ಗುರುಪ್ರಸಾದ್‌ ಬದಲಾಗಿದ್ದಾರೆ!


Team Udayavani, Apr 25, 2017, 11:27 AM IST

guruprasad.jpg

ಗುರುಪ್ರಸಾದ್‌ ಬದಲಾಗಿದ್ದಾರೆ. ಅವರು ಮನೆಬಿಟ್ಟು ಹೊರಗಡೆ ಬಂದಿದ್ದಾರೆ. ಕ್ಲೋಸಪ್‌ನಿಂದ ವೈಡ್‌ ಆಗಿದ್ದಾರೆ. ಲಕ್ಷದಿಂದ ಕೋಟಿಗೆ ಏರಿದ್ದಾರೆ. ಜೊತೆಗೆ ಸ್ಮಶಾನ ಕೂಡಾ ಹುಡುಕುತ್ತಿದ್ದಾರೆ! – ಹೀಗೆಂದರೆ ನೀವು ತಪ್ಪು ತಿಳಿಯುವ ಅಗತ್ಯವಿಲ್ಲ. ಇದು ಗುರುಪ್ರಸಾದ್‌ ಅವರು ತಮ್ಮ ಹೊಸ ಸಿನಿಮಾಕ್ಕಾಗಿ ಬದಲಾದ ಹಾಗೂ ತಯಾರಿ ಮಾಡಿಕೊಂಡಿರುವ ರೀತಿ. ಗುರುಪ್ರಸಾದ್‌ ಅವರು ಈಗ “ಅದೇಮಾ’ ಎಂಬ ಮಾಡುತ್ತಿದ್ದಾರೆ. ಅನೂಪ್‌ ಸಾ.ರಾ.ಗೋವಿಂದು ಈ ಚಿತ್ರದ ನಾಯಕ.

ಸೋಮವಾರ ಆ ಚಿತ್ರದ ಮುಹೂರ್ತ ಕೂಡಾ ಅದ್ಧೂರಿಯಾಗಿ ನಡೆದಿದೆ. ಗುರುಪ್ರಸಾದ್‌ ಅವರ ಈ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದರೆ ಬಹುತೇಕ ಒಂದು ಮನೆ ಅಥವಾ ಒಂದೆರಡು ಲೊಕೇಶನ್‌ಗಳಲ್ಲಷ್ಟೇ ಕಾಣುತ್ತಿತ್ತು. ಜೊತೆಗೆ ಕ್ಲೋಸಪ್‌ ಶಾಟ್‌ಗಳಲ್ಲೇ ಸಿನಿಮಾ ಮುಗಿಸುತ್ತಿದ್ದರು ಗುರು. ಬಹುತೇಕ ಲಕ್ಷದೊಳಗೆ ಸಿನಿಮಾ ಕೂಡಾ ಮುಗಿದು ಹೋಗುತ್ತಿತ್ತು. ಆದರೆ, ಗುರುಪ್ರಸಾದ್‌ “ಅದೇಮಾ’ ಚಿತ್ರದಲ್ಲಿ ಸಂಪೂರ್ಣ ಬದಲಾಗಿದ್ದಾರೆ.

ಈ ಬಾರಿ ಮನೆ ಬದಲು ಸಂಪೂರ್ಣವಾಗಿ ಔಟ್‌ಡೋರ್‌ ಶೂಟಿಂಗ್‌ ಮಾಡಲು ನಿರ್ಧರಿಸಿದ್ದಾರೆ. ಕರ್ನಾಟಕದ ಸುಂದರ ತಾಣಗಳಲ್ಲಿ “ಅದೇಮಾ’ ಚಿತ್ರೀಕರಣ ಮಾಡಲಿದ್ದಾರಂತೆ. ಹಾಗಾಗಿ, ಬಜೆಟ್‌ ಕೂಡಾ ಲಕ್ಷದಿಂದ ಕೋಟಿ ದಾಟುತ್ತದೆ. ಕೆಲವೇ ಕೆಲವು ಕಲಾವಿದರನ್ನಿಟ್ಟುಕೊಂಡು ಸಿನಿಮಾ ಮುಗಿಸುತ್ತಿದ್ದ ಗುರುಪ್ರಸಾದ್‌ ಈ ಬಾರಿ ತುಂಬು ತಾರಾಗಣದ ಜೊತೆಗೆ ಚಿತ್ರೀಕರಣ ಮಾಡಲಿದ್ದಾರೆ. ಶ್ರೀಧರ್‌ ರೆಡ್ಡಿ ಈ ಸಿನಿಮಾದ ನಿರ್ಮಾಪಕರು.

ಅಂದಹಾಗೆ, “ಅದೇಮಾ’ ಎಂದರೆ ಏನು ಎಂಬ ಕುತೂಹಲವಿದೆ. ಆ ಕುತೂಹಲವನ್ನು ಈಗಲೇ ಬಿಟ್ಟುಕೊಡಲು ಗುರುಪ್ರಸಾದ್‌ ರೆಡಿಯಿಲ್ಲ. ಮುಂದಿನ ದಿನಗಳಲ್ಲಿ “ಅದೇಮಾ’ ಅಂದರೇನು, ಅದರ ಹಿಂದಿನ ಅರ್ಥವೇನು ಎಂಬುದನ್ನು ಹೇಳುತ್ತಾರಂತೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಈ ತರಹದ ಒಂದು ಕಥೆ ಬಂದಿಲ್ಲ ಎಂಬುದು ಗುರುಪ್ರಸಾದ್‌ ಅವರ ವಿಶ್ವಾಸದ ನುಡಿ.

ಚಿತ್ರದ ಬಹುತೇಕ ಚಿತ್ರೀಕರಣ ಸ್ಮಶಾನದಲ್ಲೇ ನಡೆಯುವುದರಿಂದ ಸ್ಮಶಾನಗಳಿಗಾಗಿ ಗುರುಪ್ರಸಾದ್‌ ಅಂಡ್‌ ಟೀಂ ಹುಡುಕಾಟ ನಡೆಸುತ್ತಿದೆಯಂತೆ. ನಾಯಕಿಯ ಪಾತ್ರ ತುಂಬಾ ವಿಭಿನ್ನವಾಗಿದ್ದು, ಸ್ಪಷ್ಟವಾಗಿ ಕನ್ನಡ ಮಾತನಾಡುವ ನಾಯಕಿ ಬೇಕಾಗಿದೆಯಂತೆ. ಹಾಗಾಗಿ, ಆಡಿಷನ್‌ ಮೂಲಕ ನಾಯಕಿಯನ್ನು ಆಯ್ಕೆ ಮಾಡಲು ಗುರುಪ್ರಸಾದ್‌ ತೀರ್ಮಾನಿಸಿದ್ದಾರೆ.ಈ ಸಿನಿಮಾದ ಜೊತೆಗೆ ಕೊನೆವರೆಗೂ ಇದ್ದು, ವಿಜಯದಶಮಿಗೆ ಬಿಡುಗಡೆ ಮಾಡುತ್ತಾರಂತೆ ಗುರು.

ಟಾಪ್ ನ್ಯೂಸ್

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್‌ ಕುಮಾರ್‌

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.