ಗುಜರಾತ್‌ ಜಯಕ್ಕೆ ರೈನಾ ನೆರವು

Team Udayavani, Apr 22, 2017, 11:03 AM IST

Gujarath-22-4.jpg

ಕೋಲ್ಕತಾ: ನಾಯಕ ಸುರೇಶ್‌ ರೈನಾ ಅಮೋಘ ಆಟದಿಂದಾಗಿ ಗುಜರಾತ್‌ ಲಯನ್ಸ್‌ ತಂಡವು ಶುಕ್ರವಾರದ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡವನ್ನು 4 ವಿಕೆಟ್‌ಗಳಿಂದ ಸೋಲಿಸಿದೆ. ಕೆಕೆಆರ್‌ ತಂಡದ 187 ರನ್ನಿಗೆ ಉತ್ತರವಾಗಿ ಗುಜರಾತ್‌ ಲಯನ್ಸ್‌ ತಂಡವು 18.2 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 188 ರನ್‌ ಗಳಿಸಿ ಜಯಭೇರಿ ಬಾರಿಸಿದೆ. ಇದು ಗುಜರಾತ್‌ ತಂಡದ ಎರಡನೇ ಗೆಲುವು ಆಗಿದೆ. ಆರನ್‌ ಫಿಂಚ್‌ ಮತ್ತು ಬ್ರೆಂಡನ್‌ ಮೆಕಲಮ್‌ ಮೊದಲ ವಿಕೆಟಿಗೆ 3.3 ಓವರ್‌ಗಳಲ್ಲಿ 42 ರನ್‌ ಪೇರಿಸುವ ಮೂಲಕ ಉತ್ತಮ ಆರಂಭ ಒದಗಿಸಿದರು. ಫಿಂಚ್‌ 15 ಎಸೆತಗಳಲ್ಲಿ 31 ರನ್‌ ಹೊಡೆದರೆ ಮೆಕಲಮ್‌ 17 ಎಸೆತಗಳಿಂದ 33 ರನ್‌ ಗಳಿಸಿದರು. ಜವಾಬ್ದಾರಿ ಅರಿತು ಆಡಿದ ರೈನಾ 46 ಎಸೆತಗಳಿಂದ 84 ರನ್‌ ಸಿಡಿಸಿ ತಂಡದ ಗೆಲುವು ಖಚಿತಪಡಿಸಿದರು. 9 ಬೌಂಡರಿ ಬಾರಿಸಿದ ಅವರು 4 ಸಿಕ್ಸರ್‌ ಸಿಡಿಸಿ ರಂಜಿಸಿದರು.

ಈ ಮೊದಲು ಟಾಸ್‌ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಕೋಲ್ಕತಾ ತಂಡವು ಸ್ಫೋಟಕ ಆರಂಭ ಪಡೆಯಿತು. ಸುನೀಲ್‌ ನಾರಾಯಣ್‌ ಅವರ ಸ್ಫೋಟಕ ಆಟದಿಂದಾಗಿ ಕೆಕೆಆರ್‌ ತಂಡವು ಕೇವಲ 3.2 ಓವರ್‌ಗಳಲ್ಲಿ ಮೊದಲ ವಿಕೆಟಿಗೆ 45 ರನ್‌ ಪೇರಿಸಿತು. ಇದರಲ್ಲಿ ನಾರಾಯಣ್‌ ಪಾಲು 42 ರನ್‌. ವೇಗದ ಅರ್ಧಶತಕ ಸಿಡಿಸುವ ಸೂಚನೆಯಿತ್ತ ನಾರಾಯಣ್‌ 17 ಎಸೆತ ಎದುರಿಸಿ 42 ರನ್ನಿಗೆ ಔಟಾದರು. 9 ಬೌಂಡರಿ ಹೊಡೆದ ಅವರು 1 ಸಿಕ್ಸರ್‌ ಬಾರಿಸಿದರು. ಗಂಭೀರ್‌ ಮತ್ತು ಉತ್ತಪ್ಪ ಜವಾಬ್ದಾರಿಯಿಂದ ಆಡಿ ತಂಡದ ಮೊತ್ತ ಏರಿಸಲು ನೆರವಾದರು. ಅವರಿಬ್ಬರು ದ್ವಿತೀಯ ವಿಕೆಟಿಗೆ 69 ರನ್‌ ಪೇರಿಸಿದ್ದರು. ಗಂಭೀರ್‌ 33 ರನ್‌ ಗಳಿಸಿ ಔಟಾದರೆ ಉತ್ತಪ್ಪ ಬಿರುಸಿನ ಆಟವಾಡಿ 48 ಎಸೆತಗಳಿಂದ 72 ರನ್‌ ಹೊಡೆದರು. 8 ಬೌಂಡರಿ ಮತ್ತು 2ಸಿಕ್ಸರ್‌ ಬಾರಿಸಿದ ಅವರು ತಂಡ ಉತ್ತಮ ಸ್ಥಿತಿಗೆ ತಲುಪಲು ನೆರವಾದರು. ಉತ್ತಪ್ಪ ಔಟಾದ ಬಳಿಕ ತಂಡದ ರನ್‌ವೇಗ ಕುಸಿಯಿತು. ಅಂತಿಮವಾಗಿ ತಂಡ 5 ವಿಕೆಟಿಗೆ 187 ರನ್‌ ಗಳಿಸಿತು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಸುನೀಲ್‌ ನಾರಾಯಣ್‌ ಸಿ ಫಾಕ್ನರ್‌ ಬಿ ರೈನಾ    42
ಗೌತಮ್‌ ಗಂಭೀರ್‌    ಸಿ ರೈನಾ ಬಿ ಫಾಕ್ನರ್‌    33
ರಾಬಿನ್‌ ಉತ್ತಪ್ಪ ಸಿ ಮೆಕಲಮ್‌ ಬಿ ಕುಮಾರ್‌    72
ಮನೀಷ್‌ ಪಾಂಡೆ ಬಿ ಬಾಸಿಲ್‌ ಥಂಪಿ    24
ಯೂಸುಫ್ ಪಠಾಣ್‌ ಔಟಾಗದೆ    11
ಸೂರ್ಯ ಕೆ. ಯಾದವ್‌ ರನೌಟ್‌    1
ಶಕಿಬ್‌ ಅಲ್‌ ಹಸನ್‌ ಔಟಾಗದೆ    1
ಇತರ:   3

ಒಟ್ಟು (20 ಓವರ್‌ಗಳಲ್ಲಿ 5 ವಿಕೆಟಿಗೆ)    187

ವಿಕೆಟ್‌ ಪತನ: 1-45, 2-114, 3-169, 4-184, 5-186 

ಬೌಲಿಂಗ್‌:
ಪ್ರವೀಣ್‌ ಕುಮಾರ್‌   2-0-24-1
ಜೇಮ್ಸ್‌ ಫಾಕ್ನರ್‌    4-0-38-1
ಬಾಸಿಲ್‌ ಥಂಪಿ    4-0-44-1
ಸುರೇಶ್‌ ರೈನಾ    2-00-11-1
ಧವಳ್‌ ಕುಲಕರ್ಣಿ    2-0-23-0
ರವೀಂದ್ರ ಜಡೇಜ    4-0-31-0
ಡ್ವೇನ್‌ ಸ್ಮಿತ್‌    2-0-14-0

ಗುಜರಾತ್‌ ಲಯನ್ಸ್‌
ಆರನ್‌ ಫಿಂಚ್‌    ಸಿ ಪಾಂಡೆ ಬಿ ನೈಲ್‌    31
ಬ್ರೆಂಡನ್‌ ಮೆಕಲಮ್‌    ಸಿ ಪಾಂಡೆ ಬಿ ವೋಕ್ಸ್‌    33
ಸುರೇಶ್‌ ರೈನಾ    ಸಿ ಪಾಂಡೆ ಬಿ ಕುಲದೀಪ್‌    84
ದಿನೇಶ್‌ ಕಾರ್ತಿಕ್‌    ಸಿ ಗಂಭೀರ್‌ ಬಿ ನೈಲ್‌    2
ಇಶಾನ್‌ ಕಿಶನ್‌    ಸಿ ಉಮೇಶ್‌ ಬಿ ಕುಲದೀಪ್‌    4
ಡ್ವೇನ್‌ ಸ್ಮಿತ್‌    ಬಿ ಉಮೇಶ್‌    5
ರವೀಂದ್ರ ಜಡೇಜ    ಔಟಾಗದೆ    19
ಜೇಮ್ಸ್‌ ಫಾಕ್ನರ್‌    ಔಟಾಗದೆ    4

ಇತರ:    5
ಒಟ್ಟು (18.2 ಓವರ್‌ಗಳಲ್ಲಿ 6 ವಿಕೆಟಿಗೆ)    188

ವಿಕೆಟ್‌ ಪತನ: 1-42, 2-73, 3-81, 4-115, 5-122, 6-180

ಬೌಲಿಂಗ್‌:
ಶಕಿಬ್‌ ಅಲ್‌ ಹಸನ್‌      3-0-31-0
ಸುನೀಲ್‌ ನಾರಾಯಣ್‌  4-0-42-0
ನಥನ್‌ ಕೌಲ್ಟರ್‌ ನೈಲ್‌  3.2-0-41-2
ಕ್ರಿಸ್‌ ವೋಕ್ಸ್‌             2-0-20-1
ಕುಲದೀಪ್‌ ಯಾದವ್‌    4-0-33-2
ಉಮೇಶ್‌ ಯಾದವ್‌     2-0-17-1

ಟಾಪ್ ನ್ಯೂಸ್

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.