ಬಸವ ತತ್ವ ಪಾಲಿಸಿದರೆ ಬದುಕು ಹಸನು
Team Udayavani, Apr 22, 2017, 3:08 PM IST
ಕಲಬುರಗಿ: ಜಗತ್ತೇ ಬೆಳಕು ನೀಡಿರುವ ಬಸವತತ್ವ ಅಳವಡಿಸಿಕೊಳ್ಳಲು ಯಾವ ಮಾರ್ಗದರ್ಶಕರ ಅಗತ್ಯವು ಇಲ್ಲ. ಸಮಾಜಕ್ಕೆ ಬೆಳಕು ನೀಡಬಲ್ಲ ಅವರ ತತ್ವ, ಸಿದ್ಧಾಂತ ಅಳವಡಿಸಿಕೊಂಡು ಬದುಕು ಹಸನು ಮಾಡಿಕೊಳ್ಳಬೇಕೆಂದು ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ ಹೇಳಿದರು. ನಗರದ ಜಗತ್ ವೃತ್ತದ ಬಸವೇಶ್ವರ ಮೂರ್ತಿ ಆವರಣದಲ್ಲಿ 884ನೇ ಬಸವ ಜಯಂತಿ ಅಂಗವಾಗಿ ಬಸವ ಜಯಂತ್ಯುತ್ಸವ ಸಮಿತಿ ಹಮ್ಮಿಕೊಂಡಿರುವ ಬಸವ ತತಜ್ಞಾನ ಪ್ರವಚನ ಉದ್ಘಾಟಿಸಿ ಅವರು ಮಾತನಾಡಿದರು.
ಅನ್ನ ದಾಸೋಹ, ಅಕ್ಷರ ದಾಸೋಹ ಸಿದ್ಧಾಂತದ ಲಿಂಗಾಯತ ಧರ್ಮ ಅಂತರ್ಜಾತಿ ಮದುವೆ ಮಾಡುವ ಮೂಲಕ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಜಾತಿಯತೆಯನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣನ ವಾರಸುದಾರರೆನಿಸಿಕೊಳ್ಳುವ ಲಿಂಗಾಯತರು ಇಂದಿಗೂ ಒಳಪಂಗಡದ ಜಗಳದಲ್ಲಿ ಮುಳುಗಿರುವುದು ವಿಷಾದದ ಸಂಗತಿ ಎಂದು ಹೇಳಿದರು.
ಮಹಾಪೌರ ಶರಣಕುಮಾರ ಮೋದಿ ಮಾತನಾಡಿ, ಅರ್ಧಕ್ಕೆ ನಿಂತಿರುವ ಜಗತ್ ವೃತ್ತದಲ್ಲಿನ ಜಗಜ್ಯೋತಿ ಬಸವೇಶ್ವರ ಪುತ್ಥಳಿ ಆವರಣ ಅಭಿವೃದ್ಧಿ ಕಾರ್ಯ 3 ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. 50 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಪುತ್ಥಳಿ ಆವರಣ ಅಭಿವೃದ್ಧಿಪಡಿಸಲಾಗಿದೆ.
ಉಳಿದ ಕಾಮಗಾರಿಗೆ ಬೇಕಾಗುವ ಹಣ ಬಿಡುಗಡೆಗೊಳಿಸಲು ಶ್ರಮಿಸಿ, ಕಾಮಗಾರಿ ಆರಂಭವಾಗಲು ಶ್ರಮಿಸಲಾಗುವುದು ಎಂದರು. ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 50 ಲಕ್ಷ ರೂ. ಕೊಡುವುದಾಗಿ ಮಂಡಳಿ ಅಧ್ಯಕ್ಷರೂ ಆಗಿರುವ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಉತ್ತರ ಕ್ಷೇತ್ರದ ಶಾಸಕ ಡಾ| ಖಮರುಲ್ ಇಸ್ಲಾಂ ಮೂರುವರೆ ಕೋಟಿ ರೂ. ಗಳ ಅನುದಾನ ಒದಗಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿದ್ದ ಜೆಡಿಎಸ್ ಯುವ ಮುಖಂಡ ನಾಸಿರ್ ಸಾದತ್ ಹುಸೇನ್, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ, ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ ಮಾತನಾಡಿ, ಅಂದಿನ ಅನುಭವ ಮಂಟಪದ ಪರಿಕಲ್ಪನೆಯೇ ಇಂದಿನ ಸಂಸತ್ ಆಗಿದ್ದು, ಬಸವಣ್ಣ ಮೊಟ್ಟ ಮೊದಲ ಪ್ರಜಾಪ್ರಭುತ್ವವಾದಿ. ಬಸವಾದಿ ಶರಣರ ಆಶಯಗಳನ್ನು ಈಡೇರಿಸುವತ್ತ ಎಲ್ಲರೂ ಕಾರ್ಯತತ್ಪರರಾಗಬೇಕು ಎಂದು ಅಭಿಪ್ರಾಯಪಟ್ಟರು.
ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಡಾ| ಗಂಗಾಂಬಿಕಾ ಪಾಟೀಲ ಸಾನ್ನಿಧ್ಯ ವಹಿಸಿದ್ದರು. ಮೇಯರ್ ಶರಣು ಭೂಸನೂರ, ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಶರಣಬಸಪ್ಪ ಭೂಸನೂರ ಅಧ್ಯಕ್ಷತೆ ವಹಿಸಿದ್ದರು. ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಪ್ರಧಾನ ಕಾರ್ಯದರ್ಶಿ ಡಾ| ಶ್ರೀಶೈಲ ಘೂಳಿ, ಸಂಗಮೇಶ ನಾಗನಳ್ಳಿ, ವಿಶಾಲ ಎಸ್. ನವರಂಗ್, ಮಂಜುನಾಥರೆಡ್ಡಿ, ಈರಣ್ಣ ಗೋಳೆದ ವೇದಿಕೆಯಲ್ಲಿದ್ದರು.
ರವೀಂದ್ರ ಶಾಬಾದಿ, ಎಚ್.ಬಿ. ತೀಥೆ, ರಾಜಕುಮಾರ ಕೋಟಿ, ಸುರೇಶ ಪಾಟೀಲ ಜೋಗೂರ, ಮಂಜುನಾಥ ಹಾಗರಗಿ, ಸಿದ್ಧರಾಮ ಯಳವಂತಗಿ, ವೀರೇಶ ಮಾಲಿಪಾಟೀಲ, ಸುಜಾತಾ ಮಾಮಡಿ, ಬಸವರಾಜ ಅನವಾರ ಹಾಗೂ ಮತ್ತಿತರರು ಭಾಗವಹಿಸಿದ್ದರು. ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಶರಣು ಸಲಗರ ಸ್ವಾಗತಿಸಿದರು. ಬಸವರಾಜ ಚಟ್ನಳ್ಳಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.