ಸಿಬಿಐಟಿ ಕಾಲೇಜಿನ ಬಳಿ ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆ
Team Udayavani, Apr 22, 2017, 4:48 PM IST
ಕೋಲಾರ: ಉದ್ಯೋಗ ಮೇಳಕ್ಕೆ ನೋಡಲ್ ಹಾಗೂ ಸಹಾಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಬೇಕು. ಉದ್ಯೋಗಾಕಾಂಕ್ಷಿಗಳನ್ನು ಹೊರತು ಪಡಿಸಿ ಬೇರೆ ಯಾರನ್ನೂ ಒಳಗೆ ಬಿಡಬಾರದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಸೂಚಿಸಿದರು.
ಕೋಲಾರ ಶ್ರೀನಿವಾಸಪುರ ರಸ್ತೆಯಲ್ಲಿರುವ ಸಿ.ಬೈರೇಗೌಡ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಉದ್ಯೋಗ ಮೇಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶನಿವಾರ ಮತ್ತು ಭಾನುವಾರ ನಡೆಯಲಿರುವ ಉದ್ಯೋಗ ಮೇಳದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿತರನ್ನು ಒಳಗೆ ಬಿಡಲು ಅವಕಾಶ ಇದೆ. ನಂತರ ಅಧಿಕಾರಿಗಳು, ವಾಲೆಂಧಿಟರಿಗಳನ್ನು, ಸ್ವಯಂ ಸೇವಕ ಸುಬ್ಬಂದಿ ಮತ್ತು ಅಭ್ಯರ್ಥಿಗಳನ್ನು ಮಾತ್ರ ಒಳಗೆ ಬಿಡಬೇಕು. ಅದನ್ನು ಹೊರತು ಪಡಿಸಿ ಬೇರೆ ಯಾರನ್ನೂ ಸಹ ಒಳಗೆ ಬಿಡಬೇಡಿ ಎಂದು ಡಿವೈಎಸ್‌ಪಿ ಅಬ್ದುಲ್ ಸತ್ತಾರ್ ಅವರಿಗೆ ನಿರ್ದೇಶನ ನೀಡಿದರು.
ಪರಿಶೀಲಿಸಿ ಸಂದರ್ಶನಕ್ಕೆ ಅನುವು: ವೇದಿಕೆ ಕಾರ್ಯಕ್ರಮ ಮುಗಿಯುವವರೆಗೆ ಅಭ್ಯರ್ಥಿಗಳನ್ನು ಬಿಲ್ಡಿಂಗ್ ಒಳಗಡೆ ಹೋಗಲು ಬಿಡಬೇಡಿ. ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳು ಅವರ ಮೊಬೈಲ್‌ಗೆ ಕಳುಹಿಸಿರುವ ಮೆಸೆಜ್ ತೋರಿಸಿದರೆ ಮಾತ್ರ ಸಂದರ್ಶನಕ್ಕೆ ಹೋಗಲು ಅವಕಾಶ ನೀಡಿ. ಉದ್ಯೋಗ ಮೇಳದ ಜವಾಬ್ದಾರಿಗಳನ್ನು ವಹಿಸಿರುವವರಿಗೆ ವಿವಿಧ ಬಣ್ಣಗಳ ಐಡೆಂಟಿ ಕಾರ್ಡ್ ನೀಡಲು ತಿಳಿಸಿದರು.
ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ 3 ಕಂಪನಿಗಳಲ್ಲಿ ಸಂದರ್ಶನಕ್ಕೆ ಅವಕಾಶ ಇರುತ್ತದೆ. ಅವರು ಸಂದರ್ಶನ ಮುಗಿಸಿ ಕಾಲಹರಣ ಮಾಡಿದೆ ಹೊರ ನಡೆದು ಇತರರಿಗೆ ಅವಕಾಶ ನೀಡಬೇಕು. ಅಭ್ಯರ್ಥಿಗಳಿಗೆ ಗೊಂದಲ ಉಂಟಾದರೆ ಅದನ್ನು ನಿವಾರಿಸಲು ಒಂದು ಸ್ಟಾಲ್ ತೆರೆಯಲು ಸೂಚನೆ ನೀಡಿದರು.
2ನೇ ದಿನಕ್ಕೂ ಅವಕಾಶ: ಸ್ಥಳದಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶವಿದ್ದು ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಮೊದಲ ದಿನ ಹೆಚ್ಚು ಮಂದಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವುದರಿಂದ ಸ್ಥಳದಲ್ಲಿ ನೋಂದಣಿ ಮಾಡಿಕೊಂಡವರಿಗೆ ಎರಡನೇ ದಿನ ಸಂದರ್ಶನಕ್ಕೆ ಹೋಗಬಹುದು. ಮೊದಲ ದಿನ ನೋಂದಣಿ ಮಾಡಿಕೊಂಡವರಿಗೆ ಅರ್ಜಿ ನೀಡಲಾಗುವುದು. ಅದನ್ನು ತೆಗೆದುಕೊಂಡು ತೆರಳಬೇಕು. ನಂತರ 2 ನೇ ದಿನ ಬಂದು ಸಂದರ್ಶನಕ್ಕೆ ಹೋಗಬೇಕು ಎಂದು ತಿಳಿಸಿದರು.
ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತವಾಗಿ ನೀರಿನ ವ್ಯವಸ್ಥೆ ಮಾಡಬೇಕು. ಆ್ಯಂಬುಲೆನ್ಸ್, ಪೈರ್ ಇಂಜಿನ್ ಸ್ಥಳದಲ್ಲಿ ಸಿದ್ಧವಿರಬೇಕು. ಅದೇ ರೀತಿ ಕಂಟ್ರೋಲ್ ರೂಂ ನಿರ್ಮಿಸಿ. ಪಾರ್ಕಿಂಗ್‌ಗೆ ಪ್ರತ್ಯೇಕ ಸ್ಥಳವನ್ನು ಮಾಡಿ. ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಿ. ಎಲ್ಲಾ ಕಡೆ ಸ್ಪೀಕರ್‌ಗಳನ್ನು ಅಳವಡಿಸಿ. ಅಷ್ಟೇ ಅಲ್ಲದೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನೀಡಬೇಕು. ಅದಿಕಾರಿಗಳು ಸೂಕ್ತವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಚಿವರಿಂದ ಉದ್ಘಾಟನೆ: ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸುರೇಶ್ ಮಾತನಾಡಿ, ಉದ್ಯೋಗ ಮೇಳಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವೇದಿಕೆ ಕಾರ್ಯಕ್ರಮವು ಶನಿವಾರ ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ಉದ್ಘಾಟಿಸುವರು. ಕೋಲಾರ ವಿಧಾನ ಸಬಾ ಕ್ಷೇತ್ರದ ವರ್ತೂರು ಆರ್. ಪ್ರಕಾಶ್ ಅಧ್ಯಕ್ಷತೆ ವಹಿಸುವರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಆರ್.ವಿ.ದೇಶಪಾಂಡೆ, ಕಾರ್ಮಿಧಿಕ ಸಚಿವ ಸಂತೋಷ್ ಎಸ್ ಲಾಡ್, ಲೋಕಸಬಾ ಸದಸ್ಯ ಡಾ.ಕೆ.ಹೆಚ್.ಮುನಿಯಪ್ಪ ಘನ ಉಪಸ್ಥಿತಿ ವಹಿಸುಧಿವರು. ಅದೇ ರೀತಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸುವರು. ಉದ್ಯೋಗ ಮೇಳಕ್ಕೆ ಬೃಹತ್ ವೇದಿಕೆ ಸಿದ್ಧಪಡಿಸುತ್ತಿದ್ದು ವೇದಿಕೆಯನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಶೀಲಿಸಿದರು.
ಜಿಪಂ ಸಿಇಒ ಬಿ.ಬಿ.ಕಾವೇರಿ, ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಎನ್.ಸುರೇಶ್, ಸಹಾಯಕ ನಿರ್ದೇಶಕರಾದ ರವಿಚಂದ್ರ, ಸಿ.ಬೈರೇಗೌಡ ಕಾಲೇಜಿನ ಪ್ರಾಂಶುಪಾಲ ಸುರೇಶ್, ಶ್ರೀವತ್ಸ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.