ಮಾಸಾಶನಕ್ಕೆ ಸಭೆ, ಗರೋಡಿಗಳಿಗೆ ಅನುದಾನ


Team Udayavani, Apr 24, 2017, 12:47 PM IST

pension.jpg

ಭೂಮಂಜೂರಾತಿಗೆ ಅರ್ಜಿ ಕೊಡಿ: ಸಚಿವ ಕಾಗೋಡು ತಿಮ್ಮಪ್ಪ
ಉಡುಪಿ
,: ಗರೋಡಿಗಳಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಅನುದಾನ ಕೊಡಿಸಲು ಅವಕಾಶಗಳಿವೆ. ಗರೋಡಿಗಳ ಜಾಗವನ್ನು ಗರೋಡಿ ಹೆಸರಿನಲ್ಲಿ ಮಾಡಿಕೊಡಲು ತಹಶೀಲ್ದಾರ್‌ಗೆ ಅರ್ಜಿ ಕೊಡಿ. 3 ತಿಂಗಳಲ್ಲಿ ಜಾಗ ಮಂಜೂರು ಮಾಡಿಸಲು ಪ್ರಯತ್ನಿಸುತ್ತೇನೆ. ಗರೋಡಿಗಳ ಗುರಿಕಾರರಿಗೆ ಮಾಸಾಶನ ಕೊಡಿಸಲು ಸದ್ಯವೇ ಸಭೆ ಕರೆಯುತ್ತೇನೆ…

ಇದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪರ ಭರವಸೆ. ಜಿಲ್ಲಾ ಬಿಲ್ಲವ ಯುವ ವೇದಿಕೆಯಿಂದ ರವಿವಾರ ಪುರಭವನದಲ್ಲಿ ನಡೆದ ಜಿಲ್ಲಾ ವ್ಯಾಪ್ತಿಯ ಗರೋಡಿ ಗುರಿಕಾರರ ಸಮ್ಮಾನ ಮತ್ತು ಪ್ರಮುಖರ ಸಮ್ಮಿಲನ ಸಮಾರಂಭದ ಸಮಾರೋಪ ಸಭೆಧಿಯಲ್ಲಿ ಮಾತನಾಡಿದ ಅವರು, ಗರೋಡಿಗಳ ದುರಸ್ತಿಗೆ ಮುಜರಾಯಿ ಇಲಾಖೆಯಿಂದ ಹಣ ಕೊಡಿಸಲು ಸಾಧ್ಯವಿದೆ. ಆದರೆ ಮುಜರಾಯಿ ಇಲಾಖೆಗಳಲ್ಲಿ ನೋಂದಣಿಯಾದ ದೇವಧಿಸ್ಥಾನಗಳಿಗೆ ಸಿಕ್ಕಿದಷ್ಟು ಸಿಗುವುಧಿದಿಲ್ಲ ಎಂದರು.

ಸಮುದಾಯ ಭವನಕ್ಕೆ ಅನುದಾನ
ಇದಕ್ಕೂ ಮುನ್ನ ಮಾತನಾಡಿದ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು, ಗರೋಡಿಗಳಿಗೆ ಅನುದಾನ ನೀಡಲು ಮುಜರಾಯಿ ಇಲಾಖೆಯಿಂದ ಸಾಧ್ಯವಿದೆ. ಹಿಂದುಳಿದ ವರ್ಗಗಳ ಇಲಾಖೆಯಿಂದ ಸಮುದಾಯ ಭವನಕ್ಕೆ ಅನುದಾನ ನೀಡಲಾಗುತ್ತಿದೆ. ನನ್ನ ಕ್ಷೇತ್ರದಲ್ಲಿ ಹತ್ತಾರು ಬಿಲ್ಲವರ ಸಮುದಾಯ ಭವನಕ್ಕೆ ಹಣ ಮಂಜೂರು ಮಾಡಿದ್ದೇನೆ. ಗರೋಡಿಗಳ ಗುರಿಕಾರರಿಗೆ ಮಾಸಾಶನ ನೀಡಲು ಸಭೆಯನ್ನು ಕರೆಯುತ್ತೇವೆ ಎಂದು ತಿಳಿಸಿದರು.

ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಸದಸ್ಯ ಜನಾರ್ದನ ತೋನ್ಸೆ, ಮಾಜಿ ಅಧ್ಯಕ್ಷ ರಾಜು ಪೂಜಾರಿ, ಮಾಜಿ ಶಾಸಕ ಬಸವರಾಜ್‌, ಮೀನುಗಾರಿಕಾ ಒಕ್ಕೂಟದ ಅಧ್ಯಕ್ಷ ಯಶಪಾಲ್‌ ಸುವರ್ಣ, ಸಾಮಾಜಿಕ ಮುಖಂಡ ಕೆ. ಉದಯಕುಮಾರ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌, ಕಟಪಾಡಿ ವಿಶ್ವನಾಥ ಕ್ಷೇತ್ರದ ಮುಖ್ಯಸ್ಥ ಅಶೋಕ ಸುವರ್ಣ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆ ಅಧ್ಯಕ್ಷ ಪ್ರವೀಣ್‌ ಪೂಜಾರಿ ಸ್ವಾಗತಿಸಿ ಗೌರವಾಧ್ಯಕ್ಷ ಅಚ್ಯುತ ಅಮೀನ್‌ ಕಲ್ಮಾಡಿ ಪ್ರಸ್ತಾವನೆಗೈದರು.

ಸಮಗ್ರ ಚಿಂತನೆ ಅಗತ್ಯ
ಆರಾಧನಾ ಸ್ಕೀಮ್‌ನಡಿ ಗರೋಡಿಧಿಗಳಿಗೆ ಅನುದಾನ ನೀಡಲು ಸಾಧ್ಯ. ಹಿಂದೆ ಜೈನರು, ಬಂಟರನ್ನು ಸೇರಿಸಿಕೊಂಡು ಗರೋಡಿಗಳ ಚಿಂತನ ಮಂಥನ ನಡೆದಿತ್ತು. ಆದರೆ ದ್ವಂದ್ವ ಉಂಟಾಗಿತ್ತು. ಗರೋಡಿಗಳು ಕೇವಲ ಬಿಲ್ಲವರ ಕೇಂದ್ರವಾಗಿರದೆ ಎಲ್ಲರ ಕೇಂದ್ರವಾಗಿರುವುದರಿಂದ ಎಲ್ಲರನ್ನೂ ಸೇರಿಸಿಕೊಂಡು ಸಮಗ್ರ ಚಿಂತನೆ ನಡೆಸಬೇಕು ಎಂದು ಗೋಷ್ಠಿಯಲ್ಲಿ ಮಾತನಾಡಿದ ಶಾಸಕ ವಿನಯ ಕುಮಾರ ಸೊರಕೆ ಹೇಳಿದರು.

ಗೇಣಿದಾರರಿಗೆ ಮೋಸ ಮಾಡಿದವರು…
ದೇವರಾಜ ಅರಸು ಕಾಲದಲ್ಲಿ 1974ರಲ್ಲಿ ಭೂಮಸೂದೆ ಕಾಯಿದೆ ಜಾರಿಗೆ ಬಂದಾಗ ನಾನು ಶಾಸಕನಾಗಿ ಅರ್ಜಿ ಪತ್ರಗಳನ್ನು ಮುದ್ರಿಸಿ ಇಲ್ಲಿಗೂ ತಂದು ವಿತರಿಸಲು ಹೇಳಿದ್ದೆ. ಕುಂದಾಪುರ ತಾಲೂಕಿನಲ್ಲಿ ಯಾರ್ಯಾರು ಯಾವ್ಯಾವ ರೈತರಿಗೆ ಮೋಸ ಮಾಡಿದ್ದಾರೆ? ಶಾಸಕರೂ ಏನೇನು ಮಾಡಿದ್ದಾರೆನ್ನುವುದು ಗೊತ್ತಿದೆ.

– ಕಾಗೋಡು ತಿಮ್ಮಪ್ಪ

ನಮ್ಮಿಂದಲೂ ತಪ್ಪು…
ದೇವಸ್ಥಾನಗಳಿಗೆ ಪ್ರವೇಶವಿಲ್ಲದ ಕಾಲದಲ್ಲಿ ಕೋಟಿ ಚೆನ್ನಯರು ಗರೋಡಿಧಿ ನಿರ್ಮಿಸಿದರು. ಈಗ ಗರೋಡಿಗಳಲ್ಲಿ ಕೊರಗರು ದೂರಧಿದಲ್ಲಿ ನಿಂತು ಡೋಲು ಹೊಡೆಯುತ್ತಿದ್ದಾರೆ. ನಾವು ಅದೇ ತಪ್ಪು ಮಾಡುಧಿತ್ತಿದ್ದೇವೆ. ಕೊರಗರನ್ನು ಒಳಗೆ ಕರೆದು ಡೋಲು ಸೇವೆ ನಡೆಸುವಂತೆ ನೋಡಬೇಕು. 
– ಸೂರ್ಯೋದಯ ಪೆರಂಪಳ್ಳಿ, ನಟ, ನಿರ್ದೇಶಕ, ನಿರ್ಮಾಪಕ (ಗೋಷ್ಠಿಯಲ್ಲಿ)

ಟಾಪ್ ನ್ಯೂಸ್

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ

ಸಾವರ್ಕರ್‌ ಹೆಸರಿನ ಕಾಲೇಜು: ಕಾಂಗ್ರೆಸ್‌, ಬಿಜೆಪಿ ಜಟಾಪಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-deeee

Udupi; ಮಕ್ಕಳ ರಕ್ಷಣೆ ಕಾಯ್ದೆ ಅನುಷ್ಠಾನ ಅಗತ್ಯ

1-hebri

ಅನಾರೋಗ್ಯ; ಭಾಗವತ ಗಣೇಶ ಹೆಬ್ರಿ ಅವರ ಪುತ್ರ ನಿಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

8

Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!

3

Karkala: ಕಾಮಗಾರಿಗೆ ಅಡ್ಡಿ; ಸಾರ್ವಜನಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

missing

ಬರಿಮಾರು ವ್ಯಕ್ತಿ ನಾಪತ್ತೆ; ನದಿ ಕಿನಾರೆಯಲ್ಲಿ ಪಾದರಕ್ಷೆ, ಮೇವಿನ ಕಟ್ಟು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.