ಮುದ ನೀಡುವ ಮಿಲ್ಕ್ಶೇಕ್‌ಗಳು
Team Udayavani, Apr 26, 2017, 3:50 AM IST
1. ಚಾಕೋಲೇಟ್ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ಹಾಲು- 3/4 ಕಪ್, ಚಾಕೋಲೇಟ್ ಸಿರಪ್-1/4 ಕಪ್, ವೆನಿಲ್ಲಾ ಐಸ್‌ಕ್ರೀಂ- 1/2 ಕಪ್
ಮಾಡುವ ವಿಧಾನ: ಹಾಲು ಹಾಗೂ ಚಾಕೋಲೇಟ್ ಸಿರಪ್ ಅನ್ನು ಮಿಕ್ಸರ್‌ನಲ್ಲಿ ಹಾಕಿ ರುಬ್ಬಿ. ನಂತರ ಐಸ್‌ಕ್ರೀಂ ಹಾಕಿ ಪುನಃ ಐದು ಸೆಕೆಂಡ್‌ಗಳ ಕಾಲ ರುಬ್ಬಿ, ಗ್ಲಾಸ್‌ಗೆ ಸುರಿದು ತಕ್ಷಣ ತಿನ್ನಲು ಕೊಡಿ.
2. ಪಂಪ್‌ಕಿನ್ ಪೈ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ಐಸ್‌ಕ್ರೀಂ- 2 ಕಪ್, ಹಾಲು- 1/2 ಕಪ್, ಕುಂಬಳಕಾಯಿ ರಸ- 1/4 ಕಪ್, 8 ರಿಂದ 10- ಕತ್ತರಿಸಿ, ಬೇಯಿಸಿದ ಕುಂಬಳಕಾಯಿ ತುಂಡುಗಳು.
ಮಾಡುವ ವಿಧಾನ: ಮೊದಲು ಐಸ್‌ಕ್ರೀಂ, ಹಾಲು, ಕುಂಬಳಕಾಯಿ ತುಂಡುಗಳನ್ನು ಮಿಕ್ಸರ್‌ಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇದಕ್ಕೆ ಕುಂಬಳಕಾಯಿ ರಸ ಸೇರಿಸಿ ಪುನಃ ರಬ್ಬಬೇಕು. ನಂತರ ಕಪ್‌ಗ್ಳಿಗೆ ಹಾಕಿ ಮೇಲೆ ಐಸ್‌ಕ್ರೀಂ ಹಾಕಿ. ಬೇಯಿಸಿದ ಪಂಪ್‌ಕಿನ್‌ನಿಂದ ಗಾರ್ನಿಷ್ ಮಾಡಿ ತಕ್ಷಣ ಸರ್ವ್ ಮಾಡಿ.
3. ಆ್ಯಪಲ್ ಪೈ ಶೇಕ್
ಬೇಕಾಗುವ ಸಾಮಗ್ರಿ: ಸೇಬು ಹಣ್ಣಿನ ತುಂಡು- 9 ರಿಂದ 10, ಐಸ್‌ಕ್ರೀಂ- 2 ಕಪ್, ಏಲಕ್ಕಿ ಪುಡಿ- ಸ್ವಲ್ಪ, ಹಾಲು- 1/4 ಕಪ್.
ಮಾಡುವ ವಿಧಾನ: ಮೊದಲು ಮಿಕ್ಸರ್‌ಗೆ ಸೇಬು ಹಣ್ಣಿನ ತುಂಡು ಮತ್ತು ಹಾಲು ಹಾಕಿ ರುಬ್ಬಿ. ನಂತರ ಐಸ್‌ಕ್ರೀಂ ಬೆರೆಸಿ. ಪುನಃ ರುಬ್ಬಿ, ಏಲಕ್ಕಿ ಪುಡಿ ಬೆರೆಸಿ ಸವಿಯಲು ಕೊಡಿ.
4. ಓರಿಯೋ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ಓರಿಯೋ ಬಿಸ್ಕೆಟ್ಸ್- 8 ರಿಂದ 9, ಚಾಕ್ಲೆಟ್ ಸಿರಪ್- 4 ಚಮಚ, ಹಾಲು- 1 ಕಪ್, ವೆನಿಲ್ಲ ಐಸ್‌ಕ್ರೀಂ- 2 ಕಪ್.
ಮಾಡುವ ವಿಧಾನ: ಮೊದಲು 1 ಚಮಚ ಚಾಕ್ಲೆಟ್ ಸಿರಪ್ ಅನ್ನು 4 ಗ್ಲಾಸ್‌ಗಳಿಗೆ ಹಾಕಬೇಕು. ನಂತರ ಇದರ ಮೇಲೆ ಪೀಸ್ ಮಾಡಿದ ಓರಿಯೋ ಬಿಸ್ಕೆಟ್ ಅನ್ನು ಹಾಕಬೇಕು. ನಂತರ ಉಳಿದ ಓರಿಯೋ ಬಿಸ್ಕೆಟ್ ಅನ್ನು ಮಿಕ್ಸರ್‌ನಲ್ಲಿ ಹಾಲಿನೊಂದಿಗೆ ಹಾಕಿ ರುಬ್ಬಿಕೊಳ್ಳಿ. ಐಸ್‌ಕ್ರೀಂ ಹಾಕಿ ಪುನಃ ರುಬ್ಬಬೇಕು.
5. ವೆನಿಲ್ಲಾ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ವೆನಿಲ್ಲಾ ಐಸ್‌ಕ್ರೀಂ- 2 ಕಪ್, ವೆನಿಲ್ಲಾ- 2 ಚಮಚ, ಹಾಲು- 1 ಕಪ್.
ಮಾಡುವ ವಿಧಾನ: ಮಿಕ್ಸರ್‌ಗೆ ವೆನಿಲ್ಲಾ ಐಸ್‌ಕ್ರೀಂ ಹಾಗೂ ಹಾಲು ಸೇರಿಸಿ ರುಬ್ಬಿ, ತಕ್ಷಣ ಸವಿಯಲು ಕೊಡಿ.
6. ಬನಾನಾ ಮಿಲ್ಕ್ಶೇಕ್
ಬೇಕಾಗುವ ಸಾಮಗ್ರಿ: ಬಾಳೆಹಣ್ಣು- 2, ಹಾಲು- 1 ಕಪ್, ಕಂಡೆನ್ಸ್‌ಡ್ ಮಿಲ್ಕ್- 1/4 ಕಪ್, ಬಾದಾಮಿ (ನೆನೆಸಿದ್ದು)- 8 ರಿಂದ 10, ಐಸ್‌ಕ್ರೀಂ- 1 ಕಪ್.
ಮಾಡುವ ವಿಧಾನ: ಬಾಳೆಹಣ್ಣು ಮತ್ತು ನೆನೆಸಿದ ಬಾದಾಮಿಯನ್ನು ಮಿಕ್ಸರ್‌ಗೆ ಹಾಕಿ ರುಬ್ಬಿಕೊಂಡು ನಂತರ ಹಾಲು, ಕಂಡೆನ್ಸ್‌ಡ್ ಮಿಲ್ಕ್ ಸೇರಿಸಿ ಪುನಃ ರುಬ್ಬಿ, ಗ್ಲಾಸ್‌ಗಳಿಗೆ ಸುರಿದು ಐಸ್‌ಕ್ರೀಂ ಸೇರಿಸಿ ಸರ್ವ್ ಮಾಡಿ.
7. ಜಿಂಜರ್ ಸ್ಪೈಸ್
ಬೇಕಾಗುವ ಸಾಮಗ್ರಿಗಳು: ಐಸ್‌ಕ್ರೀಂ- 1 ಕಪ್, ಹಾಲು- 1/4 ಕಪ್, ಶುಂಠಿ ಪೇಸ್ಟ್- 1/4 ಚಮಚ .
ಮಾಡುವ ವಿಧಾನ: ಐಸ್‌ಕ್ರೀಂ ಮತ್ತು ಶುಂಠಿ ಪೇಸ್ಟ್ ಅನ್ನು ಬೆರೆಸಿ, ರುಬ್ಬಿಕೊಂಡು ಇದಕ್ಕೆ ಹಾಲು ಸೇರಿಸಿ ಕೆಲ ಕಾಲ ಫ್ರಿಡ್ಜ್ನಲ್ಲಿಡಿ. ನಂತರ ಸೇವಿಸಿದರೆ ಬಲು ರುಚಿಕರ.
8. ಡೇಟ್ಸ್ ಬಟರ್ ಶೇಕ್
ಬೇಕಾಗುವ ಸಾಮಗ್ರಿ: ಖರ್ಜೂರ- 8 ರಿಂದ 10, ಮೊಸರು- 1/2 ಕಪ್, ಲೆಮನ್ ಜ್ಯೂಸ್- 1/2 ಚಮಚ, ಐಸ್‌ಕ್ರೀಂ- 1/4 ಕಪ್.
ಮಾಡುವ ವಿಧಾನ: ಮೊದಲು ಖರ್ಜೂರವನ್ನು ಬಿಸಿ ನೀರಿನಲ್ಲಿ ನೆನೆಸಿ, ಅನಂತರ ಮೆತ್ತಗಾಗುವವರೆಗೂ ಬೇಯಿಸಬೇಕು. ನಂತರ ಇದನ್ನು ಮಿಕ್ಸರ್‌ನಲ್ಲಿ ಮೊಸರಿನೊಂದಿಗೆ ಬೆರೆಸಿ, ರುಬ್ಬಬೇಕು. ಇದಕ್ಕೆ ಐಸ್‌ಕ್ರೀಂ ಮತ್ತು ಲೆಮನ್ ಜ್ಯೂಸ್ ಸೇರಿಸಿದರೆ ರುಚಿರುಚಿಯಾದ ಡೇಟ್ಸ್ ಬಟರ್‌ಶೇಕ್ ರೆಡಿ.
ಭಾಗ್ಯ ನಂಜುಂಡಸ್ವಾಮಿ, ನರಸಿಂಹರಾಜಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.