ಕುಕ್ಕರ್‌ ಕ್ವಿಕರ್‌


Team Udayavani, Apr 21, 2017, 3:45 AM IST

pressure-cooker.jpg

ಅಡುಗೆ ಮಾಡುವ ಪಾತ್ರೆಗಳಲ್ಲಿ ಕುಕ್ಕರ್‌ ಬಹಳ ಅಗತ್ಯವಾದಂತಹ ಪಾತ್ರೆಯಾಗಿದೆ. ಇಂಧನದ ಉಳಿತಾಯದಲ್ಲಿ ಕುಕ್ಕರ್‌ನ ಪಾತ್ರ ಬಹಳ ಮಹತ್ವವಾದುದು. ಇತ್ತೀಚೆಗೆ ಅಡುಗೆ ಅನಿಲ ತುಟ್ಟಿಯಾಗುತ್ತಿರುವುದರಿಂದ ಕುಕ್ಕರ್‌ ಬಳಸುವುದು ಅತ್ಯಂತ ಅಗತ್ಯವಾಗಿದೆ. ಈಗ ಹೆಚ್ಚಿನ ಮನೆಗಳಲ್ಲಿ ಕುಕ್ಕರ್‌ನ್ನು ಬಳಸುವುದರಿಂದ ಗೃಹಿಣಿಯರಿಗೆ, ಉದ್ಯೋಗಕ್ಕೆ ಹೋಗುವ ಮಹಿಳೆಯರಿಗೆ ಅವರ ಕೆಲಸ ಹೊರೆಯನ್ನು ಕುಕ್ಕರ್‌ ಎಂಬ ಸಾಧನ ಅರ್ಧದಷ್ಟು ಕಡಿಮೆ ಮಾಡಿದೆ. ಕುಕ್ಕರ್‌ ಬಳಸುವುದರಿಂದ ಇಂಧನ ಉಳಿಸುವುದರ ಜೊತೆಗೆ ಸಮಯದ ಉಳಿತಾಯವೂ ಆಗುತ್ತದೆ. ಹಾಗಾಗಿ ಕುಕ್ಕರ್‌ನ ಸರಿಯಾದ ಬಳಕೆಯೂ ಅಷ್ಟೇ ಅಗತ್ಯ. ಕುಕ್ಕರ್‌ ಬಳಸುವಾಗ ಅದರ ಬಗೆಗೆ ತಿಳಿದಿರ‌ಲೇಬೇಕಾದ ಕೆಲವು ಮಾಹಿತಿಗಳು ಇಲ್ಲಿವೆ:

.ಪ್ರಶರ್‌ ಕುಕ್ಕರ್‌ ಖರೀದಿ ಮಾಡುವಾಗ ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅದರ ಸಂಖ್ಯೆಯನ್ನು ಅವಲಂಬಿಸಿ ಕುಕ್ಕರ್‌ ಖರೀದಿ ಮಾಡಬೇಕು. ಮಾಡಬೇಕಾಗಿರುವ ಅಡುಗೆಯ ಪ್ರಮಾಣ ಕಡಿಮೆಯಿದ್ದರೆ ದೊಡ್ಡ ಕುಕ್ಕರನ್ನು ಬಳಸದೆ ಪ್ಯಾನ್‌ ಅಥವಾ ಕಡಿಮೆ ಸಾಮರ್ಥ್ಯದ ಕುಕ್ಕರ್‌ಗಳನ್ನು ಬಳಸಿ.

.ಕುಕ್ಕರ್‌ನ ಗ್ಯಾಸ್ಕೆಟ್‌ ಸಡಿಲವಾಗಿದ್ದರೆ ಅದನ್ನು ಬದಲಾಯಿಸಿ ಹೊಸದನ್ನು ಕೊಂಡುಕೊಳ್ಳಿ. ಇಲ್ಲದಿದ್ದರೆ ಮುಚ್ಚಳದಿಂದ ನೀರು ಹೊರಗೆ ಸೋರಿ ಅಧಿಕ ಇಂಧನ ವ್ಯಯವಾಗುತ್ತದೆ.

.ಕುಕ್ಕರನ್ನು ಗ್ಯಾಸ್‌ ಮೇಲಿಟ್ಟು ಅದರಲ್ಲಿ ಪ್ರಷರ್‌ ಹೋಗಲು ಶುರುವಾದ ಮೇಲಷ್ಟೇ ವೇಯrನ್ನು ಇಟ್ಟರೆ ಒಳ್ಳೆಯದು. ಜೊತೆಗೆ ಕುಕ್ಕರ್‌ನ ಮುಚ್ಚಳದ ಮಧ್ಯದಲ್ಲಿರುವ ರಂಧ್ರದ ನಡುವೆ ಆಹಾರ ಪದಾರ್ಥಗಳು ಸೇರಿ ಮುಚ್ಚಿಹೋಗದಂತೆ ಜಾಗ್ರತೆ ವಹಿಸಿ. 

.ಕುಕ್ಕರ್‌ ಉಪಯೋಗಿಸುವ ಮೊದಲು ಅದರ ಕೆಳಗಿನ ಪಾತ್ರೆಗೆ ನೀರು ಹಾಕುವುದನ್ನು ಮರೆಯಬೇಡಿ. ಒಂದು ವೇಳೆ ಮರೆತುಬಿಟ್ಟರೆ ಕುಕ್ಕರ್‌ನ ಒಳಗಿನ ಅಧಿಕ ಒತ್ತಡದಿಂದ ಇಡೀ ಪಾತ್ರೆಯನ್ನೇ ಉಪಯೋಗಿಸದಿರುವ ಸ್ಥಿತಿ ತಲುಪಬಹುದು.

.ಕುಚ್ಚಲಕ್ಕಿ , ಮಾಂಸ, ಬೇಳೆಕಾಳುಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದರೆ ಅದು ಚೆನ್ನಾಗಿ ಬೇಯುವುದರ ಜೊತೆಗೆ ಗ್ಯಾಸ್‌ನ ಖರ್ಚೂ ಕಡಿಮೆಯಾಗುತ್ತದೆ.

.ಗ್ಯಾಸ್ಕೆಟನ್ನು ಬಳಸಿದ ನಂತರ ಅದನ್ನು ನೀರು ತುಂಬಿದ ಬಕೆಟ್‌ನಲ್ಲಿ ಹಾಕಿಡಿ.

.ಕುಕ್ಕರನ್ನು ಗ್ಯಾಸ್‌ನಲ್ಲಿಟ್ಟ ನಂತರ ಎಷ್ಟು ಹೊತ್ತಾದರೂ ಸೀಟಿ ಬಾರದಿದ್ದರೆ ಮುಚ್ಚಳವನ್ನು ತೆಗೆಯುವ ಗೋಜಿಗೆ ಹೋಗದೆ ಗ್ಯಾಸ್‌ ಆರಿಸಿಬಿಡಿ.

.ಕುಕ್ಕರ್‌ನ ವೇಯrನ್ನು ಕೆಳಗೆ ಬೀಳಿಸದೆ ಎಲ್ಲೆಂದರಲ್ಲಿ ಪಾತ್ರೆಗಳೊಂದಿಗೆ ಇಡದೆ ಜಾಗರೂಕತೆಯಿಂದ ಅದರ ಸ್ಥಾನದಲ್ಲಿಟ್ಟರೆ ಕೂಡಲೇ ಕೈಗೆ ಸಿಗುತ್ತದೆ.

– ಸ್ವಾತಿ

ಟಾಪ್ ನ್ಯೂಸ್

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

1-aaa

PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

Haveri: ಮುಖ್ಯಮಂತ್ರಿಯಾಗುವ ಆಸೆಯಿದೆ, ಆದರೆ…: ಸತೀಶ್‌ ಜಾರಕಿಹೊಳಿ

18-bng

Bengaluru: ಕಂಕಣ ಕಾಲ-2 ಅರಮನೆ ಮೈದಾನದಲ್ಲೂ ಬಜೆಟ್‌ ವಿವಾಹ ಸಾಧ್ಯ!

Maharstra: ಬೈಕ್‌ಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ: 10ಮಂದಿ ಮೃತ್ಯು

Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು

ಯತ್ನಾಳ್‌

Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್‌ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!

1(4

Udupi: ಎಂಜಿಎಂ ವಿದ್ಯೆ ಎಂಬ ಅಮೃತ ನೀಡುತ್ತಿದೆ: ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ

IND VS PAK

Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Guarantee Scheme: ಸರಕಾರದ ಖಜಾನೆ ತುಂಬಲು ಅನಧಿಕೃತ ಲೇಔಟ್ ಸಕ್ರಮಗೊಳಿಸಲಿ:ಜನಾರ್ದನ ರೆಡ್ಡಿ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Madikeri: ಮನೆಯ ಆವರಣದಲ್ಲಿ ಗಾಂಜಾ ಬೆಳೆದ ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.