ಅಧಿಕಾರ ಕೊಡಲ್ಲ ಕಸಿದುಕೊಳ್ಳಿ
Team Udayavani, Apr 24, 2017, 3:46 PM IST
ಚಿಂಚೋಳಿ: ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಬೇಕಿದ್ದು, ಅಧಿಕಾರ ಯಾರೂ ಕೊಡುವುದಿಲ್ಲ ಕಸಿದುಕೊಳ್ಳಬೇಕು ಎಂದು ರಾಜ್ಯ ಗಡಿ ಅಭಿವೃದ್ಧಿ ಪ್ರಾಧಿಧಿಕಾರ ಅಧ್ಯಕ್ಷ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹೇಳಿದರು. ಪಟ್ಟಣದಲ್ಲಿ ರವಿವಾರ ಪಂಚಲಿಂಗೇಶ್ವರ ಬುಗ್ಗಿ ತೇರ ಮೈದಾನದಲ್ಲಿ ನಡೆದ ತಾಲೂಕು ಕೋಲಿ ಸಮಾಜದ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಸಮಾಜಗಳು ಮುಂದುವರಿದಿವೆ. ಆದರೆ ಕೋಲಿ ಸಮಾಜ ತೀರಾ ಹಿಂದುಳಿದಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕಾಗಿದೆ ಎಂದರು. ಕೋಲಿ ಅತ್ಯಂತ ನಿರ್ಗತಿಕ ಸಮಾಜವಾಗಿದೆ. ತಾವು ಮುಜರಾಯಿ ಖಾತೆ ಸಚಿವರಾಗಿದ್ದಾಗ ಹಿಂದುಳಿದ ವರ್ಗಗಳ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ 33ಕೋಟಿ ರೂ. ಮಂಜೂರಿಗೊಳಿಸಿದ್ದೆವು.
ರಾಜ್ಯದಲ್ಲಿ 60ಲಕ್ಷ ಕೋಲಿ ಸಮಾಜದ ಜನರಿದ್ದು, ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ನನ್ನದು ಬಹು ದೊಡ್ಡ ಕನಸು ಎಂದು ನುಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಸ್ಥಾಪನೆ ಮಾಡಿದ್ದಾರೆ. ಕೂಡಲೇ ಅದರ ಅಧ್ಯಕ್ಷ ಸ್ಥಾನ ತುಂಬುವಂತೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಕೆ ಸಂಸದೀಯ ಕಾರ್ಯದರ್ಶಿ ಡಾ| ಉಮೇಶ ಜಾಧವ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಸ್ಥಾಪನೆ ಮಾಡಿದ್ದಾರೆ. ಅದಕ್ಕೆ 300 ಕೋಟಿ ರೂ. ಅನುದಾನ ನೀಡಬೇಕೆಂದು ಸರಕಾರ ನಿರ್ಧರಿಸಿದೆ. ಆರ್ಥಿಕ ಸಾಮಾಜಿಕ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ಸಮಾಜ ಅಭಿವೃದ್ಧಿಗೊಳ್ಳಲಿದೆ ಎಂದರು.
ಮಾಜಿ ಸಚಿವ ಸುನೀಲ ವಲ್ಯಾಪುರೆ ಮಾತನಾಡಿ, ಬಿಜೆಪಿ ಸರಕಾರದಲ್ಲಿ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಸ್ಥಾಪನೆಗೆ ಒಂದು ಕೋಟಿ ರೂ. ಮಂಜೂರಿಗೊಳಿಸಲಾಗಿತ್ತು.ನನ್ನ ಅಧಿಧಿಕಾರ ಅವಧಿಧಿ ಯಲ್ಲಿ ತಾಲೂಕಿನಲ್ಲಿ ಅಂಬಿಗರ ಚೌಡಯ್ಯ ಸಮುದಾಯ ಭವನ ನಿರ್ಮಾಣಕ್ಕಾಗಿ 85ಲಕ್ಷ ರೂ. ಖರ್ಚು ಮಾಡಲಾಗಿತ್ತು. ಹೊಸದಾಗಿ ಅಂಬಿಗರ ಚೌಡಯ್ಯ ನಿಗಮ ಅಭಿವೃದ್ಧಿ ಸ್ಥಾಪನೆಯಾಗಿದೆ.
ಇದರ ಅಧ್ಯಕ್ಷ ಸ್ಥಾನ ಚಿಂಚೋಳಿ ತಾಲೂಕಿಗೆ ಸಿಗಬೇಕೆಂದು ಒತ್ತಾಯಿಸಿದರು. ಮಾಜಿ ಸಚಿವ ರೇವು ನಾಯಕ ಬೆಳಮಗಿ, ತಾಲೂಕು ಕೋಲಿ ಸಮಾಜದ ಅಧ್ಯಕ್ಷ ಲಕ್ಷಣ ಆವಂಟಿ, ಜಿಲ್ಲಾ ಕೋಲಿ ಸಮಾಜ ಅಧ್ಯಕ್ಷ ರವಿರಾಜ ಕೊರವಿ, ತಿಪ್ಪಣ್ಣಪ್ಪ ಕಮಕನೂರ, ಶರಣಪ್ಪ ತಳವಾರ, ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್ ಯಾಕಾಪುರ, ಸಾರಿಗೆ ಅಧಿಧಿಕಾರಿ ಮಂಜುನಾಥ ಕೊರವಿ ಮಾತನಾಡಿದರು.
ಕೋಲಿ ಸಮಾಜದ ಅಧ್ಯಕ್ಷ ಲಕ್ಷಣ ಆವಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಲೇಪೇಟ ಗುರುಲಿಂಗ ಮಹಾಸ್ವಾಮೀಜಿ, ರಟಕಲ್‌ನ ಸಿದ್ದ ಶಿವಯೋಗಿಗಳು, ಹಳ್ಳಿಖೇಡನ ಶ್ರೀ ದತ್ತಾತ್ರೇಯ ಶರಣರು, ತೊನಸಹಳ್ಳಿಯ ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ, ಭೀಮಣ್ಣ ಸಾಲಿ,ಜಿಪಂ ಸದಸ್ಯ ಗೌತಮ ಪಾಟೀಲ, ರವಿಕಾಂತ ಹುಸೇಬಾಯಿ, ಶ್ರೀಧರ ಘಾಲಿ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ ಮತ್ತಿತರ ಕೋಲಿ ಸಮಾಜದ ಮುಖಂಡರು ಭಾಗವಹಿಸಿದ್ದರು.
ಕಾಶಿನಾಥ ನಾಟೀಕಾರ ಸ್ವಾಗತಿಸಿದರು. ಜಯಪ್ಪ ಚಾಪೆಲ್ ನಿರೂಪಿಸಿದರು. ಗಿರಿರಾಜ ನಾಟೀಕಾರ ವಂದಿಸಿದರು. ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ಲಕ್ಷಿದೇವತೆ ದೇಗುಲದ ವರೆಗೆ ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.