ಪತಿಯ ನಿವ್ವಳ ಸಂಬಳದ ಶೇ.25ರಷ್ಟು ಜೀವನಾಂಶ ನ್ಯಾಯೋಚಿತ : ಸುಪ್ರೀಂ

Team Udayavani, Apr 21, 2017, 11:13 AM IST

Supreme Court-700.jpg

ಹೊಸದಿಲ್ಲಿ : ಪತಿಯ ತಿಂಗಳ ನಿವ್ವಳ ಸಂಬಳದ ಶೇ.25ರಷ್ಟನ್ನು ಪರಿತ್ಯಕ್ತ ಪತ್ನಿಗೆ ಜೀವನಾಂಶವಾಗಿ ನೀಡುವುದು ನ್ಯಾಯೋಚಿತ ಹಾಗೂ ಪರ್ಯಾಪ್ತ ಎನಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಪತಿಗೆ ವಿಚ್ಛೇದನ ನೀಡಿದ ಬಳಿಕ ಪರಿತ್ಯಕ್ತ ಮಹಿಳೆಯು ಸಮಾಜದಲ್ಲಿ ಘನತೆ -ಗೌರವದಿಂದ ಬಾಳಲು ಪರ್ಯಾಪ್ತ ಎನಿಸುವಷ್ಟು ಪ್ರಮಾಣದ ಜೀವನಾಂಶವನ್ನು ಆಕೆಗೆ ನೀಡಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

“ಗಂಡನ ತಿಂಗಳ ನಿವ್ವಳ ಸಂಬಳದ ಶೇ.25ರಷ್ಟನ್ನು ಆತನ ಪರಿತ್ಯಕ್ತ ಪತ್ನಿಗೆ ಜೀವನಾಂಶವಾಗಿ ನೀಡುವುದು ನ್ಯಾಯೋಚಿತವೂ ಪರ್ಯಾಪ್ತವಾದದ್ದೂ ಆಗಿರುತ್ತದೆ. ಪರಿತ್ಯಕ್ತ ಪತ್ನಿಗೆ ನೀಡುವ ಶಾಶ್ವತ ಜೀವನಾಂಶವು ಉಭಯತರ ಸ್ಥಾನಮಾನಕ್ಕೆ, ಘನತೆ-ಗೌರವಕ್ಕೆ ತಕ್ಕುದಾಗಿರಬೇಕು ಮಾತ್ರವಲ್ಲದೆ ಇದು ಸನ್ನಿವೇಶ – ಪರಿಸ್ಥಿತಿಗೆ ಅನುಗುಣವಾಗಿರಬೇಕು. ಅನೇಕ ವಿಷಯಗಳನ್ನು ಪರಿಗಣಿಸಿ ಕೋರ್ಟ್‌ ದೊರಕಿಸಿಕೊಡುವ  ಜೀವನಾಂಶವು ಸಮರ್ಥನೀಯವಾಗಿರಬೇಕು ಎಂದು ಜಸ್ಟಿಸ್‌ ಆರ್‌ ಭಾನುಮತಿ ಮತ್ತು ಎಂ ಎಂ ಶಾಂತನಗೌಡರ್‌ ಅವರನ್ನು ಒಳಗೊಂಡ ಪೀಠಡವು ನೀಡಿದ ತೀರ್ಪನ್ನು ಉಲ್ಲೇಖೀಸಿ ಟೈಮ್ಸ್‌ ಆಫ್ ಇಂಡಿಯಾ ವರದಿಮಾಡಿದೆ. 

ಹಾಗಿದ್ದರೂ ಪರಿತ್ಯಕ್ತ ಪತ್ನಿಗೆ ಗಂಡನಿಂದ ಜೀವನಾಂಶವನ್ನು ಕೊಡಿಸುವಾಗ ಆಕೆಯ ಮಾಜಿ ಪತಿಗೆ ತನ್ನ ಹೊಸ ಕುಟುಂಬವನ್ನು ನಿಭಾಯಿಸುವುದಕ್ಕೆ ಅವಶ್ಯವಿರುವಷ್ಟು ಆರ್ಥಿಕ ಶಕ್ತಿ ಇರುವುದನ್ನು ಖಾತರಿಪಡಿಸಿಕೊಳ್ಳಬೇಕಾಗುತ್ತದೆ ಎಂದು ಕೋರ್ಟ್‌ ಹೇಳಿತು. 

ಪಶ್ಚಿಮ ಬಂಗಾಲದ ಹೂಗ್ಲಿ ಎಂಬಲ್ಲಿನ ನಿವಾಸಿಯೋರ್ವರು ತಿಂಗಳಿಗೆ 95,527 ರೂ. ವೇತನ ಪಡೆಯುತ್ತಿದ್ದು ಆತನು ತನ್ನ ಪರಿತ್ಯಕ್ತ ಪತ್ನಿ ಹಾಗೂ ತನ್ನ ಪುತ್ರನಿಗೆ ತಿಂಗಳಿಗೆ 2,0,000 ರೂ. ಜೀವನಾಂಶ ಕೊಡಬೇಕೆಂದು ಕೋರ್ಟ್‌ ಹೇಳಿತು. ಇದಕ್ಕೆ ಮೊದಲು ಕಲ್ಕತ್ತಾ ಹೈಕೋರ್ಟ್‌ ತಿಂಗಳಿಗೆ 23,000 ರೂ.ಗಳ ಜೀವನಾಂಶವನ್ನು ಪ್ರಕಟಿಸಿತ್ತು. 

“ಹೈಕೋರ್ಟ್‌ ಜೀವನಾಂಶ ಮೊತ್ತವನ್ನು ನಿರ್ಧರಿಸುವಲ್ಲಿ ಯಾವುದೇ ತಪ್ಪೆಸಗಿಲ್ಲ; ಆದರೆ ವಿಚ್ಛೇದಿತ ವ್ಯಕ್ತಿಯು ಮರು ಮದುವೆಯಾಗಿದ್ದು ಆತನಿಗೆ ತನ್ನ ಹೊಸ ಕುಟುಂಬವನ್ನು ನಡೆಸುವುದಕ್ಕಾಗಿ ನಾವು ಜೀವನಾಂಶ ಮೊತ್ತವನ್ನು 3,000 ರೂ.ಗಳಷ್ಟು ಇಳಿಸಿದ್ದೇವೆ’ ಎಂದು ಸುಪ್ರೀಂ ಕೋರ್ಟ್‌ ಹೇಳಿತು. 

ಟಾಪ್ ನ್ಯೂಸ್

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Kota-Shrinivas

Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.