ಸೇನಾನೆಲೆಗೆ ತಾಲಿಬಾನ್ ಲಗ್ಗೆ: 150 ಸಾವು
Team Udayavani, Apr 23, 2017, 3:45 AM IST
ಮಜಾರ್-ಎ-ಷರೀಫ್: ಪಾಕ್ ಗಡಿಗೆ ಹೊಂದಿಕೊಂಡಿರುವ ಅಫ್ಘಾನಿಸ್ತಾನದ ನಂಗರ್‌ಹಾರ್‌ನಲ್ಲಿ ಐಸಿಸ್ ಉಗ್ರರನ್ನು ಗುರಿ ಯಾಗಿಸಿ ಅಮೆರಿಕ ಮದರ್ ಬಾಂಬ್ ಪ್ರಯೋಗಿಸಿ ದಿನಗಳು ಕಳೆದಿಲ್ಲ. ಉತ್ತರ ಅಫ್ಘಾನಿಸ್ತಾನದ ಮಜಾರ್-ಎ-ಷರೀಫ್ನಲ್ಲಿ ರುವ ಸೇನಾ ನೆಲೆಗೆ ತಾಲಿಬಾನ್ ಉಗ್ರರು ಶುಕ್ರವಾರ ತಡ ರಾತ್ರಿ ನುಗ್ಗಿ ಬಾಂಬ್ ಸ್ಫೋಟ ನಡೆಸಿದ್ದಾರೆ. ಈ ದುರಂತದಲ್ಲಿ ಕನಿಷ್ಠ 150 ಮಂದಿ ಸೈನಿಕರು ಅಸುನೀಗಿದ್ದಾರೆ.
ಆಫ^ನ್‌ನ ರಕ್ಷಣಾ ಸಚಿವಾಲಯ ಸಾವಿನ ಸಂಖ್ಯೆಯನ್ನು 50 ಎಂದೇ ಹೇಳುತ್ತಿದೆ. ಇತ್ತೀಚೆಗೆ ಸೇನಾ ನೆಲೆ ಗುರಿಯಾಗಿರಿಸಿ ಕೊಂಡು ನಡೆಸಲಾಗಿರುವ ಅತ್ಯಂತ ಭೀಕರ ದಾಳಿ ಇದಾಗಿದೆ.
ಸಮವಸ್ತ್ರ ಧರಿಸಿದ್ದರು: ಸೈನಿಕರಂತೆ ಸಮವಸ್ತ್ರ ಧರಿಸಿದ್ದ ಹತ್ತು ಮಂದಿ ಉಗ್ರರು ಎರಡು ಟ್ರಕ್‌ಗಳ ಮೂಲಕ ಕಾಂಪೌಂಡ್ ಪ್ರವೇಶಿಸಿದರು. ಗುಂಡು ಹಾರಿಸುತ್ತಾ ಒಳ ನುಗ್ಗಿದರು. ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆಯನ್ನೇ ಗಮನದಲ್ಲಿರಿಸಿಕೊಂಡು ಈ ದಾಳಿ ನಡೆಸಲಾಗಿದೆ. ಆರಂಭದಲ್ಲಿ ಗ್ರೆನೇಡ್ ಎಸೆದರು. ಬಳಿಕ 6 ಗಂಟೆಗಳ ಕಾಲ ಉಗ್ರರು ಹಾಗೂ ಯೋಧರ ನಡುವೆ ಗುಂಡಿನ ಕಾಳಗ ನಡೆಯಿತು. ಅಂತಿಮವಾಗಿ ಎಲ್ಲ ದಾಳಿಕೋರರನ್ನು ಗುಂಡು ಹಾರಿಸಿ ಸಾಯಿಸಲಾಗಿದೆ. ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ಶನಿವಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.