ಭಾರತವನ್ನು “ಹಿಂದಿ ರಾಷ್ಟ್ರ’ ಮಾಡಲು ಸಿದ್ಧವಾಗಿದೆ ಕೇಂದ್ರ!


Team Udayavani, Apr 21, 2017, 3:47 PM IST

21-ANKAN-1.jpg

ಭಾರತವನ್ನು ಒಂದು ಶಬ್ದದಲ್ಲಿ ಬಣ್ಣಿಸಿ ಎಂದರೆ ಮೊದಲು ಬರುವ ಪದ ವೈವಿಧ್ಯತೆ. ಭಾಷೆ, ಧರ್ಮ, ಆಚಾರ, ವಿಚಾರ, ಆಹಾರ ಹೀಗೆ ಎಲ್ಲದರಲ್ಲೂ ವೈವಿಧ್ಯತೆಯೇ ತುಂಬಿದೆ. ಈ ಕಾರಣಕ್ಕಾಗಿಯೇ ಭಾರತದ ಜೀವಸೆಲೆ ವಿವಿಧತೆಯಲ್ಲಿ ಏಕತೆ ಅನ್ನುವ ಮಂತ್ರದಲ್ಲಿದೆ ಎಂದು ನಾವೆಲ್ಲ ಶಾಲಾ ದಿನಗಳಿಂದಲೂ ಕೇಳುತ್ತ ಬೆಳೆದಿದ್ದೇವೆ. ಆದರೆ ಈ ಎಲ್ಲ ವೈವಿಧ್ಯತೆಯನ್ನು ಪ್ರತಿನಿಧಿಸುವ ವ್ಯವಸ್ಥೆ ಎಂಬಂತಿರುವ ಕೇಂದ್ರ ಸರ್ಕಾರ ಭಾರತದ ವಿವಿಧತೆಯ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಅನ್ನುವ ಪ್ರಶ್ನೆಯನ್ನು ಪದೇ ಪದೆ ಎತ್ತಬೇಕಾದ ಅನಿವಾರ್ಯತೆ ಹಿಂದಿಯೇತರ ಭಾಷಿಕರಿಗೆ ಒದಗಿದೆ. ಅಧಿಕೃತ ಭಾಷೆಯಾಗಿ ಹಿಂದಿಯ ಬಳಕೆ ಹೆಚ್ಚಿಸುವ ಕುರಿತಂತೆ ಇರುವ ಸಂಸತ್‌ ಸದಸ್ಯರ ಸಮಿತಿಯ ಬಹುತೇಕ ಶಿಫಾರಸುಗಳನ್ನು ರಾಷ್ಟ್ರಪತಿಗಳು ಒಪ್ಪುವುದರೊಂದಿಗೆ ಹಿಂದಿಯೇತರರ ಮೇಲೆ ಒತ್ತಾಯದ ಹಿಂದಿ ಹೇರಿಕೆ ಈಗ ಇನ್ನೊಂದು ಹಂತಕ್ಕೆ ತಲುಪಿದೆ. ಇದನ್ನು ಪ್ರಶ್ನಿಸದಿದ್ದರೆ ಕೆಲವೇ ದಶಕಗಳಲ್ಲಿ “ಹಿಂದಿ’ಗಿಂತಲೂ ಪ್ರಾಚೀನವೂ, ಶ್ರೀಮಂತವೂ ಆದ ಅನೇಕ ಭಾಷೆಗಳು ತಮ್ಮ ನೆಲದಲ್ಲೇ ಸೊರಗಿ ಮೂಲೆ ಗುಂಪಾಗುವ ಎಲ್ಲ ಅಪಾಯಗಳಿವೆ.

ಸ್ವಾತಂತ್ರ ಬಂದಾಗಿನಿಂದಲೂ ಎಲ್ಲ ಕೇಂದ್ರ ಸರ್ಕಾರಗಳು ಹಿಂದಿಯ ಬೆನ್ನಿಗೆ ನಿಲ್ಲುತ್ತ ಬಂದಿವೆ. ಇದಕ್ಕೆ ಮುಖ್ಯ ಕಾರಣ ಸಂವಿಧಾನದ ವಿಧಿ 343ರಿಂದ 351ರವರೆಗೆ ಬರೆಯಲಾಗಿರುವ ಕೇಂದ್ರ ಸರ್ಕಾರದ ಭಾಷಾ ನೀತಿ. ಇದರನ್ವಯ ಇಡೀ ದೇಶದಲ್ಲಿ ಎಲ್ಲೆಡೆ ಹಿಂದಿಯನ್ನು ಸ್ಥಾಪಿಸಿ, ಭಾರತವೆಂದರೆ ಹಿಂದಿ ಎಂಬಂತೆ ಮಾರ್ಪಡಿಸುವ ಹೊಣೆಯನ್ನೇ ಕೇಂದ್ರಕ್ಕೆ ನೀಡಲಾಗಿದೆ. ಅದಕ್ಕಾಗಿ ಸಾವಿರಾರು ಕೋಟಿ ತೆರಿಗೆದಾರರ ಹಣವನ್ನು ವರ್ಷವೂ ಕೇಂದ್ರ ಸರ್ಕಾರ ಹಿಂದಿ ಪ್ರಚಾರಕ್ಕೆಂದೇ ಮೀಸಲಿಡುತ್ತ ಬಂದಿದೆ. ಇಂತಹ ಹಿಂದಿ ಪ್ರಚಾರದ ಉದ್ದೇಶವನ್ನು ಜಾರಿಗೆ ತರಲೆಂದೇ ಅಸ್ತಿತ್ವದಲ್ಲಿರುವ “ಅಫಿಶಿಯಲ್‌ ಲ್ಯಾಂಗ್ವೆಜ್‌ ಆ್ಯಕr…’, ಸಂಸತ್‌ ಸದಸ್ಯರ ಸಮಿತಿ, “ಹಿಂದಿ ಪ್ರಚಾರ ಸಭಾ’ ಮುಂತಾದವು ಭಾರತದ ಭಾಷಾ ವೈವಿಧ್ಯತೆಯನ್ನು ಹಂತ ಹಂತವಾಗಿ ನಶಿಸುವಂತೆ ಮಾಡುವಲ್ಲಿ ತಮ್ಮದೇ ಕೊಡುಗೆ ನೀಡುತ್ತಿವೆ. ರಾಷ್ಟ್ರಪತಿಗಳು ಈಗ ಒಪ್ಪಿರುವ ಸಂಸತ್‌ ಸದಸ್ಯರ ಸಮಿತಿಯ 117 ಶಿಫಾರಸುಗಳ ವಿಚಾರಕ್ಕೆ ಬರುವುದಾದರೆ ಅಲ್ಲಿರುವ ಪ್ರತಿಯೊಂದು ಅಂಶವೂ ಭಾರತ ಅಂದರೆ ಹಿಂದಿ ಮತ್ತು ಹಿಂದಿ ಮಾತ್ರ ಅನ್ನುವ ಸಂದೇಶವನ್ನು ಇಡೀ ದೇಶಕ್ಕೆ ಸಾರುವ ಸ್ವರೂಪದಲ್ಲಿವೆ. ಕೆಲವು ಮುಖ್ಯಾಂಶಗಳನ್ನು ಗಮನಿಸಿ.

1) ಸಿ ವಲಯದಲ್ಲಿ ಬರುವ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿರುವ ಸಿಬ್ಬಂದಿ ತಮ್ಮೆಲ್ಲ ಕೆಲಸಗಳನ್ನು ಹಿಂದಿಯಲ್ಲೇ ಮಾಡಲು ಸಾಧ್ಯವಾಗುವಂತೆ ಹಿಂದಿ ಕಲಿಸುವ ತರಬೇತಿಯನ್ನು ಕಾಲ ಮಿತಿಯಲ್ಲಿ ಕೈಗೊಳ್ಳಬೇಕು.ಗಮನಿಸಿ: ಹಿಂದಿಯೇತರ ನುಡಿಯಾಡುವ ರಾಜ್ಯಗಳೆಲ್ಲವೂ ಸಿ ವಲಯದಲ್ಲಿ ಬರುತ್ತವೆ. ಅಲ್ಲಿರುವ ಕೇಂದ್ರ ಸರ್ಕಾರಿ ಕಚೇರಿಗಳು ಜನರಿಗೆ ತಮ್ಮ ಸೇವೆ ನೀಡಲು ಆ ಸಿಬ್ಬಂದಿಗೆ ಅಲ್ಲಿನ ಸ್ಥಳೀಯ ಭಾಷೆಯ ತರಬೇತಿ ನೀಡಬೇಕಿತ್ತಲ್ಲವೇ? 

2) ಪ್ರತಿಯೊಂದು ಕೇಂದ್ರ ಸರ್ಕಾರಿ ಕಚೇರಿಯಲ್ಲೂ ಒಂದು  ಹಿಂದಿ ಹುದ್ದೆಯನ್ನು ಸೃಷ್ಟಿಸಬೇಕು.
ಗಮನಿಸಿ: ಕರ್ನಾಟಕದ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ತುರ್ತಾಗಿ ಬೇಕಿರುವುದು ಕನ್ನಡ ಬಲ್ಲ ಅಧಿಕಾರಗಳ ನೇಮಕ. ಇಲ್ಲಿ ಕಡ್ಡಾಯವಾಗಿ ಹಿಂದಿ ಹುದ್ದೆಯನ್ನು ಸೃಷ್ಟಿಸುವ ಅಗತ್ಯ ಏನಿದೆ? ಇದು ಹೇರಿಕೆಯಲ್ಲವೇ?

3) ಕಂಪ್ಯೂಟರಿನಲ್ಲಿ ಹಿಂದಿ ಬಳಕೆ ಸುಲಭವಾಗಿಸಲು ಒಂದು ಸ್ಟಾಂಡರ್ಡ್‌ ಫಾಂಟ್‌ ರೂಪಿಸಬೇಕು ಮತ್ತು ಕೇಂದ್ರ ಸರ್ಕಾರಿ ಕಚೇರಿಯಲ್ಲಿರುವ ಎಲ್ಲ ಸಾಫ್ಟ್rವೇರುಗಳಲ್ಲೂ ಕೆಲಸ ಮಾಡುವಂತೆ ಮಾಡಬೇಕು.
ಗಮನಿಸಿ: ಕರ್ನಾಟಕದ ಹಳ್ಳಿಯೊಂದರ ಕಚೇರಿಯಲ್ಲಿ ಸಾಫ್ಟ್ ವೇರ್‌ ಹಿಂದಿಯಲ್ಲಿದ್ದರೆ ಅದು ಸಾಮಾನ್ಯ ಕನ್ನಡಿಗನಿಗೆ ಹೇಗೆ ಸಹಾಯ ಮಾಡುತ್ತೆ? ಜನರ ಅನುಕೂಲಕ್ಕೆ ಅನ್ನುವುದಾದರೆ ಅದು ಜನರ ಭಾಷೆಯಲ್ಲಿ ದೊರಕಬೇಕಲ್ಲವೇ?

4) ಸಿಬಿಎಸ್‌ಇ ಮತ್ತು ಕೇಂದ್ರಿಯ ವಿದ್ಯಾಲಯಗಳಲ್ಲಿ ಹತ್ತನೇ ತರಗತಿಯವರೆಗೂ ಹಿಂದಿ ಕಡ್ಡಾಯಗೊಳಿಸಿ.
ಗಮನಿಸಿ: ಕೇಂದ್ರ ಸರ್ಕಾರದ ವರ್ಗಾವಣೆಗೊಳ್ಳುವ ಹು¨ªೆಗಳಲ್ಲಿರುವ ಉದ್ಯೋಗಿಗಳ ಮಕ್ಕಳಿಗೆ ಅನುಕೂಲವಾಗಲಿ ಎಂದು ಹುಟ್ಟಿದ ಸಿಬಿಎಸ್‌ಇ ಇಂದು ತನ್ನ ಆಶಯಗಳಿಗೆ ವಿರುದ್ಧವಾಗಿ ಎಲ್ಲ ಊರುಗಳ ಮೂಲೆ ಮೂಲೆಯಲ್ಲೂ ಸ್ಥಾಪಿತಗೊಳ್ಳುತ್ತಿದೆ. ಇಂಥಲ್ಲಿ ಕಡ್ಡಾಯವಾಗಿ ಕಲಿಸಬೇಕಾದದ್ದು ಆಯಾ ರಾಜ್ಯದ ಭಾಷೆಯನ್ನಲ್ಲವೇ?

5) ಕೆಲವು ಉನ್ನತ ಶಿಕ್ಷಣದ ಸಂಸ್ಥೆಗಳಲ್ಲಿ ಕೇವಲ ಇಂಗ್ಲಿಷ್‌ ಭಾಷಾ ಮಾಧ್ಯಮವಾಗಿದೆ. ಅಲ್ಲೆಲ್ಲ ಹಿಂದಿ ಕಲಿಸುವ ಏರ್ಪಾಡು ಮಾಡಬೇಕು. ಅಲ್ಲಿ ಹಿಂದಿ ಇಲಾಖೆ ಇಲ್ಲದಿದ್ದರೆ, ಕೂಡಲೇ ಸ್ಥಾಪಿಸಬೇಕು.
ಗಮನಿಸಿ: ಉನ್ನತ ಶಿಕ್ಷಣ ಆಯಾ ರಾಜ್ಯ ಭಾಷೆಯಲ್ಲಿ ಸಿಕ್ಕರಲ್ಲವೇ ಹೆಚ್ಚಿನ ಜನರಿಗೆ ಅನುಕೂಲ ಆಗೋದು? ಕನ್ನಡಿಗರಿಗೆ ಇಂಗ್ಲಿಷ್‌, ಹಿಂದಿ ಎರಡೂ ಹೊರಗಿನ ನುಡಿಗಳೇ.

6) ಕೇಂದ್ರ ಸರ್ಕಾರ ಕೊಡುವ ಜಾಹೀರಾತಿನಲ್ಲಿ 50% ಹಣವನ್ನು ಕೇವಲ ಹಿಂದಿಗೆ ಕೊಡಬೇಕು. ಉಳಿದದ್ದು ಇಂಗ್ಲಿಷ್‌ ಮತ್ತು ಪ್ರಾದೇಶಿಕ ಭಾಷೆಗಳಿಗಿರಲಿ.
ಗಮನಿಸಿ: ಕನ್ನಡ ಪತ್ರಿಕೆಗಳಲ್ಲಿ ಹಿಂದಿ ಜಾಹೀರಾತು ಯಾಕೆ ಪ್ರಸಾರವಾಗುತ್ತದೆ ಅನ್ನುವುದು ಅರ್ಥವಾಯಿತೇ?

7) ಒಳ್ಳೆಯ ಇಂಗ್ಲಿಷ್‌ ಪುಸ್ತಕಗಳನ್ನು ಹಿಂದಿಗೆ ಅನುವಾದಿಸುವುದನ್ನು ಉತ್ತೇಜಿಸಬೇಕು. 
ಗಮನಿಸಿ: ಕನ್ನಡ, ತಮಿಳಿಗೆ ಯಾಕೆ ಅನುವಾದಿಸಬಾರದು? ಹಿಂದಿಗೆ ಅನುವಾದಗೊಂಡರೆ ಹಿಂದಿಯೇತರರಿಗೇನು ಲಾಭ?  

8) ಏರ್‌ ಇಂಡಿಯಾ ವಿಮಾನ ಸಂಸ್ಥೆಯ ವೇಳಾಪಟ್ಟಿ ಹಾಗೂ   ಟಿಕೆಟ್‌ ಹಿಂದಿಯಲ್ಲಿರಲಿ. 
ಗಮನಿಸಿ: ಏರ್‌ ಇಂಡಿಯಾ ಬಳಸುವವರೆಲ್ಲ ಬರೀ ಹಿಂದಿ ಭಾಷಿಕರೇ? ಬೆಂಗಳೂರಲ್ಲಿ ಈ ಮಾಹಿತಿ ಕನ್ನಡದಲ್ಲಿರಬೇಕಿತ್ತಲ್ಲವೇ?

9) ಹಿಂದಿ ಬಲ್ಲವರಿಗೆ ಯಾವುದೇ ಅನನುಕೂಲವಾಗದಂತೆ ರೈಲ್ವೆ ಇಲಾಖೆಯ ಟಿಕೆಟ್‌ ಮೇಲೆ ಕಡ್ಡಾಯವಾಗಿ ಹಿಂದಿ ಇರಬೇಕು.
ಗಮನಿಸಿ: 1995ರವರೆಗೂ ಕನ್ನಡದಲ್ಲಿ ರೈಲು ಟಿಕೆಟುಗಳು ಮುದ್ರಿತವಾಗುತ್ತಿದ್ದು, ಈಗ ಅದರ ಜಾಗವನ್ನು ಹಿಂದಿ ಆಕ್ರಮಿಸಿದೆ. ಕನ್ನಡ ಕೇಳಿದರೆ ತಾಂತ್ರಿಕ ಕಾರಣಗಳನ್ನು ಮುಂದೊಡ್ಡುವ ರೈಲ್ವೆ ಇಲಾಖೆ ಹಿಂದಿ ವಿಷಯದಲ್ಲಿ ಮಾತ್ರ ಎಂತಹ ಧಾರಾಳಿ! ಹಿಂದಿಯವರ ಅನುಕೂಲಕ್ಕೆ‌ ಇಷ್ಟು ಕಾಳಜಿ ತೋರುವ ರೈಲ್ವೆ ಇಲಾಖೆಗೆ ಇತರರು ಮಲತಾಯಿ ಮಕ್ಕಳೇ?

10) ಎಲ್ಲ ಪಾಸ್‌ ಪೋರ್ಟ್‌ ಕಚೇರಿಗಳಲ್ಲಿ ಹಿಂದಿಯಲ್ಲಿ ತುಂಬಲಾದ ಅರ್ಜಿಯನ್ನು ಸ್ವೀಕರಿಸಬೇಕು.
ಗಮನಿಸಿ: ಪಾಸ್‌ ಪೋರ್ಟ್‌ ಅರ್ಜಿ ಕನ್ನಡದಲ್ಲಿ ತುಂಬಲು ಯಾಕೆ ಅವಕಾಶವಿಲ್ಲ?

11) ಯುಪಿಎಸ್ಸಿ ಪರೀಕ್ಷೆಗಳನ್ನು ಹಿಂದಿ ಮಾಧ್ಯಮದಲ್ಲಿ ಬರೆಯಲು ಬಿಡುತ್ತಿಲ್ಲ. ಇದನ್ನು ಬದಲಾಯಿಸಿ ಎಲ್ಲ ಪ್ರತಿಭಾವಂತ ಹಿಂದಿ ಭಾಷಿಕ ಪರೀûಾರ್ಥಿಗಳಿಗೆ ಹಿಂದಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. 
ಗಮನಿಸಿ: ಕನ್ನಡ ಮಾಧ್ಯಮದಲ್ಲಿ ಯುಪಿಎಸ್ಸಿ ಎಲ್ಲ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅವಕಾಶ ಯಾಕಿಲ್ಲ? ಇದು ಪ್ರತಿಭಾವಂತ ಕನ್ನಡಿಗರಿಗೆ ಮಾಡಲಾಗುತ್ತಿರುವ ಅನ್ಯಾಯವಲ್ಲವೇ?

12) ಹಿಂದಿ ಮಾತನಾಡಲು ಬರುವ ರಾಷ್ಟ್ರಪತಿ, ಮಂತ್ರಿಗಳು ಹಿಂದಿಯಲ್ಲೇ ಮಾತನಾಡುವಂತೆ ವಿನಂತಿಸಬೇಕು. 
ಗಮನಿಸಿ: ಹಿಂದಿ ಮಾತನಾಡಲು ಬರುವ ನಮ್ಮ ರಾಜ್ಯದ ಅನಂತಕುಮಾರ್‌ ಅವರು ಕರ್ನಾಟಕದಲ್ಲಿ ಇನ್ನು ಮುಂದೆ ಹಿಂದಿಯಲ್ಲೇ ಮಾತನಾಡಬೇಕೇ?

13) ಎಲ್ಲ ವಿಮಾನಗಳಲ್ಲೂ ಮೊದಲು ಹಿಂದಿ ನಂತರ ಇಂಗ್ಲಿಷಿನಲ್ಲಿ ಘೋಷಣೆಗಳನ್ನು ಮಾಡಬೇಕು. 
ಗಮನಿಸಿ: ಬೆಂಗಳೂರು-ಚೆನ್ನೆ ನಡುವಿನ ವಿಮಾನದಲ್ಲಿ ತಮಿಳು, ಕನ್ನಡ ಯಾವುದೂ ಬೇಡ, ಹಿಂದಿ ಇರಲಿ ಅನ್ನುವುದು ಹೇರಿಕೆಯಲ್ಲವೇ? (ಮಾಹಿತಿ ಮೂಲ: goo.gl/44eKtz)
ಈ ಶಿಫಾರಸುಗಳನ್ನು ಗಮನಿಸಿದರೆ ಏನು ಕಾಣಿಸುತ್ತೆ? ಕೇಂದ್ರದ ಗಮನವೆಲ್ಲವೂ ಕೇವಲ ಹಿಂದಿಯ ಪ್ರಚಾರಕ್ಕೆ ಮೀಸಲಾದರೆ ಕನ್ನಡ, ತಮಿಳು, ತೆಲುಗು, ಮರಾಠಿ, ಬೆಂಗಾಲಿ ಮುಂತಾದ ಭಾಷಿಕರು ಭಾರತದ ಪ್ರಜೆಗಳಲ್ಲವೇ? ನಾವು ಎರಡನೆಯ ದರ್ಜೆಯ ಪ್ರಜೆಗಳೇ? ಈ ಭಾಷಾ ಅಸಮಾನತೆಯ ಬಗ್ಗೆ ಕನ್ನಡಿಗರು ಕೂಗೆತ್ತಲೇಬೇಕು, ಪûಾತೀತವಾಗಿ ನಮ್ಮ ಜನಪ್ರತಿನಿಧಿಗಳು ಈ ತಾರತಮ್ಯದ ವಿರುದ್ಧ ದನಿ ಎತ್ತಬೇಕು.

ವಸಂತ ಶೆಟ್ಟಿ

ಟಾಪ್ ನ್ಯೂಸ್

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Naxals-CM-Office

Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ

Sathish-jarakhoili

Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್‌ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

Culture: ಪೋಷಕರ ಕೊರತೆಯಿಂದ ಕಲೆಗಳು ಕಳಾಹೀನವಾಗುತ್ತಿವೆಯೇ?

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್‌: ವಿ.ನಾರಾಯಣನ್‌

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು

naxal-file

Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್‌ ನಿಶ್ಶಬ್ದ

purushotham-bilimale

Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.