ಉಣಕಲ್ ಕೆರೆ ಮತ್ತೆ ನಿರ್ಲಕ್ಷ್ಯ!
Team Udayavani, Apr 22, 2017, 2:14 PM IST
ಹುಬ್ಬಳ್ಳಿ: ಉಣಕಲ್ ಕೆರೆ ಜಿಲ್ಲಾಡಳಿತದಿಂದ ಮಹಾನಗರ ಪಾಲಿಕೆ ಸುಪರ್ದಿಗೆ ಬಂದಿದ್ದು, ಕೆರೆಯನ್ನು ಅಂತರಗಂಗೆ (ಜಲಕಳೆ) ಮುಕ್ತಗೊಳಿಸಲು ಪಾಲಿಕೆ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಹೊಲ-ಗದ್ದೆಗಳಲ್ಲಿ ಮಳೆ ಇಲ್ಲದೇ ಬೆಳೆ ಒಣಗಿದೆ, ಆದರೆ ಉಣಕಲ್ ಕೆರೆಯಲ್ಲಿ ಮಾತ್ರ ಜಲಕಳೆ ಬೆಳೆಯುತ್ತಲೇ ಇದೆ.
ಅಂತರ್ಜಲ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಉಣಕಲ್ ಕೆರೆ ಮತ್ತೆ ನಿರ್ಲಕ್ಷ್ಯಕ್ಕೊಳಗಾಗಿದ್ದು, ಕೆರೆಯಾದ್ಯಂತ ಜಲಕಳೆ ವ್ಯಾಪಿಸುತ್ತಿದೆ. ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳ ಆಗ್ರಹದಿಂದ ಕಳೆದ ವರ್ಷ ಮೇ 18ರಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಉಣಕಲ್ ಕೆರೆಗೆ ಭೇಟಿ ನೀಡಿದ್ದರು.
ಕೆರೆಯಲ್ಲಿನ ಜಲಕಳೆ ತೆಗೆಯುವ ಕಾರ್ಯವನ್ನು ಹೈದರಾಬಾದ್‌ನ ಕ್ಲೀನ್ ಟೆಕ್ ಸಂಸ್ಥೆಗೆ ವಹಿಸಿಕೊಡಲಾಗಿತ್ತು. 2016 ಜೂನ್ 10ರಂದು ನೀರಿನಲ್ಲಿನ ಕಳೆಯನ್ನು ತೆಗೆಯುವ ಕ್ರೇನ್ ಹೊಂದಿದ ಬೋಟ್ ಯಂತ್ರದಿಂದ ಜಲಕಳೆ ತೆರವು ಕಾರ್ಯ ಆರಂಭಿಸಲಾಯಿತು. ಆದರೆ 5-6 ದಿನಗಳ ನಂತರ ತಾಂತ್ರಿಕ ತೊಂದರೆಯಿಂದ ಯಂತ್ರ ಸ್ಥಗಿತಗೊಂಡಿತು.
ಕೆಲ ದಿನಗಳವರೆಗೆ ಮತ್ತೆ ಪಾಲಿಕೆ ಸಿಬ್ಬಂದಿ ಜಲಕಳೆ ಅಂತರಗಂಗೆಯನ್ನು ತೆಗೆದು ಹಾಕಿದ್ದರು. ಆದರೆ ಈ ಪ್ರಕ್ರಿಯೆ ಹೆಚ್ಚು ದಿನ ನಡೆಯಲಿಲ್ಲ. ಆದರೆ ಮತ್ತೆ ಈಗ ಜಲಕಳೆ ಹಬ್ಬುತ್ತಿದೆ.ಕೆರೆಯ ಸೌಂದರ್ಯಕ್ಕೆ ಹಾನಿ ಮಾಡುತ್ತಿದೆ. ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಉಣಕಲ್ ಕೆರೆಯನ್ನು ಮಾದರಿ ಕೆರೆಯಾಗಿ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಕಳೆದ ವರ್ಷ ಹೇಳಿಕೆ ನೀಡಿದ್ದರು.
ನವನಗರ, ಭೈರಿದೇವರಕೊಪ್ಪ ಭಾಗದಿಂದ ನಿರಂತರ ಕೊಳಚೆ ಹರಿದು ಬಂದು ಉಣಕಲ್ ಕೆರೆ ಸೇರುತ್ತಿರುವುದರಿಂದ ಜಲಕಳೆ ಬೆಳೆಯುತ್ತಿದೆ. ಕೊಳಚೆ ನೀರು ಕೆರೆಗೆ ಸೇರದಂತೆ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಸ್ಕರಣಾ ಘಟಕ ಆರಂಭಿಸಿ ಸಂಸ್ಕರಿತ ನೀರನ್ನು ಕೆರೆಗೆ ಬಿಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದರು.
ಆದರೆ ಪ್ರಗತಿಯಾಗಿಲ್ಲ. ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಮಳೆ ನೀರಿನೊಂದಿಗೆ ಕೊಳಚೆ ಕೂಡ ಕೆರೆ ಸೇರುತ್ತದೆ. ಆಗ ಜಲಕಳೆ ಇನ್ನಷ್ಟು ವ್ಯಾಪಕ ಪ್ರಮಾಣದಲ್ಲಿ ಕೆರೆಯಲ್ಲಿ ಹರಡುವುದು. ಕೆರೆಯ ನಿರ್ವಹಣೆಯನ್ನು ದೇಶಪಾಂಡೆ ಫೌಂಡೇಶನ್‌ಗೆ 1 ವರ್ಷ ಅವಧಿಗೆ ವಹಿಸಿಕೊಡಲಾಗಿತ್ತು.
ನ್ಯುವಾಲಿ ರಾಸಾಯನಿಕ ಬಳಕೆ ಮಾಡಿ ಜಲಕಳೆ ಹರಡದಂತೆ ಕ್ರಮ ಕೈಗೊಳ್ಳಲು ಫೌಂಡೇಶನ್ ಕ್ರಮ ಕೈಗೊಂಡಿತ್ತು. ಆದರೆ ಅದರಿಂದ ಯಾವುದೇ ಫಲ ಸಿಕ್ಕಿಲ್ಲ. ಸದ್ಯ ಅಂತರಗಂಗೆ ಕೆರೆಯಲ್ಲಿ ವ್ಯಾಪಿಸುತ್ತಿದೆ. ಹುಬ್ಬಳ್ಳಿಯ ಹಲವಾರು ಕೆರೆಗಳು ಬಡಾವಣೆಗಳು, ಮೈದಾನಗಳಾಗಿ ರೂಪಾಂತರ ಗೊಂಡಿವೆ.
ಹಳೇ ಹುಬ್ಬಳ್ಳಿಯ ಹೆಗ್ಗೇರಿ ಕೆರೆ ಮೈದಾನವಾಗಿದ್ದರೆ, ಇನ್ನೊಂದು ಕೆರೆ ನೆಹರು ಮೈದಾನವಾಗಿದೆ. ತಿರಕಾರಾಮನ ಕೆರೆ ಐಟಿ ಪಾರ್ಕ್ ಆಗಿ ರೂಪಾಂತರಗೊಂಡಿದೆ. ನಗರದಲ್ಲಿ ದೊಡ್ಡ ಕೆರೆ ಉಳಿದಿದ್ದೆಂದರೆ ಉಣಕಲ್ ಕೆರೆ ಮಾತ್ರ. ಅದರ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಉಣಕಲ್ ಕೆರೆಯ ಪಕ್ಕದ ಉದ್ಯಾನ ಬಿಆರ್‌ಟಿಎಸ್ ರಸ್ತೆ ಅಗಲೀಕರಣದಿಂದ ಧೂಳು ಮಯವಾಗಿದೆ. ಕೆ
ರೆಯಲ್ಲಿ ದೋಣಿ ವಿಹಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜಲ ಕಳೆಯಿಂದ ಅದು ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ. ಜನರು ಮನಸಿಗೆ ಉಲ್ಲಾಸ ಮೂಡಲೆಂದು ಕೆರೆಗೆ ಹೋದರೆ ಅಲ್ಲಿ ಜಲಕಳೆ ನೋಡಬೇಕಾದ ಸ್ಥಿತಿಯಿದೆ. ಇನ್ನಾದರೂ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಕೆರೆ ಉಳಿಸಿಕೊಳ್ಳುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು. ಜಲಕಳೆ ನಿರ್ಮೂಲನೆಗೆ ಪೂರಕ ಕ್ರಮ ತೆಗೆದುಕೊಳ್ಳಬೇಕಿದೆ.
* ವಿಶ್ವನಾಥ ಕೋಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.