ಬೇಸಿಗೆಯಲ್ಲಿ ರಸ್ತೆ ಬದಿ ಸಸಿಗಳಿಗೆ ನೀರು


Team Udayavani, Apr 19, 2017, 1:13 PM IST

dvg5.jpg

ಹರಪನಹಳ್ಳಿ: ಕಳೆದ ಮೂರು ವರ್ಷದಿಂದ ಸತತವಾಗಿ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ತಾಲೂಕಿನಾದ್ಯಂತ ಕೆರೆ, ಗೋಕಟ್ಟೆ, ಚೆಕ್‌ ಡ್ಯಾಂ ಸೇರಿದಂತೆ ಎಲ್ಲಿಯೂ ಒಂದು ಹನಿ ನೀರು ಸಿಗುತ್ತಿಲ್ಲ. ಜನ, ಜನವಾರು, ಪ್ರಾಣಿ ಪಕ್ಷಿಗಳು ನೀರಿಗಾಗಿ ಪರದಾಟ ನಡೆಸುತ್ತಿವೆ. ಇಂತಹ ಸಮಯದಲ್ಲಿ ಸಸಿಗಳಿಗೆ ನೀರುಣಿಸುವುದು ದುಸ್ಸಾಹಸ ಕೆಲಸವಾಗಿದೆ.

ಆದರೆ ಸ್ಥಳೀಯ ಟಿ.ಎಂ. ಶಿವಶಂಕರ್‌ ಸ್ಮಾರಕ ಟ್ರಸ್ಟ್‌ ಪದಾಧಿ ಧಿಕಾರಿಗಳು ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳಿಗೆ ನೀರುಣಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿ ಹಾಗೂ ನಗರ ಹಸರೀಕರಣ ಯೋಜನೆಯಡಿ 2015-16ನೇ ಸಾಲಿನಲ್ಲಿ ಎರಡು ವರ್ಷ ನೆಟ್ಟಿರುವ 4500 ಸಸಿಗಳಿಗೆ ಎರಡು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಟ್ರಸ್ಟ್‌ ನಿರ್ಧರಿಸಿದೆ. 

ಆಸ್ಟ್ರೇಲಿಯಾದಲ್ಲಿ ಎಂಎಸ್ಸಿ ಕಂಪ್ಯೂಟರ್‌ ಸೈನ್ಸ್‌ ಅಭ್ಯಾಸ ಮಾಡಿರುವ ಟ್ರಸ್ಟ್‌ನ ಕಾರ್ಯದರ್ಶಿ ಟಿ.ಎಂ.ಶಿವಶಂಕರ್‌ ಅವರು ಜನರಲ್ಲಿ ಜಾಗೃತಿ ಮತ್ತು ಪರಿಸರ ಉಳಿವಿಗೆ ಪಣತೊಟ್ಟು ಪಟ್ಟಣದ ಹೊರವಲಯದ ಆನಂತನಹಳ್ಳಿ ಬಳಿ ಇರುವ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌ ಆವರಣದಲ್ಲಿ ಮಂಗಳವಾರ ಸಸಿಗಳಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.

ವಲಯ ಅರಣ್ಯಾಧಿಕಾರಿ ಎಂ.ಎಸ್‌. ಅಬ್ದುಲ್‌ಬಷೀರ್‌ ಮಾತನಾಡಿ, ನಗರ ಹಸರೀಕರಣ ಯೋಜನೆಯಡಿ ಪಟ್ಟಣದ ಪಾಲಿಟೆಕ್ನಿಕ್‌ ಕಾಲೇಜ್‌ ಆವರಣ, ಕೊಟ್ಟೂರು ರಸ್ತೆ, ಆದರ್ಶ ವಿದ್ಯಾಲಯ ಆವರಣ, ಇಂಡಿಯನ್‌ ರಿಜರ್‌ ಬೆಟಲಿಯನ್‌ ವಲಯ, ಕೆಎಚ್‌ಬಿ ಕಾಲೋನಿ, ಟೀಚರ್‌ ಕಾಲೋನಿ, ಎಚ್‌ಪಿಎಸ್‌ ಕಾಲೇಜ್‌ ಆವರಣ ಸೇರಿ ಒಟ್ಟು  4500 ವಿವಿಧ ಬಗೆಯ ಸಸಿಗಳನ್ನು ನೆಡಲಾಗಿದೆ.

ಸಸಿಗಳನ್ನು ಪೋಷಣೆ ಮಾಡುವುದು ಕೇವಲ ಅರಣ್ಯ ಇಲಾಖೆ ಕರ್ತವ್ಯವಲ್ಲ, ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಟಿ.ಎಂ.  ಶಿವಶಂಕರ್‌ ಸ್ಮಾರಕ ಟ್ರಸ್ಟ್‌ನವರು ಮುಂದೆ ಬಂದಿರುವುದು ಶ್ಲಾಘನೀಯ. ಪ್ರತಿಯೊಬ್ಬರೂ 5 ಸಸಿಗಳನ್ನು ದತ್ತು ಪಡೆಯುವಂತೆ ಅವರು ಮನವಿ ಮಾಡಿದರು. 

ಟ್ರಸ್ಟ್‌ನ ಕಾರ್ಯದರ್ಶಿ ಟಿ.ಎಂ. ಶಿವಶಂಕರ್‌ ಮಾತನಾಡಿ, ಅರಣ್ಯ ಇಲಾಖೆ ನೆಟ್ಟಿರುವ ಸಸಿಗಳನ್ನು ಉಳಿಸಲು ಅರಣ್ಯಾಧಿಕಾರಿ ಕೆ.ಕಿರಣ್‌ ಕುಮಾರ್‌ ಸಲಹೆಯಂತೆ ಎರಡು ಟ್ಯಾಂಕರ್‌ ಮೂಲಕ ನೀರುಣಿಸಲು ಮುಂದಾದೆ. ಟ್ರಸ್ಟ್‌ ವತಿಯಿಂದ ಈಗಾಗಲೇ ಉಚಿತ ಆರೋಗ್ಯ ಶಿಬಿರ, ಪಶು ಆರೋಗ್ಯ ಶಿಬಿರ, ಔಷಧಿ ವಿತರಣೆ ಸೇರಿದಂತೆ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಉಪ ಅರಣ್ಯಾಧಿಕಾರಿ ಕೆ.ಕಿರಣ್‌ ಕುಮಾರ್‌, ಚಂದ್ರಶೇಖರಗೌಡ, ಟ್ರಸ್‌ನ ಎ.ವೀರಣ, ಟಿ.ಎಂ.ಸಿ.ಕೋಟ್ರಯ್ಯ, ಪಾಲಿಟೆಕ್ನಿಕ್‌ ಕಾಲೇಜ್‌ ಪ್ರಾಚಾರ್ಯ ಎಂ.ಎಸ್‌.ದೇವರಾಜ್‌, ಟಿ.ಸಿ. ಶ್ರೀಧರ್‌  ಹಾಗೂ ಅರಣ್ಯ ಸಿಬ್ಬಂದಿ ಹಾಜರಿದ್ದರು.  

ಟಾಪ್ ನ್ಯೂಸ್

MNG-Parameshwar

Mangaluru: ದೂರು ಕೊಡಲು ಬರುವವರ ಕಳ್ಳರಂತೆ ನೋಡುವ ಮನಃಸ್ಥಿತಿ ಬದಲಿಸಿಕೊಳ್ಳಿ: ಗೃಹಸಚಿವ

Dharmastala-Sammelana

Dharmasthla: ಕನ್ನಡ ಸಾಹಿತ್ಯ ಸದ್ಯ ಒಡವೆ ಇದ್ದರೂ ಬಡವಿ: ಶತಾವಧಾನಿ ಡಾ| ರಾ.ಗಣೇಶ

MGM-collge-Stamp

Udupi MGM College: ಅಮೃತ ಮಹೋತ್ಸವ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ

UDP–gurantee

Gurantee Scheme: ಸರಕಾರ- ಜನರ ನಡುವೆ ಕೊಂಡಿಯಾಗಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Sunil-kumar

Congress Government: ಸಾಧು-ಸಂತರಿಗೆ ರಕ್ಷಣೆ ಇಲ್ಲ: ಶಾಸಕ ಸುನಿಲ್‌ ಕುಮಾರ್‌

Laxmi-Minister

Udupi: ಚಂದ್ರಶೇಖರನಾಥ ಸ್ವಾಮೀಜಿ ಹೇಳಿದಂತೆ ಬಿಜೆಪಿಗರು ಹೇಳಲಿ: ಸಚಿವೆ ಹೆಬ್ಬಾಳ್ಕರ್‌ ಸವಾಲು

Basruru

Kundapura: ಬಸ್ರೂರು ಅಪ್ಪಣ್ಣ ಹೆಗ್ಡೆಯವರದು ಅಪರೂಪದ ವ್ಯಕ್ತಿತ್ವ: ಡಾ.ಜಿ. ಶಂಕರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

Davanagere: ಗೆಳೆಯನನ್ನೇ ಕೊಲೆ ಮಾಡಿದ ಪ್ರಕರಣ… ಆರೋಪಿಗೆ ಜೀವಾವಧಿ ಶಿಕ್ಷೆ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಮೀಸಲಾತಿಗೆ ಒತ್ತಾಯಿಸಿ ಡಿ.10ರಂದು ಸುವರ್ಣ ಸೌಧಕ್ಕೆ ಮುತ್ತಿಗೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

MNG-Parameshwar

Mangaluru: ದೂರು ಕೊಡಲು ಬರುವವರ ಕಳ್ಳರಂತೆ ನೋಡುವ ಮನಃಸ್ಥಿತಿ ಬದಲಿಸಿಕೊಳ್ಳಿ: ಗೃಹಸಚಿವ

Dharmastala-Sammelana

Dharmasthla: ಕನ್ನಡ ಸಾಹಿತ್ಯ ಸದ್ಯ ಒಡವೆ ಇದ್ದರೂ ಬಡವಿ: ಶತಾವಧಾನಿ ಡಾ| ರಾ.ಗಣೇಶ

MGM-collge-Stamp

Udupi MGM College: ಅಮೃತ ಮಹೋತ್ಸವ ಸಮಾರಂಭದಲ್ಲಿ ವಿಶೇಷ ಅಂಚೆ ಲಕೋಟೆ ಬಿಡುಗಡೆ

UDP–gurantee

Gurantee Scheme: ಸರಕಾರ- ಜನರ ನಡುವೆ ಕೊಂಡಿಯಾಗಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Sunil-kumar

Congress Government: ಸಾಧು-ಸಂತರಿಗೆ ರಕ್ಷಣೆ ಇಲ್ಲ: ಶಾಸಕ ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.