ಮರೋಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಮಹೋತ್ಸವ
Team Udayavani, Apr 22, 2017, 5:06 PM IST
ಮುಂಬಯಿ: ಅಂಧೇರಿ ಪೂರ್ವ ಮರೋಲ್ ಪೈಪ್‌ಲೈನ್ ರಾಮಲೀಲಾ ಮೈದಾನದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಷಾವಧಿ ಮಹೋ ತ್ಸವವು ದೇವಾಲಯದ ಆಡಳಿತ ಮೊಕ್ತೇಸರ ಶ್ರೀಕಾಂತ್ ಸುವರ್ಣ ಹಾಗೂ ಸರ್ವ ಸದಸ್ಯರ ಮುಂದಾಳತ್ವದಲ್ಲಿ ವಿವಿಧಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ. 14ರಿಂದ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಎ. 14ರಂದು ಉಷಾ ಪೂಜೆ, ಬಲಿಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ತೋರಣ ಮುಹೂರ್ತ, ಗಣಪತಿ ಯಾಗ, ಪಂಚಾಮೃತ ಅಭಿಷೇಕ, ಶ್ರೀದೇವಿಗೆ 49 ಕಲಶಾಭಿಷೇಕ, ವಿಶೇಷ ಪೂಜೆ, ಆಶ್ಲೇಷ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು.
ಎ. 17ರಂದು ಸಂಜೆ ರಂಗ ಪೂಜೆಯನ್ನು ಆಯೋಜಿ ಸಲಾಗಿತ್ತು. ಇದೇ ಸಂದರ್ಭದಲ್ಲಿ ದೇವರ ಬಲಿ ಉತ್ಸವದ ಮೆರವಣಿಗೆ ನಾಡಿನ ಸಂಸ್ಕೃತಿ, ಸಂಸ್ಕಾರಗಳನ್ನು ಸಾರುವ ವಿವಿಧ ಪ್ರಾತ್ಯಕ್ಷಿಕೆಗಳು, ಹುಲಿವೇಷ, ಯಕ್ಷಗಾನ ವೇಷ, ಭಜನ ತಂಡ ಇತ್ಯಾದಿಗಳು ಮೆರವಣಿಗೆಗೆ ಮೆರುಗು ನೀಡಿತು. ದಿನೇಶ್ ಕೋಟ್ಯಾನ್ ಬಳಗದವರಿಂದ ಚೆಂಡೆ, ಬ್ಯಾಂಡು, ವಾದ್ಯ ಮೇಳ, ಚಿಣ್ಣರಿಂದ ಪೌರಾಣಿಕ ವೇಷಗಳು, ಅಶೋಕ್ ಕೊಡ್ಯಡ್ಕ ಬಳಗದವರಿಂದ ತವರೂರಿನ
ತಂಡದಿಂದ ಹುಲಿವೇಷ, ಮಹಿಳೆಯರ ಕಲಶ ಸ್ವಾಗತ ದೊಂದಿಗೆ ಶೋಭಾಯಾತ್ರೆಯು ನಡೆಯಿತು.
ಸಂಜೆ 7ರಿಂದ ದೇವಸ್ಥಾನದಿಂದ ಹೊರಟು ನಗರ ಪ್ರದಕ್ಷಿಣೆಗೈದು ರಾತ್ರಿ 11.30ರ ಸುಮಾರಿಗೆ ದೇವಸ್ಥಾನಕ್ಕೆ ಮರಳಿತು. ಕೊನೆಯಲ್ಲಿ ವಿಶೇಷ ಪೂಜೆ, ತೀರ್ಥ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಸಾವಿರಾರು ಭಕ್ತಾದಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ದೇವಾಲಯದ ಆಡಳಿತ ಮೊಕ್ತೇಸರ ಶ್ರೀಕಾಂತ್ ಸುವರ್ಣ ಮತ್ತು ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.