ಗಾಂಧಿ ಭವನ ಕಾಮಗಾರಿ ಚುರುಕು
Team Udayavani, Apr 25, 2017, 11:55 AM IST
ಬೆಂಗಳೂರು: ಖಾದಿ ಉದ್ಯಮ ಪ್ರೋತ್ಸಾಹಿಸಲು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಿಸುವ ಕಾರ್ಯ ಚುರುಕುಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿ ವತಿಯಿಂದ ಕಬ್ಬನ್ ಪಾರ್ಕ್ನಲ್ಲಿ ಏ.24ರಿಂದ ಮೇ 23ರವರೆಗೆ ಆಯೋಜಿಸಿರುವ ರಾಷ್ಟ್ರಮಟ್ಟದ “ಖಾದಿ ಉತ್ಸವ-2017’ಕ್ಕೆ ಚಾಲನೆ ನೀಡಿ ಮಾತನಾಡಿದರು
ರಾಜ್ಯದಲ್ಲಿ ಖಾದಿ ಉದ್ಯಮಕ್ಕೆ ಹೆಚ್ಚು ಉತ್ತೇಜನ ನೀಡಲು ಪ್ರತಿ ಜಿಲ್ಲಾ ಕೇಂದ್ರ ಒಂದು ಗಾಂಧಿ ಭವನ ಸ್ಥಾಪಿಸಬೇಕು ಎಂದು ಕಳೆದ ವರ್ಷದ ಬಜೆಟ್ನಲ್ಲಿ ತಲಾ 3 ಕೋಟಿ ರೂ. ಹಣ ಮೀಸಲಿಡಲಾಗಿತ್ತು. ಆದರೆ, ಇದುವರೆಗೆ ಕೆಲಸ ಆಗಿಲ್ಲ. ಆದ್ದರಿಂದ ಎಲ್ಲ ಜಿಲ್ಲಾಧಿಕಾರಿ ಗಳಿಗೆ ಪತ್ರ ಬರೆದು ಶೀಘ್ರವೇ ಕೆಲಸ ಆರಂಭಿಸುವಂತೆ ಸೂಚನೆ ನೀಡುತ್ತೇನೆ.
ಖಾದಿ ವಸ್ತ್ರ ತಯಾರಿಸುವ ಗುಡಿ ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಗೆ ಸರ್ಕಾರ ನೆರವು ಕೊಡುತ್ತಿದೆ. ಮಂಡಳಿಗೆ ಕಳೆದ ವರ್ಷ 140 ಕೋಟಿ ರೂ. ಹಣ ನೀಡಲಾಗಿತ್ತು. ಈ ಬಾರಿಯು 40 ಕೋಟಿ ರೂ. ಹಣ ನೀಡಲಾಗಿದೆ ಎಂದು ಹೇಳಿದರು.
ಪಂಚೆ ಖರೀದಿಸಿದ ಸಿದ್ದರಾಮಯ್ಯ
ಖಾದಿ ಉತ್ಸವ ಉದ್ಘಾಟಿಸಿದ ಬಳಿಕ ಮಾರಾಟ ಮಳಿಗೆಗಳನ್ನು ವೀಕ್ಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ವೇಳೆ ಮಳಿಗೆಯೊಂದಕ್ಕೆ ತೆರಳಿ 4,250 ರೂ. ಮೌಲ್ಯದ 6 ಪಂಚೆಗಳನ್ನು ಖರೀದಿಸಿದರು. ಮುಖ್ಯಮಂತ್ರಿ ಯವರೇನೂ ಪಂಚೆ ಖರೀದಿಸಿದರು. ಆದರೆ, ಬಿಲ್ ಯಾರು ಕೊಟ್ಟರು ಎಂದು ಗೊತ್ತಾಗಿಲ್ಲ. ವಿವಿಧ ಐದು ಬಗೆಯ ಪಂಚೆಗಳನ್ನು ನೋಡಿದ ಸಿಎಂ ಅಲ್ಲೇ ಪಂಚೆ ತೊಟ್ಟು ಪರೀಕ್ಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.