ್ ಕಲ್ಯಾಣ್ ಮತ್ತು ತ್ರಿವಿಕ್ರಮ್ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಎದುರು ಕೀರ್ತಿ ಸುರೇಶ್ ಅಭಿನಯಿಸುತ್ತಿದ್ದು, ಜೊತೆಗೆ ಖುಷೂº, ಅನು ಇಮ್ಯಾನ್ಯುಯಲ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
ಈ ಚಿತ್ರದ ಮೂಲಕ ಅನಿರುದ್ಧ್ ರವಿಚಂದರ್ ತೆಲುಗಿನಲ್ಲಿ ಮೊದಲ ಬಾರಿಗೆ ಕಾಲಿಡುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಕೆಲವು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ರವಿವರ್ಮ, ಇದೇ ಮೊದಲ ಬಾರಿಗೆ ಪವನ್ ಕಲ್ಯಾಣ್ ಅವರ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ.
ಇನ್ನು ಟೈಗರ್ ಶ್ರಾಫ್, ನವಾಜುದ್ದೀನ್ ಸಿದ್ಧೀಕಿ, ನಿಧಿ ಅಗರ್ವಾಲ್ ಮುಂತಾದವರು ನಟಿಸುತ್ತಿರುವ “ಮುನ್ನ ಮೈಖಲ್’ ಎಂಬ ಬಾಲಿವುಡ್ ಚಿತ್ರಕ್ಕೂ ರವಿವರ್ಮ ಫೈಟ್ ಮಾಡಿಸುತ್ತಿದ್ದಾರೆ. ಟೈಗರ್ ಶ್ರಾಫ್ ಹೇಳಿಕೇಳಿ ಸ್ಟಂಟ್ಗಳಿಗೆ ಬಹಳ ಜನಪ್ರಿಯ. ಹಾಗಿರುವಾಗ ಟೈಗರ್ ಮತ್ತು ರವಿವರ್ಮ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.