ಡಬ್ಟಾ ಅಂಗಡಿ ತೆರವು ವಿರೋಧಿಸಿ ಪ್ರತಿಭಟನೆ
Team Udayavani, Apr 25, 2017, 1:18 PM IST
ಧಾರವಾಡ: ಮಹಾನಗರ ಪಾಲಿಕೆ ಆಯುಕ್ತರು ದಬ್ಟಾಳಿಕೆ ನಡೆಸಿ ತೆರವು ಕಾರ್ಯಾಚರಣೆ ಮಾಡಿರುವುದನ್ನು ಖಂಡಿಸಿ ಸಮಗಾರ ಹರಳಯ್ಯ ಕ್ಷೇಮಾಭಿವೃದ್ಧಿ ಕಮಿಟಿ ವತಿಯಿಂದ ನಗರದ ಜಿಲ್ಲಾಧಿಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಪುಟ್‌ಪಾತ್ ಕಾರ್ಯಾಚರಣೆಯಲ್ಲಿ ಆಯುಕ್ತರು ಡಬ್ಟಾ ಅಂಗಡಿಕಾರರ ಅಂಗಡಿಗಳನ್ನು ತೆರವು ಮಾಡುವ ಮೂಲಕ ತಮ್ಮ ಹೊಟ್ಟೆ ಮೇಲೆ ಹೊಡೆದಿದ್ದಾರೆ. ಈ ಮೂಲಕ ದಲಿತ ಕುಟುಂಬಗಳು ಬೀದಿಗೆ ಬಂದಿದ್ದಾರೆ. ಇದನ್ನು ಪ್ರಶ್ನಿಸಿ ಅವರ ಬಳಿ ಹೋದಾಗ ತಮ್ಮನ್ನು ಅವಮಾನ ಮಾಡುವ ಮೂಲಕ ಸಮಸ್ಯೆಗೆ ಸ್ಪಂದಿಸದಿರುವುದು ವಿಷಾದದ ಸಂಗತಿಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಗರದ ನೆಹರು ಮಾರುಕಟ್ಟೆಯಲ್ಲಿರುವ ರೇಗೆ ಗ್ಯಾರೇಜ್ ಪಕ್ಕದ ಸಂದಿ ಖುಲ್ಲಾ ಜಾಗೆಯಲ್ಲಿ ಈ ಹಿಂದೆ ನಡೆದ ಪುಟ್‌ಪಾತ್ ತೆರವು ವೇಳೆ 6×4 ಅಳತೆಯ ಡಬ್ಟಾ ಅಂಗಡಿಗಳನ್ನು ಇಡಲು 2006ರ ಮೇ 18ರಂದು ಪಾಲಿಕೆ ಠರಾವು ಮಂಡಿಸಿದ್ದು, ಇದನ್ನು ಆಯುಕ್ತರಿಗೆ ಹೇಳಲು ಹೋದಾಗ ಅಹವಾಲು ಸ್ವೀಕರಿಸದೇ ಅವಮಾನ ಮಾಡಿದ್ದಾರೆ ಎಂದು ದೂರಿದರು. ಪಾಲಿಕೆಯೇ ಸ್ವತಃ ಠರಾವು ಮಂಡಿಸಿದ್ದು,
ಒಂದು ವೇಳೆ ಈ ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ನ್ಯಾಯಕ್ಕಾಗಿ ಪಾಲಿಕೆ ಮುಂದೆ ಅಹೋರಾತ್ರಿ ಧರಣಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ರಮೇಶ ದೊಡವಾಡ, ರಾಜೇಂದ್ರ ಗಾಮನಗಟ್ಟಿ, ಕುಮಾರ ವಕ್ಕುಂದ, ಸಂತೋಷ ದೊಡವಾಡ, ವಿಜಯ ಗಡೇದವರ, ಮೈಲಾರಿ ಚಂದಾವರಿ, ಗಣೇಶ ಹೆಬ್ಬಳ್ಳಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
ಕುರಿ ಕಾಯುತ್ತಲೇ ಹಾಡು ಕಲಿತ ಇಮಾಮಸಾಬಗೆ ರಾಜ್ಯೋತ್ಸವ ಪ್ರಶಸ್ತಿ ಗರಿ; ಡೊಳ್ಳಿನ ಭಾವೈಕ್ಯತೆ
ಹುಬ್ಬಳ್ಳಿ ಟೆಕ್ಕಿ 24 ತಾಸು ಡಿಜಿಟಲ್ ಅರೆಸ್ಟ್! ಯಾರೊಂದಿಗೂ ಸಂಪರ್ಕ ಸಾಧಿಸದಂತೆ ನಿರ್ಬಂಧ
B.Z. Zameer Ahmed Khan;ನಾನು ಶುದ್ದ ಹಿಂದೂಸ್ಥಾನಿ ಭಾರತೀಯ, 24 ಕ್ಯಾರೆಟ್ ಗೋಲ್ಡ್..
Waqf; ಬಿಜೆಪಿ ಸರಕಾರದ ಅವಧಿಯಲ್ಲಿ ನೋಟಿಸ್ ನೀಡಿದ್ದರೂ ತಪ್ಪು: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.