ಇದೀಗ ಬಂದ ಸುದ್ದಿ : ಸೋನಲ್‌ ಮೊದಲ ಚಿತ್ರ ಬಿಡುಗಡೆಯಾಗಿದೆ ! 


Team Udayavani, Apr 21, 2017, 3:45 AM IST

Sonal-Sehgal.jpg

ಸೋನಲ್‌ ಸೆಹಗಲ್‌ ಎಂಬ ನಟಿಯ ಹೆಸರು  ಬಾಲಿವುಡ್‌ನ‌ಲ್ಲಿ ಪದೇ ಪದೇ ಕೇಳಿ ಬರುವುದಿಲ್ಲ. ಆದರೆ, ಯಾವಾಗಲಾದರೊಮ್ಮೆ ಸೋನಲ್‌ ಸುದ್ದಿ ಮಾಡಿದಳೆಂದರೆ ಅದಕ್ಕೆ ಬಲವಾದ ಕಾರಣಗಳಿರುತ್ತವೆ. ಅಷ್ಟಕ್ಕೂ ಯಾರು ಈ ಸೋನಲ್‌ ಸೆಹಗಲ್‌ ಎಂದು ಕೇಳಿದ್ದೀರಾ?

ಈಕೆ ಬಾಲಿವುಡ್‌ನ‌ ಎ ಗ್ರೇಡ್‌ ನಟಿಯಲ್ಲ. ಆಗೊಮ್ಮೆ ಈಗೊಮ್ಮೆ ಬಂದು ಮುಖ ತೋರಿಸುವ ಹೋಗುವ ಅಪರೂಪದ ನಟಿ. ಈಕೆಯ ಮೂಲವಿರುವುದು ಕಿರುತೆರೆಯಲ್ಲಿ. ಹಲವು ಜನಪ್ರಿಯ ಹಿಂದಿ ಧಾರಾವಾಹಿಗಳ ನಾಯಕಿಯೇ ಸೋನಲ್‌. ಹಾಗೆಂದು ಬಾಲಿವುಡ್‌ಗೆ ಹೊಸಬಳು ಎನ್ನುವಂತಿಲ್ಲ. ಮೊದಲ ಚಿತ್ರದಲ್ಲಿ ನಟಿಸಿ 12 ವರ್ಷ ಆಯಿತು. ಯು, ಬೊಮಿÕ ಆ್ಯಂಡ್‌ ಮಿ ಅವಳ ಮೊದಲ ಚಿತ್ರ. ವಿಶೇಷವೆಂದರೆ, ಇದು ಬಿಡುಗಡೆಯಾಗಲೇ ಇಲ್ಲ. ಏಳು ವರ್ಷ ಹಿಂದೆ ಜಾನ್‌ ಅಬ್ರಹಾಂ ಎದುರು ನಾಯಕಿಯಾಗಿ ನಟಿಸಿದ ಆಶಾಯೇ ಸೋನಲ್‌ಗೆ ತುಸು ಹೆಸರು ತಂದುಕೊಟ್ಟ ಸಿನೆಮಾ. ಅಧಿಕೃತವಾಗಿ ಇದು ಅವಳ ಮೊದಲ ಚಿತ್ರ. 

ಅಂದ ಹಾಗೆ ಅವಳನ್ನು ನಾಯಕಿ ಮಾಡಿದ ನಿರ್ದೇಶಕ ನಾಗೇಶ್‌ ಕುಕನೂರ್‌. ಅಂತಹ ಪ್ರಸಿದ್ಧ ನಿರ್ದೇಶಕನ ಚಿತ್ರದಲ್ಲಿ ನಟಿಸಿಯೂ ಸೋನಲ್‌ಗೆ ಮುಂದೆ ಉತ್ತಮ ಅವಕಾಶಗಳು ಸಿಗದಿದ್ದದ್ದು ಅವಳ ದುರಾದೃಷ್ಟ. ರೇಡಿಯೊ, ಜಾನೇ ಕಹಾಂ ಸೇ ಆಯೀ ಹೈ, ಫ್ಯೂಚರ್‌ ತೋ ಬ್ರೈಟ್‌ ಹೈ ಜೀ, ಮಂಟೋಸ್ಥಾನ್‌ ದಮಾದಮ್‌¾ – ಇವೆಲ್ಲ ಸೋನಲ್‌ ನಟಿಸಿದ ಚಿತ್ರಗಳು. ಚಿತ್ರಗಳೇನೋ ಚೆನ್ನಾಗಿದ್ದವು, ಆದರೆ ಎಲ್ಲವೂ ತೋಪಾಗಿದ್ದವು. ಹೀಗಾಗಿ ಸೋನಲ್‌ಳ ಹಿರಿತೆರೆ ಕನಸು ಈಡೇರಲೇ ಇಲ್ಲ. ಇದೀಗ ಸೋನಲ್‌ ಎರಡು ಕಾರಣಗಳಿಗೆ ಸುದ್ದಿಯಾಗಿದ್ದಾಳೆ. ಒಂದು, ಅವಳೇ ಚಿತ್ರ ನಿರ್ದೇಶನದ ತಯಾರಿ ನಡೆಸುತ್ತಿದ್ದಾಳೆ. ಎರಡನೆಯದಾಗಿ ದೇಶವ್ಯಾಪಿ ನಡೆಯುತ್ತಿರುವ ವರ್ಣಬೇಧ ಚರ್ಚೆಯಲ್ಲಿ ಅವಳೂ ಸಹಭಾಗಿಯಾಗಿದ್ದಾಳೆ. ಇದಕ್ಕೊಂದು ಕಾರಣವಿದೆ. 

ಮಾಡೆಲಿಂಗ್‌ ಮಾಡುತ್ತಿದ್ದ ದಿನಗಳಲ್ಲಿ ಸೋನಲ್‌ ಕೂಡ ಯಾವುದೋ ಫೇಸ್‌ಕ್ರೀಮ್‌ಗೆ ರೂಪದರ್ಶಿಯಾಗಿದ್ದಳಂತೆ. ಬಿಳಿ ತ್ವಚೆಯೇ ಸೌಂದರ್ಯ ಎಂದು ಆ ದಿನಗಳಲ್ಲಿ ಜನರನ್ನು ನಂಬಿಸಿದ್ದು ತಪ್ಪು ಎನ್ನುವುದು ಅವಳಿಗೆ ಈಗ ಅರ್ಥವಾಗಿದೆಯಂತೆ. ಹೀಗಾಗಿ, ತನ್ನ ಅಂದಿನ ಜಾಹೀರಾತಿಗೆ ಅವಳು ಈಗ ವಿಷಾದ ವ್ಯಕ್ತಪಡಿಸಿದ್ದಾಳೆ.  ರಾಜಕೀಯ ಕಾರಣಕ್ಕಾಗಿ ಅವಳ ಹೇಳಿಕೆ ಮಹತ್ವ ಪಡೆದುಕೊಂಡು ಜಗತ್ತಿಗೆ ಬಾಲಿವುಡ್‌ನ‌ಲ್ಲಿ ಸೋನಲ್‌ ಸೆಹಗಲ್‌ ಎಂಬ ನಟಿಯೊಬ್ಬಳು ಇದ್ದಾಳೆ ಎಂದು ಗೊತ್ತಾಗಿದೆ. 

ಟಾಪ್ ನ್ಯೂಸ್

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.