10th ಕ್ರಾಸ್ ಕೈಗೆಟುಕಿದ ಕಾಲೇಜೆಂಬ ಚಂದಿರ
Team Udayavani, Apr 25, 2017, 3:45 AM IST
ಇನ್ನು ಕೆಲವೇ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪಿಯೂಸಿ ಫಲಿತಾಂಶ ಹೊರಬೀಳಲಿದೆ. ಮುಂದೆ ಎಸ್ಸೆಸ್ಸೆಲ್ಸಿ ಎಂಬ ಅತ್ಯಮೂಲ್ಯ ಘಟ್ಟಕ್ಕೆ ಫುಲ್‌ಸ್ಟಾಪ್ ಇಟ್ಟು ಕಾಲೇಜಿಗೆ ಜಿಗಿಯುತ್ತಿದ್ದೀರಿ. ಎಷ್ಟೋ ವಿದ್ಯಾರ್ಥಿಗಳು ಮುಂದೆ ಯಾವ ಕಾಲೇಜು ಸೇರಬೇಕೆಂಬುದನ್ನು ಫೈನಲ್ ಮಾಡಿಬಿಟ್ಟಿದ್ದಾರೆ! ಆ ಕಾಲೇಜು ಮಾಯಾಸ್ವರ್ಗವಂತೆ ನಿಜವೇ? ಎರಡು ಜಡೆಯಿಲ್ಲ. ಫ್ರಾಕ್ ಬದಲಿಗೆ ಚೂಡಿ. ಟೈನ ಬಿಗಿತವಿಲ್ಲ. ಮಣಭಾರದ ಚೀಲವಿಲ್ಲ. ಹೋಂ ವರ್ಕ್‌ನ ಕಿರುಕುಳವಿಲ್ಲ. ಮೂರೋ ನಾಲ್ಕೋ ಪೀರಿಯಡ್‌ಗಳು. ಕೆಲವೊಮ್ಮೆ ಖಾಲಿ ಖಾಲಿ ಕ್ಲಾಸು… ಕಾಲೇಜಿನ ಮೊದಲ ದಿನವನ್ನಂತೂ ನೀವು ನಿಮ್ಮ ಲೈಫ್ನಲ್ಲಿ ಯಾವತ್ತೂ ಮರೆಯಲಾರಿರಿ…
ಮಣಭಾರದ ಬ್ಯಾಗು, ಸದಾ ಟರಕ್ ಟರಕ್ ಅನ್ನುವ ಜಾಮೆಟ್ರಿ ಬಾಕ್ಸು. ಕತ್ತಿಗೆ ಬಿಗಿದುಕೊಂಡ ಟೈ, ಮೊಣಕಾಲು ಉದ್ದದ ಸಾಕ್ಸು. ಅದಕ್ಕೆ ಹೊಂದುವ ಬಣ್ಣಕ್ಕೆ ಅನುಸಾರವಾಗಿ ಹೆಣೆದು ಎತ್ತಿಕಟ್ಟಿರುವ ಎರಡು ಜಡೆಗಳು. ಬಂದರೂ ಬಾರದಂತಿರುವ ಮೀಸೆಗಳು, ಮನಸ್ಸಿನಲ್ಲಿ ಸಾವಿರ ವೊಲ್ಟೆàಜ್‌ನ ಮಿಂಚು. ಅವನ್ಯಾಕೋ ನನ್ನನ್ನೇ ನೋಡುತ್ತಾನೆ ಅನ್ನೋ ಫೀಲಿಂಗು. ಇವೆಲ್ಲಾ ನಿಮ್ಮ ಬಳಿ ಇವೆಯೇ? ಹಾಗಾದರೆ ನೀವು ಸ್ಕೂಲ್ ಹಂತದ ಕೊನೆಯ ಮೆಟ್ಟಿಲಲ್ಲಿದ್ದೀರಿ ಅಂತಾನೇ ಅರ್ಥ. ಅಷ್ಟೇ ಅಲ್ಲ ಕೆಲವೇ ದಿನಗಳಲ್ಲಿ “ಕಾಲೇಜ್’ ಅನ್ನೋ ಮಹಾಕಟ್ಟಡದ ಮೊದಲ ಮೆಟ್ಟಿಲಿಗೆ ಹಾರಲಿದ್ದೀರಿ ಎಂದೂ ಅರ್ಥ!
ಇಲ್ಲಿಯ ಕೊನೆಯ ಮೆಟ್ಟಿಲಿನಿಂದ ಅಲ್ಲಿಯ ಮೊದಲ ಮೆಟ್ಟಿಲಿಗೆ ಹಾರುವುದು ಮೇಲ್ನೋಟಕ್ಕೆ ಅದರಲ್ಲೇನಿದೆ ವಿಶೇಷ ಅಂತ ಅನ್ನಿಸಿದರೂ, ಅಲ್ಲೊಂದು ಮಹಾನತೆ ಇದ್ದೇ ಇದೆ. ಅದು ಕೇವಲ ಕಟ್ಟಡದ ವಿಷಯವಲ್ಲ. ಹಾಕುವ ಯುನಿಫಾರಂಗಳ ವಿಷಯವಲ್ಲ. ಓದುವ ಸಬೆjಕ್ಟ್ಗಳ ಮ್ಯಾಟರ್ ಕೂಡ ಅಲ್ಲ. ಅದರಾಚೆ ನಿಮ್ಮ ವ್ಯಕ್ತಿತ್ವವೊಂದು ಎರಡನೇ ಮಜಲಿಗೆ ತೆರೆದುಕೊಳ್ಳುವ ಹಂತವದು. ಖುಷಿ ಮತ್ತು ಭಯವನ್ನು ಒಟ್ಟಿಗೆ ಎದುರಿಸುವ ಹಂತ ಜೀವನದಲ್ಲಿ ಯಾವುದಾದರೂ ಇದೆ ಎಂದಾದರೆ ಸ್ಕೂಲಿನಿಂದ ಕಾಲೇಜಿಗೆ “ಲಾಂಗ್ ಜಂಪ್’ ಮಾಡುವ ಸಂದರ್ಭವೇ ಆಗಿರುತ್ತದೆ.
ಒಂದರಿಂದ ಹತ್ತನೇ ತರಗತಿಯ ದಿನಗಳು ಶಾಲೆಯ ಘಟ್ಟ. ಅದು ಥೇಟ್ ಮನೆಯಂತೆ! ಒಂಚೂರು ಆಚೆ ಈಚೆ ಬದಲಿರಬಹುದು ಬಿಡಿ. ಶಿಕ್ಷಕರ ತೀವ್ರ ನಿಗಾದಲ್ಲಿ ನೀವು ಬೆಳೆಯುತ್ತೀರಿ, ಕಲಿಯುತ್ತೀರಿ. ಮ್ಯಾಥ್ಸ್- ಸೈನ್ಸ್‌ನಿಂದ ಹಿಡಿದು ಕುವೆಂಪು ಪದ್ಯದವರೆಗೂ ಕಲಿಯುತ್ತೀರಿ, ಹಾಡುತ್ತೀರಿ, ಕುಣಿಯುತ್ತೀರಿ. ಹೋಂ ವರ್ಕ್‌ಗೆ ಎದುರಾಗುತ್ತೀರಿ. ಒಂದು ದಿನ ಶಾಲೆಯಿಂದ ತಪ್ಪಿಸಿಕೊಂಡಿದ್ದಕ್ಕೆ ಹೊಡೆತಕ್ಕೆ ಹೆದರಿ ಅಳುತ್ತೀರಿ. ನೋಟ್ಸ್‌ಗೆ ಪರದಾಡುತ್ತೀರಿ. ಪಾಸ್- ಫೇಲ್ ವಿಷಯ ಬಂದಾಗ ನಡುಗುತ್ತೀರಿ. ಸ್ನೇಹಿತರೊಂದಿಗೆ ಕಿತ್ತಾಡುತ್ತಾ ಒಂದಾಗುತ್ತೀರಿ. ಬಣ್ಣದ ಬಟ್ಟೆಯೋ, ಯುನಿಫಾರಂ ಯಾವುದೋ ಒಂದು ಹಾಕಿಕೊಂಡು ಬಂದುಬಿಡುತ್ತೀರಿ. ಆಟ ಮತ್ತು ಓದಿನ ಕಡೆಗಷ್ಟೇ ನಿಮ್ಮ ಗಮನ. ಹೈಸ್ಕೂಲ್ ಹಂತಕ್ಕೆ ಬಂದಂತೆ “ಹೇ, ನೀನಿವಾಗ ಹೈಸ್ಕೂಲ್…’ ಅಂತ ಹೇಳಿ, ನೀವು ದೊಡ್ಡವರಾಗಿದ್ದೀರಿ ಎಂದು ನಿಮಗೆ ವಾರ್ನಿಂಗ್ ಕೊಡುತ್ತಿದ್ದರೂ ನಿಮ್ಮಲ್ಲಿ ಆ ಹುಡುಗತನ ಹಾಗೇ ಇರುತ್ತದೆ.
ಹತ್ತು ವರ್ಷ ಓದಿದ ಜ್ಞಾನದಿಂದಲೋ, ವಯಸ್ಸಿನ ಪ್ರಭಾವದಿಂದಲೋ ಹತ್ತನೇ ತರಗತಿಯ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ನೀವು ಗಂಭೀರವಾಗುತ್ತೀರಿ. ಶಿಕ್ಷಕರು ನಿಮ್ಮನ್ನು ಶಿಸ್ತುಬದ್ಧವಾಗಿಸಲು ಪ್ರಯತ್ನಿಸುತ್ತಾರೆ. ಮನೆಯಲ್ಲಿ ಎಲ್ಲರೂ ದೊಡ್ಡವರಂತೆ ನಡೆಸಿಕೊಳ್ಳುತ್ತಾರೆ. ಅವೆಲ್ಲದರ ಮಧ್ಯೆ ಎಸ್ಸೆಸ್ಸೆಲ್ಸಿಯಲ್ಲಿ ಚೆನ್ನಾಗಿ ಮಾರ್ಕ್ಸ್ ತಗೆಯಬೇಕು ಎಂಬ ಧಾವಂತ, ಅವೆಲ್ಲದರ ಮಧ್ಯೆ “ಕಾಲೇಜ್’ ಕನಸು ನಿಮ್ಮ ಮನಸಿನಲ್ಲಿ ಚಿಗುರೊಡೆಯುತ್ತದೆ. ನಿಮ್ಮ ಮುಂದೆ ನಿಮ್ಮ ಹಿರೀಕರು ಕಾಲೇಜಿಗೆ ಹೋಗುವ ವೈಖರಿ, ಅವರ ನಡೆನುಡಿ, ಠಾಕು ಠೀಕು ನಿಮ್ಮನ್ನು ಸೆಳೆದಿರುತ್ತದೆ. ಸಿನಿಮಾಗಳನ್ನು ನೋಡಿ ಕಾಲೇಜ್ ಅಂದರೆ ಹಿಂಗ್ ಹಿಂಗೇ ಇರುತ್ತದೆ ಎಂದು ಅದ್ಭುತ ಕಲ್ಪನೆಯೊಂದನ್ನು ಕಟ್ಟಿಕೊಂಡಿರುತ್ತೀರಿ. ಹೋಗುವ ಆಸೆ ಎಷ್ಟೋ, ಇಲ್ಲಿಂದ ಬಿಟ್ಟು ಹೋಗುವುದೂ ಅಷ್ಟೇ ಕಷ್ಟವಾಗಿರುತ್ತದೆ. ಎಷ್ಟೋ ಬಾರಿ ಕಣ್ಣೀರೂ ಹಾಕಿಬಿಡುತ್ತೀರಿ. ಮನೆಯಂತೆ ಸಾಕಿಕೊಂಡಿದ್ದ ಶಾಲೆಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದ ಮನಸ್ಸಿನಿಂದ ಹೊರಡುತ್ತೀರಿ. ಅಲ್ಲಿ ಕಾಲೇಜು ಕರೆದಿರುತ್ತದೆ.
ಕಾಲೇಜು ಅಂದ ತಕ್ಷಣ ನಿಮಗೊಂದು ಸ್ವಾತಂತ್ರÂ ಸಿಕ್ಕಿದೆ ಎಂಬ ಭಾವ ಮೂಡುತ್ತದೆ. ಮೊದಲ ದಿನವನ್ನಂತೂ ನೀವು ನಿಮ್ಮ ಲೈಫ್ನಲ್ಲಿ ಯಾವತ್ತೂ ಮರೆಯಲಾರಿರಿ. ಕಾಲೇಜಿಗೆ ಬಂದಿದೀನಿ ಅನ್ನೋ ಭಾವವೇ ನಿಮ್ಮನ್ನು ಪುಳಕಿತರನ್ನಾಗಿಸುತ್ತದೆ. ಹುಡುಗ ತನಗೆ ಗೊತ್ತಿಲ್ಲದೆ ಹುಡುಗಿಯರ ಗುಂಪಿನ ಕಡೆಗೆ ಒಂದು ಕಣ್ಣು ಹಾಯಿಸುತ್ತಾನೆ. ಹುಡುಗಿಯರೂ ಕದ್ದಾದರೂ ಹುಡುಗರ ಕಡೆ ತಮ್ಮ ಎಕ್ಸ್‌ರೇ ಕಂಗಳ ದೃಷ್ಟಿ ಹಾಯಿಸಿರುತ್ತಾರೆ. ಎಲ್ಲವೂ ಹೊಸತು. ಬಹುತೇಕ ಎಲ್ಲರೂ ಹೊಸಬರು. ಮುಜುಗರದ ಪರಿಚಯ, ಮುಜುಗರದ ಮಾತು. ಏನೋ ಭಯ. ಏನೋ ಖುಷಿ. ಎಲ್ಲವೂ ಮಿಳಿತ. ಎರಡು ಜಡೆಯಿಲ್ಲ. ಫ್ರಾಕ್ ಬದಲಿಗೆ ಚೂಡಿ. ಟೈನ ಬಿಗಿತವಿಲ್ಲ. ಮಣಭಾರದ ಚೀಲವಿಲ್ಲ. ಹೋಂ ವರ್ಕ್‌ನ ಕಿರುಕುಳವಿಲ್ಲ. ವಿಜ್ಞಾನ ಮತ್ತು ಸಮಾಜ ವಿಷಯಗಳನ್ನು ಮಿಕ್ಸ್ ಮಾಡಿ ಕಲಿಯುವ ಪೇಚಾಟವಂತೂ ಮೊದಲೇ ಇಲ್ಲ. ನಿಮ್ಮ ಇಷ್ಟದ ವಿಷಯವನ್ನು ಆಯ್ದುಕೊಂಡಿರುತ್ತೀರಿ. ಅದರಂತೆ ನಾಲ್ಕು ಬುಕ್‌ಗಳನ್ನು ಎತ್ತಿಕೊಂಡಿದ್ದೀರಿ. ಅಷ್ಟೇ ನಿಮ್ಮ ಸ್ಟಡಿ ಮಟೀರಿಯಲ್ಲು.
ಶಾಲೆಯ ಸರ್‌ಗಳಷ್ಟು ಯಾಕೋ ಲೆಕ್ಚರರ್‌ಗಳು ಬಿಗಿಯಿಲ್ಲ ಅನಿಸುತ್ತದೆ. ನಮಗೆ ಅಷ್ಟೊಂದು ಸ್ವಾತಂತ್ರ Âವೇ ಎಂಬ ಅನುಮಾನ ಮೂಡುತ್ತೆ! ನಮ್ ಸರ್‌ಗಳು ಯಾಕೆ ಅಷ್ಟೊಂದು ಗೋಳು ತಿಂದುಬಿಟ್ರಾ ಅನಿಸುತ್ತೆ. ಬೆಳಗ್ಗೆಯಿಂದ ಸಂಜೆಯವರೆಗೂ ನಿರಂತರ ತರಗತಿಗಳಿಲ್ಲ. ಮೂರೋ ನಾಲ್ಕೋ ಪೀರಿಯಡ್‌ಗಳು. ಕೆಲವೊಮ್ಮೆ ಖಾಲಿ ಖಾಲಿ ತರಗತಿಗಳು. ನಿಮಗೆ ನೀವೇ ಏನೋ ಕಳೆದುಕೊಂಡ ಭಾವ. ನಿಧಾನಕ್ಕೆ ಲೆಕ್ಚರರ್‌ಗಳ ಮೇಲಿನ ತೀವ್ರ ಅವಲಂಬನೆ ಕಡಿಮೆಯಾಗುತ್ತದೆ. ನೀವೇ ಸ್ವತಃ ಓದಿಕೊಳ್ಳಲು ಸಿದ್ದರಾಗುತ್ತೀರಿ. ಸಂಬಂಧಿಸಿದ ಪುಸ್ತಕಗಳನ್ನು ಹುಡುಕಲು ಆರಂಭಿಸುತ್ತೀರಿ. ಕೆಲವರು ಅದೇ ಸ್ವಾತಂತ್ರÂವನ್ನು ಸಿನೆಮಾ ಥಿಯೇಟರ್‌ಗೊà, ಇನ್ಯಾವುದೋ ಕೆಲಸಕ್ಕೊ ಬಳಸಿಕೊಳ್ಳುತ್ತಾರೆ. ಕಾಲೇಜು, ನಿಮಗೊಂದು ಜವಾಬ್ದಾರಿಯನ್ನು ಕಲಿಸಿಕೊಡುತ್ತದೆ. ಈ ಮೊದಲು ನಿಮ್ಮ ಜವಾಬ್ದಾರಿ ನಿಮ್ಮ ಶಿಕ್ಷಕರದ್ದಾಗಿತ್ತು. ನೀವು ಸಾಕಷ್ಟು ಫ್ರೀಯಾಗಿದ್ರಿ. ಈಗ ನಿಮ್ಮ ಲೆಕ್ಚರರ್ ಫ್ರೀಯಾಗಿದ್ದಾರೆ. ನೀವು ಜವಾಬ್ದಾರರಾಗಿದ್ದೀರಿ.
ಸ್ಕೂಲ್‌ನಲ್ಲಿ ಅವಳಲ್ಲಿ, ಅವನಲ್ಲಿ ಮಾತಾಡುವಾಗ ಯಾವುದೇ ಮುಜುಗರವಿರಲಿಲ್ಲ. ಭಾವನೆಗಳಿರಲಿಲ್ಲ. ಈಗ ಅದೆಂಥಧ್ದೋ ನಾಚಿಕೆ. ನಿಮ್ಮಲ್ಲಿ ನಿಮಗೆ ಗೊತ್ತಿಲ್ಲದೆ ಪರಸ್ಪರ ಆಕರ್ಷಿತರಾಗುವ ಭಾವ. ಕೆಲವೊಮ್ಮೆ ನಿಮ್ಮ ಲೆಕ್ಚರರ್‌ಗಳೇ ನಿಮಗೆ ಇಷ್ಟವಾಗಿಬಿಡುತ್ತಾರೆ. ಅವರೆಡೆಗೂ ಪ್ರೇಮಪತ್ರಗಳು ರವಾನೆಯಾಗುವುದುಂಟು. ಹುಡುಗ ಹುಡುಗಿಯರು ತಾವು ಪ್ರೀತಿ ಮಾಡುತ್ತಿದ್ದೇವೆ ಅಂತ ಭಾವಿಸಿಕೊಳ್ಳುವುದುಂಟು. ಲಘು ಆಕರ್ಷಣೆಯೂ ಇವರಿಗೆ ಸೀರಿಯಸ್ ಲವ್ವಿನಂತೆ ಭಾಸವಾಗುತ್ತದೆ. ಇದು ಅವರವರ ಜೀವನದಲ್ಲಿ ಅತ್ಯಂತ ಪ್ರಮುಖ ಘಟ್ಟ. ನದಿಯ ಮೇಲೆ ಕಟ್ಟಿದ ಹಗ್ಗದ ಮೇಲಿನ ಸವಾರಿ ನಿಮ್ಮದು. ಸ್ವಲ್ಪ ಯಾಮಾರಿದರೂ ಕೆಳಕ್ಕೆ ಬಿದ್ದು ನದಿಯಲ್ಲಿ ಮುಳುಗಿ ಹೋಗುತ್ತೀರಿ. ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ. ಆದ್ದರಿಂದ ನಿಮ್ಮ ನಿಮ್ಮ ವರ್ತನೆಗಳಿಗೆ ನೀವೇ ಜವಾಬ್ದಾರರಾಗುತ್ತೀರಿ.
ಬದಲಾವಣೆ ಜಗದ ನಿಯಮ. ನೀವಂದುಕೊಂಡ ಗುರಿಯನ್ನು ಮುಟ್ಟಬೇಕಾದರೆ ಶಾಲೆ, ಅಲ್ಲಿಂದ ಕಾಲೇಜ್, ವಿಶ್ವದ್ಯಾಲಯಗಳ ಓದು, ತರಬೇತಿ ಕೋರ್ಸ್‌ಗಳಿಗೆ ಹೋಗಲೇಬೇಕು. ಆದರೆ ಆಯಾ ಹಂತದಲ್ಲಿ ಶಿಕ್ಷಣ ಕಲಿಸುವ ಪಾಠ, ಆಯಾ ಹಂತದಲ್ಲಿ ಅನುಭವಗಳು ಕಲಿಸುವ ಪಾಠ, ಜೊತೆಗೆ ನಿಮ್ಮ ಗುರಿಯ ಪ್ರಜ್ಞೆ ಎಲ್ಲವನ್ನೂ ಸೇರಿಸಿಕೊಂಡು ಒಂದು ಅದ್ಭುತವಾದ ದಾರಿಯನ್ನು ನಿರ್ಮಿಸಿಕೊಳ್ಳಬೇಕಾಗುತ್ತದೆ. ಶಾಲೆ ಶಾಶ್ವತವಲ್ಲ. ಅಲ್ಲಿಂದಲೇ ಕಾಲೇಜಿಗೆ ಬಂದಿರಿ. ನೀವು ಪಡೆದ ಶಿಕ್ಷಣಕ್ಕೆ ಒಂದು ಕೆಲಸ ಅಂತ ಹಿಡಿಯುತ್ತೀರಿ. ಆಗ ಅಲ್ಲಿಯದೇ ಒಂದು ಲೈಫ್ ಶುರುವಾಗುತ್ತದೆ. ಒಂದು ನೆನಪಿರಲಿ: ಜೀವನದ ಪ್ರತಿ ಹಂತದಲ್ಲೂ ಎಲ್ಲವೂ ಇರುತ್ತದೆ. ನಮಗೆ ಬೇಕಾದದ್ದನ್ನು ಎತ್ತಿಟ್ಟುಕೊಳ್ಳಬೇಕು. ಸಿಗುವುದೆಲ್ಲಾ ಬಾಚಿಕೊಂಡರೆ ಅದರಿಂದ ತೊಂದರೆಗಳೂ ಆಗಬಹುದು. ಬದಲಾವಣೆಯನ್ನು ತುಂಬು ಹೃದಯದಿಂದಲೇ ಸ್ವಾಗತಿಸಿ, ಒಪ್ಪಿಕೊಳ್ಳಿ. ಮತ್ತು ಅದರಿಂದ ಬೆಳೆಯಿರಿ. ನೀವು ಶಾಲೆಯಲ್ಲಿದ್ದರೆ ಕಾಲೇಜು ಜೀವನಕ್ಕೆ, ಕಾಲೇಜಿನಲ್ಲಿದ್ದರೆ ವೃತ್ತಿ ಜೀವನಕ್ಕೆ ನಿಮಗೊಂದು ಆಲ್ ದಿ ಬೆಸ್ಟ್!
– ಸದಾಶಿವ್ ಸೊರಟೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.