ರೋಗಿಗಳಲಿ ದೇವರು ಕಾಣುವನೇ ನಿಜವಾದ ವೈದ್ಯ
Team Udayavani, Apr 23, 2017, 3:37 PM IST
ಕಲಬುರಗಿ: ರೋಗಿಗಳಲ್ಲಿ ದೇವರು ಕಾಣುವವರೇ ನಿಜವಾದ ವೈದ್ಯರು. ಅಂತವರಲ್ಲಿ ಡಾ| ಶರಣಬಸವಪ್ಪ ಕಾಮರೆಡ್ಡಿ ಒಬ್ಬರಾಗಿದ್ದಾರೆ ಎಂದು ಶಾಸಕ ಡಾ| ಎ.ಬಿ. ಮಲಕರೆಡ್ಡಿ ಹೇಳಿದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾಗಿ ನೇಮಕಗೊಂಡ ಡಾ| ಶರಣಬಸವಪ್ಪ ಬಿ.ಕಾಮರೆಡ್ಡಿ ದಂಪತಿಗೆ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಹಿತೈಷಿಗಳ ಬಳಗವು ಶುಕ್ರವಾರ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಡಾ| ಕಾಮರೆಡ್ಡಿ ಅವರು ವೈದ್ಯಕೀಯ ಸೇವೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲಿ ಎಂದು ಶುಭ ಹಾರೈಸಿದ ಡಾ| ಮಲಕರೆಡ್ಡಿ, ಇಷ್ಟೊಂದು ಜನಸಾಗರದ ನಡುವೆ ಸನ್ಮಾನಗೊಳ್ಳುತ್ತಿರುವುದು ನಿಜಕ್ಕೂ ಮಾದರಿಯಾಗಿದೆ ಎಂದರು.
ಹಿತೈಷಿಗಳು, ವೈದ್ಯ ಕಾಮರೆಡ್ಡಿ ಅಭಿಮಾನಿಗಳ ಸಮ್ಮುಖದಲ್ಲಿ ಮುಗಳನಾಗಾಂವ ಕಟ್ಟಿಮನಿ ಸಂಸ್ಥಾನದ ಅಭಿನವ ಸಿದ್ಧಲಿಂಗ ಸ್ವಾಮಿಗಳು ಗೌರವಿಸಿದರು. ನಂತರ ಮಾತನಾಡಿದ ಶ್ರೀಗಳು, ತಮ್ಮ ನೈಪುಣ್ಯತೆಯಿಂದ ರೋಗಿಗಳಿಗೆ ಮರು ಜೀವ ನೀಡುವ ಮೂಲಕ ಡಾ| ಕಾಮರೆಡ್ಡಿ ಅವರು ಸಂಜೀವಿನಿಯಾಗಿದ್ದಾರೆ,
ಇಂತಹವರನ್ನು ಗುರುತಿಸಿ ಸಂಸ್ಥೆ ತನ್ನ ಆಡಳಿತ ಮಂಡಳಿಗೆ ನಾಮ ನಿರ್ದೆಶನ ಮಾಡಿದ್ದು ಶ್ಲಾಘನೀಯ ಎಂದರು. ಇವರ ಅವಧಿಯಲ್ಲಿ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಸವರಾಜ ಭೀಮಳ್ಳಿ ಮಾತನಾಡಿ, ಯುವಕರು ಆಗಿರುವ ಡಾ| ಕಾಮರೆಡ್ಡಿ ಅವರ ವೈದ್ಯಕೀಯ ಸೇವೆ ಶ್ಲಾಘನೀಯ ಎಂದರು.
ಶಾಸಕ ಬಿ.ಜಿ. ಪಾಟೀಲ, ಮಾಜಿ ಉಪ ಸಭಾಪತಿ ಚಂದ್ರಶೇಖರ ರೆಡ್ಡಿ ಮದನಾ ಮಾತನಾಡಿದರು. ಎಚ್‌ಕೆಇ ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಜಿ.ಡಿ. ಅಣಕಲ್, ಆರ್.ಎಸ್. ಹೊಸಗೌಡ, ಅರುಣಕುಮಾರ ಪಾಟೀಲ, ಎನ್.ಡಿ. ಪಾಟೀಲ, ಡಾ| ದೇಶಮುಖ ಮತ್ತು ರೆಡ್ಡಿ ಸಮಾಜದ ಮುಖಂಡರಾದ ಲಿಂಗಾರೆಡ್ಡಿ ಬಾಸರೆಡ್ಡಿ, ಬಸವರೆಡ್ಡಿ ಇಟಗಿ,
ಭಾಗಣ್ಣಗೌಡ ಸಂಕನೂರ, ನಾಗರಡ್ಡಿ ಪಾಟೀಲ ಸೇಡಂ, ಪ್ರೊ| ಚೆನ್ನಾರೆಡ್ಡಿ ಪಾಟೀಲ, ಸಿದ್ರಾಮರೆಡ್ಡಿ ಪಾಟೀಲ, ಲಿಂಗಣ್ಣಗೌಡ ಮಲ್ಹಾರ್, ವಿ.ಶಾಂತರೆಡ್ಡಿ , ಡಾ| ಪ್ರತಿಮಾ ಕಾಮರೆಡ್ಡಿ, ಬಸವರಾಜಪ್ಪ ಮಾಸ್ಟರ್ ಕಾಮರೆಡ್ಡಿ, ಡಾ| ರಾಜಶೇಖರ ಪಾಟೀಲ ಹರವಾಳ, ಪ್ರಮೋದ ರೆಡ್ಡಿ, ಚಂದ್ರಶೇಖರ ಪರಸರೆಡ್ಡಿ ನಾಲವಾರ, ಬಸವರಾಜ ಪಾಟೀಲ ಸೂಗುರ,
ಭೀಮರೆಡ್ಡಿ ಪಾಟೀಲ, ನಂದೀಶ ರೆಡ್ಡಿ, ಸಿದ್ದಲಿಂಗಪ್ಪ ರಸ್ತಾಪುರ, ಶರಣಗೌಡ ಪಾಟೀಲ ಯರಗೋಳ ಮುಂತಾದವರಿದ್ದರು. ಹೈಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ನೂರಾರು ವೈದ್ಯರು ಮತ್ತು ವೀರಶೈವ ರೆಡ್ಡಿ ಸಮಾಜದ ಪ್ರಮುಖರು ಹಾಜರಿದ್ದರು. ಮಹಿಪಾಲರರೆಡ್ಡಿ ಮುನ್ನೂರ ಪರಿಚಯಿಸಿದರು. ಕುಡಾ ಸದಸ್ಯರಾಗಿರುವ ಯುವ ನಾಯಕ ಪ್ರವೀಣ ಪಾಟೀಲ ಹರವಾಳ ಸ್ವಾಗತಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.