ರಂಗ ಚಟುವಟಿಕೆಯಿಂದ ಸಾಮಾಜಿಕ ಸಂಬಂಧ ಸಮೃದ್ಧಿ’
Team Udayavani, Apr 22, 2017, 3:19 PM IST
ಉಡುಪಿ: ಯುವ ಪ್ರತಿಭೆಗಳ ಯೋಗ್ಯ ನಿರೀಕ್ಷೆಗಳಿಗೆ ಕಲಾಭೂಮಿಯಲ್ಲಿ ಖಂಡಿತಾ ಪೋಷಣೆಯಿದೆ. ರಂಗಾಯಣದಂತಹ ಸಂಸ್ಥೆಯೂ ಇದಕ್ಕೆ ಸಾಕಷ್ಟು ಉತ್ತೇಜನ ನೀಡುತ್ತದೆ. ರಂಗಚಟುವಟಿಕೆಯಲ್ಲಿ ಆಸಕ್ತಿಯಿಂದ ತೊಡಗಿಕೊಂಡಾಗ ಸಮನ್ವಯತೆಯ ಸೃಷ್ಟಿ ಮತ್ತು ಸಾಮಾಜಿಕ ಸಂಬಂಧ ಸಮೃದ್ಧಿಗೊಳ್ಳುತ್ತದೆ ಎಂದು ಮೈಸೂರು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ಹೇಳಿದರು.
ಅವರು ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸುಮನಸಾ ಕೊಡವೂರು ಆಶ್ರಯದಲ್ಲಿ ಮೈಸೂರು ರಂಗಾಯಣದ ವತಿಯಿಂದ ಎರಡು ದಿನಗಳ ಕಾಲ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ರಂಗಾಯಣ ರಂಗಪಯಣ ನಾಟಕೋತ್ಸವ ಹಾಗೂ ಯು. ದುಗ್ಗಪ್ಪ ಅವರಿಗೆ ಕಲಾ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಂಗಭೂಮಿ ಉಳಿಸಿ, ಬೆಳೆಸಲು ತೆರೆಯ ಹಿಂದೆ ಹಾಗೂ ಮುಂದೆ ಹೊಸ ಹೊಸ ಪ್ರತಿಭೆಗಳ ಸೃಷ್ಟಿ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವಂತಹ ವ್ಯವಸ್ಥೆಯಲ್ಲಿ ರಂಗಾಯಣ ಮುನ್ನಡೆಯುತ್ತಿದೆ ಎಂದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ್ ಶೆಟ್ಟಿ, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಉಪಸ್ಥಿತರಿದ್ದರು. ತೋನ್ಸೆ ಜಯಂತ್ ಕುಮಾರ್ ಅವರು ಯು. ದುಗ್ಗಪ್ಪಅವರಿಗೆ ಕಲಾ ನಮನ ಸಲ್ಲಿಸಿದರು. ಎಂ. ಎಸ್. ಭಟ್ ಪ್ರಾಸ್ತಾವಿಕ ಮಾತನಾಡಿದರು. ದಯಾನಂದ ಯು. ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.