ಆದರ್ಶ ಅನುವಾದ ಅಕಾಡೆಮಿಯಿಂದ ಅನುವಾದಕರ ಸಮಾವೇಶ ಸಮಾರೋಪ
Team Udayavani, Apr 25, 2017, 5:11 PM IST
ಮುಂಬಯಿ: ಅನುವಾದಕ ಒಬ್ಬ ಸಂವಹನಕಾರನಾಗಬೇಕು. ಅಪೂರ್ಣ ಜ್ಞಾನದ ಅನುವಾದಕ ಸಂವಹನಕಾರನಾಗದೇ ಸಂಹಾರಕ ನಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸೃಜನಶೀಲ ಸಾಹಿತಿಯಷ್ಟೇ ಜವಾಬ್ದಾರಿ ಅನುವಾದಕನಿಗಿರುತ್ತದೆ. ಅನುವಾದಕರಿಗೆ ಎರಡನೆಯ ದರ್ಜೆ ಯವನು ಎಂಬ ಹಣೆಪಟ್ಟಿ ಎಂದಿಗೂ ಯೋಗ್ಯವಲ್ಲ. ಆತನೂ ಸಾಹಿತಿಯಷ್ಟೇ ಶ್ರೇಷ್ಠನಾಗಿರುತ್ತಾನೆ. ಅನುವಾದಕರ ಸಮ್ಮಿಲನದೊಂದಿಗೆ 2 ದಿನದ ಕಾರ್ಯ ಕ್ರಮ ಅರ್ಥಪೂರ್ಣವಾಗಿ ಮೂಡಿ ಬಂದಿರುವುದು ಅಭಿ ನಂದನೀಯ. ಇಂಥಹ ಕಾರ್ಯ ಕ್ರಮಗಳು ನಿರಂತರವಾಗಿ ನಡೆ ಯುತ್ತಿರುವುದರಿಂದ ಕನ್ನಡ- ಮರಾಠಿ ಸಾಹಿತ್ಯದ ನಡುವೆ ಬಾಂಧವ್ಯ ವೃದ್ಧಿಯಾಗಿ ವಿನೂತನ ಕೃತಿಗಳು ಎರಡೂ ಭಾಷೆಗಳಲ್ಲಿ ಬರಲು ಸಾಧ್ಯವಾಗಬಹುದು ಎಂದು ನಗರದ ಜಾಹೀರಾತು ಕ್ಷೇತ್ರದ ಸಾಧಕ ಮನೋಹರ ನಾಯಕ್ ಅವರು ನುಡಿದರು.
ಇತ್ತಿಚೆಗೆ ಮುಂಬಯಿಯಲ್ಲಿ ಆದರ್ಶ ಅನುವಾದ ಅಕಾಡೆಮಿ ಹಾಗೂ ಅಕ್ಷತಾ ದೇಶಪಾಂಡೆ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅನುವಾದಕರ ಸಮಾವೇಶದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ಯುವ ಅನುವಾದಕರು ಪಾಲ್ಗೊಳ್ಳಬೇಕು ಎಂದು ನುಡಿದು, ಜಾಹೀರಾತು ಕ್ಷೇತ್ರಗಳಲ್ಲಿ ಅನುವಾದದಲ್ಲಿ ಆಗುತ್ತಿರುವ ಎಡವಟ್ಟುಗಳನ್ನು ಸೂಕ್ಷ್ಮವಾಗಿ ವಿವರಿಸಿ, ಅನುವಾದಕರಿಗೆ ಹಾಗೂ ಮರಾಠಿಯ ಮೂಲ ಲೇಖಕರಿಗೆ ಒಟ್ಟು ಒಂದು ಲಕ್ಷ ರೂ. ಗಳ ಗೌರವಧನವನ್ನು ನೀಡಿದರು.
ಲೇಖಕ ಪ್ರೇಮಶೇಖರ್ ಅವರು ಕನ್ನಡ ಕಥಾ ಪ್ರಪಂಚದ ಕುರಿತು ಉಪನ್ಯಾಸ ನೀಡಿ, ನವ್ಯಕಾಲದಿಂದ ಪ್ರಾರಂಭಿಸಿ ಇಂದಿನ ಕಥೆಗಳು ಹಾಗೂ ಕಥೆಗಾರರ ಮೇಲೂ ಬೆಳಕು ಚೆಲ್ಲಿದರು. ವಿವೇಕ್ ಶ್ಯಾನ್‌ಭಾಗ್, ಸುನಂದಾ ಕಡಮೆ ಹಾಗೂ ಸುಮಂಗಲಾರಂತಹ ಒಳ್ಳೆಯ ಕಥೆಗಾರರು ಕಥಾಲೋಕದತ್ತ ಆಸೆಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ನಡೆದ ಉಪನ್ಯಾಸ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಅನುವಾದಕಿ ಡಾ| ಸುಮಾ ದ್ವಾರಕಾನಾಥ್ ಅವರು ಮಾತನಾಡಿ, ಅನುವಾದ ಕ್ಷೇತ್ರಕ್ಕೆ ಮನ್ನಣೆ ಇಲ್ಲ ಎನ್ನುವುದು ತಪ್ಪು. ಇಂದಿನ ಎಲ್ಲ ಸಾಹಿತ್ಯವು ಒಂದಲ್ಲ ಒಂದು ರೀತಿಯಲ್ಲಿ ಯಾವುದೋ ಒಂದು ಮೂಲ ಸಾಹಿತ್ಯದಿಂದ ಪ್ರೇರಣೆ ಪಡೆದುದೇ ಆಗಿದೆ ಅಥವಾ ಅನುವಾದವೇ ಆಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿ ಸಿದ್ದ ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗದ ಡಾ| ಗಿರಿಜಾ ಶಾಸ್ತ್ರೀ ಅವರು ಮಾತನಾಡಿ, ಗಾದೆ ಮಾತುಗಳ ಅನುವಾದದಲ್ಲಿ ತುಂಬಾ ಜಾಣ್ಮೆ ಇರಬೇಕು. ಅವನ್ನು ಶಬ್ದಾರ್ಥವಾಗಿ ಅನುವಾದಿಸಬಾರದು. ಆಯಾ ಭಾಷೆಗಳಲ್ಲಿ ಇರುವ ಹೋಲಿಕೆಯುಳ್ಳ ಗಾದೆ ಮಾತುಗಳನ್ನು ಬಳಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಾಹಿತ್ಯ ಪ್ರೇಮಿ ಪ್ರಶಾಂತ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆದರ್ಶ ಕನ್ನಡ ಬಳಗದ ಅಧ್ಯಕ್ಷ ಮಲಿಕಜಾನ ಶೇಖ್ ಅವರು ಮಾತನಾಡಿ, ಅನುವಾದಕರು ಇಲ್ಲದೇ ಹೋದಲ್ಲಿ ವಿಶ್ವದಲ್ಲಿನ ಸಾಹಿತ್ಯವನ್ನು ನಾವು ಓದಲು ಸಾಧ್ಯವಾಗುತ್ತಿರಲಿಲ್ಲ. ಆದರ್ಶ ಅನುವಾದ ಅಕಾಡೆಮಿಯು ಆದರ್ಶಪ್ರಾಯವಾದ ಅನುವಾದ ಗಳನ್ನು ಮಾಡಲಿ ಎಂದು ಹಾರೈಸಿದರು.
ಡಾ| ಸಿದ್ರಾಮ ಕಾರ್ಣಿಕ್, ಪ್ರಭಾ ಬೋರಗಾಂವ್ಕರ್, ಶರಣಪ್ಪ ಫುಲಾರಿ, ರಾಜೇಂದ್ರ ಜಿಗಜಿಣಗಿ, ಕಲ್ಲಪ್ಪ ಅಡಲಟ್ಟಿ, ಮಲ್ಲಮ್ಮಾ ಸಾಲೆಗಾಂವ್, ಚಂದ್ರಕಾಂತ ಕಾರ್ಕಳ, ಸೋಮಶೇಖರ ಜಮಶೆಟ್ಟಿ, ಬಸವರಾಜ ಅಲದಿ, ಅಪರ್ಣಾ ರಾವ್, ಗುರು ಬಿರಾದಾರ ಸೇರಿದಂತೆ ಹಲವಾರು ಅನುವಾದಕರು ಹಾಗೂ ಸೃಜನಾ ಲೇಖಕಿಯರ ಬಳಗದ ಸದಸ್ಯರು ಸಮಾರಂಭದಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಭಾಗವಹಿಸಿದ್ದರು.
ಸಂಗೀತ ಕಲಾವಿದ ಮಹೇಶ ಮೇತ್ರಿ ಇವರಿಂದ ಸಂಗೀತ ರಜನಿ ಕಾರ್ಯಕ್ರಮವನ್ನು ಆಯೋ ಜಿಸಲಾಗಿತ್ತು. ಕಾರ್ಯಕ್ರಮ ವನ್ನು ಆಯೋಜಿಸಿದ ಅಕ್ಷತಾ ದೇಶಪಾಂಡೆಯವರು ಪ್ರಸ್ತಾವನೆ ಗೈದರು. ಅನುವಾದಕಿ ವಿದ್ಯಾ ಕುಂದರಗಿ ಕಾರ್ಯಕ್ರಮ ನಿರ್ವಹಿಸಿ ದರು. ಹಿರಿಯ ಅನುವಾದಕ ಜೆ. ಪಿ. ದೊಡಮನಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.