ದಲಾಯಿ ಭೇಟಿಗೆ ಮುಯ್ಯಿ: ಅರುಣಾಚಲದ 6 ಸ್ಥಳಗಳಿಗೆ ಚೀನ ಹೊಸ ಹೆಸರು


Team Udayavani, Apr 19, 2017, 12:27 PM IST

India-China Flag-700.jpg

ಬೀಜಿಂಗ್‌ : ತನ್ನ ಎಚ್ಚರಿಕೆಯನ್ನು  ಧಿಕ್ಕರಿಸಿ 81ರ ಹರೆಯದ ಟಿಬೇಟಿಯನ್‌ ಧರ್ಮಗುರು ದಲಾಯಿ ಲಾಮಾ ಅವರಿಗೆ ಅರುಣಾಚಲ ಪ್ರದೇಶಕ್ಕೆ 9 ದಿನಗಳ ಭೇಟಿ ನೀಡುವುದಕ್ಕೆ ಭಾರತ ಅವಕಾಶ ಕಲ್ಪಿಸಿಕೊಟ್ಟದ್ದಕ್ಕೆ ಮುಯ್ಯಿ ಎಂಬಂತೆ ಚೀನ ಇದೀಗ ವಿವಾದಿತ ಅರುಣಾಚಲ ಪ್ರದೇಶದ ಮೇಲೆ ತನ್ನ ಸಾರ್ವಭೌಮತ್ವವನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅರುಣಾಚಲ ಪ್ರದೇಶದ ಆರು ಪ್ರಮುಖ ಸ್ಥಳಗಳಿಗೆ ಚೀನಿ, ಟಿಬೆಟಾನ್‌ ಮತ್ತು ರೋಮನ್‌ ಲಿಪಿಯಲ್ಲಿ ಏಕರೂಪತೆಯನ್ನು ಬಿಂಬಿಸುವ ಹೊಸ ಹೆಸರುಗಳನ್ನು ಪ್ರಕಟಿಸಿದೆ. 

ಅರುಣಾಚಲ ಪ್ರದೇಶವು ತನ್ನ ಅವಿಭಾಜ್ಯ ಭೂಭಾಗವಾಗಿರುವ ಟಿಬೆಟ್‌ನ ಭಾಗವಾಗಿದ್ದು ಅದನ್ನು ದಕ್ಷಿಣ ಟಿಬೆಟ್‌ ರಾಜ್ಯವೆಂದು ಚೀನ ಬಣ್ಣಿಸಿದೆ.

ಈ ಹೊಸ ಬೆಳವಣಿಗೆಯನ್ನು ಚೀನದ ಸರಕಾರಿ ಒಡೆತನದ ಗ್ಲೋಬಲ್‌ ಟೈಮ್ಸ್‌ ವರದಿ ಮಾಡಿದೆ. 

ಅರುಣಾಚಲ ಪ್ರದೇಶದ ಆರು ಪ್ರಮುಖ ಪ್ರದೇಶಗಳಿಗೆ ಚೀನ ಇಟ್ಟಿರುವ ಹೊಸ ಹೆಸರುಗಳು ಇಂತಿವೆ : ವೋಗೇನ್‌ಲಿಂಗ್‌, ಮಿಲಾ ರೀ, ಕೊಯಿನಾಬೋì ರೀ, ಮೈನ್‌ಕುಕಾ, ಮೋ ಲಾ ಮತ್ತು ನಾಮ್‌ಕಾಪುಬ್‌ ರೀ.

ಭಾರತ – ಚೀನ ನಡುವಿನ ಈಶಾನ್ಯ ಭಾಗದ ಗಡಿ ವಿವಾದವು 3,488 ಕಿ.ಮೀ. ಉದ್ದದ ನೈಜ ನಿಯಂತ್ರಣ ರೇಖೆಗೆ ಒಳಪಟ್ಟದ್ದಾಗಿದೆ. ಭಾರತವು ತನ್ನದೆಂದು ಹೇಳುವ ಅರುಣಾಚಲ ಪ್ರದೇಶವನ್ನು ಚೀನ ತನ್ನ ಸಾರ್ವಭೌಮತ್ವದ “ದಕ್ಷಿಣ ಟಿಬೆಟ್‌’ ರಾಜ್ಯವೆಂದು ಹೇಳಿಕೊಂಡಿದೆ.

1962ರ ಭಾರತ – ಚೀನ ಯುದ್ಧದ ಸಂದರ್ಭದಲ್ಲಿ ಚೀನವು ತನ್ನ ವಶಕ್ಕೆ ತೆಗೆದುಕೊಂಡ ಅಕ್ಸಾಯ್‌ ಚಿನ್‌ ಪ್ರದೇಶಕ್ಕೆ ಸಂಬಂಧಪಟ್ಟು ಮಾತ್ರವೇ ಉಭಯ ದೇಶಗಳ ನಡುವೆ ವಿವಾದ ಇರುವುದಾಗಿಯೂ ಅರುಣಾಚಲ ಪ್ರದೇಶ ತನ್ನ ಅವಿಭಾಜ್ಯ ಅಂಗವಾಗಿ ಭಾರತ ಅಂದಿನಿಂದ ಇಂದಿನ ತನಕವೂ ಸಾರುತ್ತಲೇ ಬಂದಿದೆ. ಉಭಯ ದೇಶಗಳ ವಿಶೇಷ ಪ್ರತಿನಿಧಿಗಳು ಈ ತನಕ 19 ಸುತ್ತಿನ ಮಾತುಕತೆ ನಡೆಸಿದ್ದು ಗಡಿ ವಿವಾದ ಈಗಲೂ ಕಗ್ಗಂಟಾಗಿಯೇ ಉಳಿದಿದೆ. 

ಟಾಪ್ ನ್ಯೂಸ್

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

north

Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್‌ ಪರೀಕ್ಷೆ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

Iran: ಹಿಜಾಬ್‌ ನಿರಾಕರಿಸಿದರೆ ವಿಶೇಷ ಕ್ಲಿನಿಕ್‌: ಇರಾನ್‌ ತೀರ್ಮಾನಕ್ಕೆ ಆಕ್ರೋಶ

ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್‌

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

Sri Lanka Election Result:ಸಂಸತ್‌ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.