ಮನೆ ಬಾಗಿಲಿಗೆ ಬರುತ್ತೆ ಪೆಟ್ರೋಲ್, ಡೀಸೆಲ್ !
Team Udayavani, Apr 22, 2017, 3:45 AM IST
ನವದೆಹಲಿ: ಮುಂದೊಂದು ದಿನ ಅಡುಗೆ ಅನಿಲ ಸಿಲಿಂಡರ್ ಮಾದರಿಯಲ್ಲೇ ಪೆಟ್ರೋಲ್, ಡೀಸೆಲ್ ಕೂಡ ಮನೆ ಬಾಗಿಲಿಗೆ ಬರುತ್ತದೆ! ಕೇಂದ್ರ ಸರ್ಕಾರ ಇಂಥದ್ದೊಂದು ಆಲೋಚನೆಯಲ್ಲಿದೆ.
ತೈಲೋತ್ಪನ್ನ ವಸ್ತುಗಳನ್ನು ಮನೆ ಬಾಗಿಲಿಗೆ ಕಳಿಸುವುದರಿಂದ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಕಿರಿಕಿರಿ ತಪ್ಪಲಿದೆ. ಸಮಯವೂ ಉಳಿತಾಯ ಆಗಲಿದೆ. ಜನರ ಅಗತ್ಯತೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ, ಸಮೀಪದಲ್ಲಿ ಇರುವ ಬಂಕ್‌ಗಳು ಮನೆಬಾಗಿಲಿಗೆ ತಂದು ಕೊಡಲಿವೆ.
ತೈಲ ಸಚಿವಾಲಯ ಈಗಾಗಲೇ ಈ ಬಗ್ಗೆ ತೈಲ ಪೂರೈಕೆ ಕಂಪನಿಗಳ ಜತೆ ಚರ್ಚಿಸಿ ಪ್ರಸ್ತಾವನೆಯನ್ನೂ ಸಲ್ಲಿಸಿರುವ ಸುಳಿವನ್ನು ನೀಡಿದೆ. ಈ ಸಂಬಂಧ ಸಚಿವಾಲಯ ಟ್ವೀಟ್ ಮೂಲಕ ಜನತೆಯ ಅಭಿಪ್ರಾಯ ಸಂಗ್ರಹಕ್ಕೂ ಮುಂದಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ ದೇಶದಲ್ಲಿರುವ 59,595 ಬಂಕ್‌ಗಳಲ್ಲಿ ಪ್ರತಿದಿನ ಹೆಚ್ಚಾ ಕಡಿಮೆ 3.5 ಕೋಟಿ ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್‌ಗಾಗಿ ಸಾಲಿನಲ್ಲಿ ನಿಂತು ವಾಹನಗಳಿಗೆ ತುಂಬಿಸಿಕೊಳ್ಳುತ್ತಾರೆ. ಕನಿಷ್ಠ ಅರ್ಧ ಗಂಟೆಯಾದರೂ ಇದಕ್ಕಾಗಿ ವ್ಯಯಿಸಬೇಕಾಗುತ್ತದೆ. ಕೆಲವೊಂದು ಅಡಚಣೆಗಳು ಉಂಟಾದಲ್ಲಿ ಗಂಟೆಗಟ್ಟಲೆ ವಾಹನದೊಂದಿಗೆ ಕಾದು ನಿಂತಿರಬೇಕಾದ ಸಂದರ್ಭವೂ ಎದುರಾಗುವುದುಂಟು. ಇಂಥ ಸಂದರ್ಭಗಳಲ್ಲಿ ಜಗಳ, ಹೊಯ್‌ಕೈ ನಡೆದ ಉದಾಹರಣೆಗಳೂ ಇದೆ. ಟ್ರಾಫಿಕ್ ಸಮಸ್ಯೆ ತಲೆದೋರಿದ್ದೂ ಉಂಟು. ಇದಕ್ಕೆಲ್ಲ ಬ್ರೇಕ್ ಹಾಕುವ ನಿಟ್ಟಿನಲ್ಲಿ ತೈಲ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ.
ತೈಲ ಪೂರೈಕೆ ಕೇಂದ್ರಗಳಲ್ಲಿ ಡಿಜಿಟಲ್ ವಹಿವಾಟಿನ ಕುರಿತು ಶ್ರೀನಗರದಲ್ಲಿ ಶುಕ್ರವಾರ ನಡೆದ ಸಂಸತ್ ಸಲಹಾ ಸಮಿತಿ ಸಭೆಯಲ್ಲಿ ಈ ವ್ಯವಸ್ಥೆಯ ಆಗು-ಹೋಗುಗಳ ಬಗ್ಗೆ ಚರ್ಚಿಸಲಾಗಿದೆ.
“ತೈಲ ಮಾರುಕಟ್ಟೆ ಕಂಪನಿಗಳಾದ ಐಒಸಿ, ಬಿಪಿಸಿಎಲ್, ಎಚ್‌ಪಿಸಿಎಲ್ ಈಗಾಗಲೇ ನಗದು ರಹಿತ ವಹಿವಾಟಿಗೆ ಶೇ.0.75ರಷ್ಟು ರಿಯಾಯಿತಿ ನೀಡುತ್ತಿದೆ. ಪ್ರತಿದಿನ ನಗದು ರಹಿತ ವಹಿವಾಟಿನಿಂದ 150 ಕೋಟಿ ರೂ.ನಿಂದ 400 ಕೋಟಿ ರೂ.ನಷ್ಟು ಆದಾಯ ಹೆಚ್ಚಿದೆ’ ಎಂದು ಸಚಿವಾಲಯ ಹೇಳಿಕೊಂಡಿದೆ.
ತೈಲ ಪೂರೈಕೆಗೆ ಸಂಬಂಧಿಸಿ ಒಂದಿಷ್ಟು ಬದಲಾವಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಈಗಾಗಲೇ ಮೇ 1ರಿಂದ ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪ್ರಕಟಿಸುವ ನಿರ್ಧಾರ ಕೈಗೊಂಡಿದೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಇದು ತೈಲ ಪೂರೈಕೆ ಕ್ಷೇತ್ರದ ಮೂರನೇ ಮಹತ್ವದ ಪ್ರಯೋಗ ಎನಿಸಿಕೊಂಡಿದೆ.
* 59,595: ದೇಶದಲ್ಲಿರುವ ಒಟ್ಟು ಬಂಕ್‌ಗಳು
* 2500 ಕೋಟಿ ರೂ.: ಪೆಟ್ರೋಲ್, ಡೀಸೆಲ್‌ನಿಂದ ಆಗುವ ಪ್ರತಿ ವರ್ಷದ ವಹಿವಾಟು
* 3.5 ಕೋಟಿ: ಪ್ರತಿನಿತ್ಯ ಬಂಕ್‌ಗಳ ಮುಂದೆ ಕ್ಯೂ ನಿಲ್ಲುವ ಗ್ರಾಹಕರ ಸಂಖ್ಯೆ
* 2016-17ನೇ ಸಾಲಿನಲ್ಲಿ ಬಳಕೆಯಾಗಿರುವ ಪೆಟ್ರೋಲ್ 23.8 ದಶಲಕ್ಷ ಟನ್, ಡೀಸೆಲ್ 76 ದಶಲಕ್ಷ ಟನ್
* 2015-16ನೇ ಸಾಲಿನಲ್ಲಿ ಬಳಕೆಯಾಗಿರುವ ಪೆಟ್ರೋಲ್ 21.8 ದಶಲಕ್ಷ ಟನ್, ಡೀಸೆಲ್ 74.6 ದಶಲಕ್ಷ ಟನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.