“ರನ್ಯಾ’ ಚೈತ್ರ ಕಾಲ: ಫೇಸ್‌ಬುಕ್ಕಾ? ಐ ಡೋಂಟ್‌ ಲೈಕ್‌ ಇಟ್‌!


Team Udayavani, Apr 26, 2017, 3:50 AM IST

25-AVALU-7.jpg

ರನ್ಯಾ ರಾವ್‌, ಸ್ಯಾಂಡಲ್‌ವುಡ್‌ನ‌ಲ್ಲಿ ಮೆಲ್ಲಗೆ ಆದರೆ ಭದ್ರವಾಗಿ ಬೇರೂರುತ್ತಿರುವ ನವನಟಿ. ರನ್ಯಾ ಸುದೀಪ್‌ ನಟಿಸಿ ನಿರ್ಮಿಸಿದ “ಮಾಣಿಕ್ಯ’ ಚಿತ್ರದಿಂದ ಭರ್ಜರಿ ಎಂಟ್ರಿ ಪಡೆದರು. ಬಳಿಕ ತಮಿಳು ಚಿತ್ರವೊಂದಲ್ಲಿ ನಟಿಸಿದರು. ಈಗ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅಭಿನಯದ  “ಪಟಾಕಿ’ ಚಿತ್ರದಲ್ಲಿ ನಾಯಕಿ. ಮೂಲತಃ ಚಿಕ್ಕಮಗಳೂರಿನ ಇವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲೇ. ಇಂಜಿನಿಯರಿಂಗ್‌ ಓದಲು ಕಾಲೇಜು ಸೇರಿದ್ದ ಹುಡುಗಿಯನ್ನು ಸಿನಿಮಾ/ಮಾಡೆಲಿಂಗ್‌ ವ್ಯಾಮೋಹ ಕಾಲೇಜನ್ನು ಅರ್ಧದಲ್ಲೇ ತೊರೆಯುವಂತೆ ಮಾಡಿದೆ. ಇಂಥ ಹಿನ್ನೆಲೆಯ ರನ್ಯಾ ಮಾತಿಗೆ ಸಿಕ್ಕಾಗ…

ಬೇಸಿಗೆಯನ್ನು ಹೇಗೆ ಎದುರಿಸ್ತಾ ಇದ್ದೀರಿ?
ಎದ್ದ ಕೂಡಲೇ ಎಳೆನೀರು ಕುಡಿಯುತ್ತೇನೆ. ಕ್ಯಾರೆಟ್‌ಧಿ-ಬೀಟ್‌ರೂಟ್‌ ಜ್ಯೂಸ್‌ ಕುಡಿಯುತ್ತೇನೆ. ಬೇಸಿಗೆಯ ಹಣ್ಣುಗಳಾದ ಕಲ್ಲಂಗಡಿ, ಖರಬೂಜ ತಿನ್ನುತ್ತಾ ಇರುತ್ತೇನೆ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಎನರ್ಜಿ ಕೂಡ ಬೇಕಲ್ವಾ. ಅದಕ್ಕಾಗಿ ಆಗಾಗ ನಿನೆಸಿಟ್ಟ ಬದಾಮ್‌, ಪಿಸ್ತಾ, ಖರ್ಜೂರ  ತಿನ್ನುತ್ತೇನೆ. ಎಲ್ಲವೂ ಉಪ್ಪುರಹಿತ. 

ಹಾಗಾದ್ರೆ ತುಂಬಾ ಡಯಟ್‌ ಮಾಡ್ತೀರಿ ಅಂತ ಕಾಣುತ್ತೆ?
ಇಲ್ಲಪ್ಪಾ. ನಾನು ತುಂಬಾ ಫ‌ುಡ್ಡೀ. ತಿನ್ನುವುದಂದ್ರೆ ನನಗೆ ಪ್ರಾಣ. ಡಯಟ್‌ ಅನಿವಾರ್ಯ ಆಗಿರುವುದರಿಂದ ಮಾಡ್ತೀನಿ ಅಷ್ಟೇ. ಸ್ವಲ್ಪ ದಿನಗಳ ಕೆಳಗೆ ನಮ್ಮ ಮನೆಯಲ್ಲಿ ಹೊಸ ಅಡುಗೆಯವರನ್ನು ನೇಮಿಸಿಕೊಂಡಿದ್ವಿ. ಅವರು ನನ್ನನ್ನು ನೋಡಿ ನಾನು ಬಹಳ ಕಡಿಮೆ ತಿನ್ನುತ್ತೀನಿ ಅನ್ಕೊಂಡಿದ್ರಂತೆ. ಯಾವಾಗ ನಾನು ಟೇಬಲ್‌ ಮುಂದೆ ಕೂತು ತಿನ್ನಲು ಆರಂಭಿಸಿದೆನೋ ಆಗ ಅವರು ದಂಗಾಗಿ ಹೋಗಿದ್ದಾರೆ. ಮತ್ಯಾವತ್ತೋ ಒಂದು ದಿನ ನನ್ನ ಅಪ್ಪನ ಬಳಿ ಹೋಗಿ “ಏನ್‌ ಸಾರ್‌, ನಿಮ್ಮ ಮಗಳು ಈ ಸೈಝಿಗೇ ಇಷ್ಟು ತಿಂತಾರಲ್ಲಾ, ಸ್ವಲ್ಪ ದಪ್ಪ ಇದ್ದಿದ್ರೆ ಮಾಡಿದ ಅಡುಗೆಯನ್ನೆಲ್ಲಾ ಅವರೊಬ್ಬರೇ ತಿಂತಿದ್ರು’ ಅಂತ ಹೇಳಿದರಂತೆ.

ಡಯಟ್‌ಗೊಸ್ಕರ ಯಾವೆಲ್ಲಾ ಖಾದ್ಯ ತ್ಯಾಗ ಮಾಡಿದ್ದೀರ?
ಯಾವುದೂ ಇಲ್ಲ. ಪ್ರತಿ ಭಾನುವಾರ ಯಾವುದಾದೂ ರೆಸ್ಟೊರೆಂಟ್‌ಗೆ ಹೋಗಿ ಬ್ರಂಚ್‌ ಮಾಡ್ತೇನೆ. ನನಗೆ ಸೀ ಫ‌ೂಡ್‌ ಎಂದರೆ ಇಷ್ಟ. ಗ್ರಿಲ್ಡ್‌ ಪ್ರಾನ್ಸ್‌, ಲ್ಯಾಬ್ಸರ್‌ ರೋಲ್‌ ನನಗೆ ತುಂಬಾ ಇಷ್ಟ. ಜೊತೆಗೆ ಎಲ್ಲಾ ರೀತಿಯ ಚೀಸ್‌ ಕೇಕ್‌ ತಿನ್ನುತ್ತೇನೆ. ಕಾಫಿ ಬನಾನ, ಚೀಸ್‌ ಕೇಕ್‌ ನನ್ನ ಫೇವರಿಟ್‌. ಈಗ ಯಾವ ಖಾದ್ಯವನ್ನೂ ತ್ಯಾಗ ಮಾಡ್ಬೇಕು ಅಂತೇನಿಲ್ಲ. ಈಗ ಝೀರೊ ಫ್ಯಾಟ್‌ ಐಸ್‌ಕ್ರೀಂ, ಕೇಕ್‌ಗಳು, ಹಾಲಿನ ಉತ್ಪನ್ನ ರಹಿತ ಖಾದ್ಯಗಳು ದೊರೆಯುತ್ತವೆ. ಆದ್ದರಿಂದ ಕಟ್ಟುನಿಟ್ಟಾಗಿ ಡಯೆಟ್‌ ಮಾಡುವ ದಿನಗಳಲ್ಲೂ ಏನೂ ತೊಂದರೆಯಿಲ್ಲ. 

ಯಾವ ರೆಸ್ಟೊರೆಂಟ್‌ ನಿಮಗಿಷ್ಟ?
“ರಿಮ್‌ನಾಮ್‌’ ಅಂಥ ಒಂದು ಥಾಯ್‌ ರೆಸ್ಟೊರೆಂಟ್‌ ಇದೆ. ಅದು ನನಗಿಷ್ಟ…

ರನ್ಯಾ ತುಂಬಾ ಬ್ರಾಂಡ್‌ ಕಾನ್ಶಿಯಸ್‌ ಅಂತೆ.
ಹೌದು. ನನಗೆ ಬ್ರಾಂಡೆಡ್‌ ಬಟ್ಟೆ, ಚಪ್ಪಲಿ, ವಾಚುಗಳೇ ಇಷ್ಟ. ಝಾರಾ, ಎಚ್‌ಎಂಎನ್‌, ಫಾರೆವರ್‌ 21 ನನ್ನ ಇಷ್ಟದ ಬ್ರಾಂಡ್‌ಗಳು. ನನ್ನ ಕಬೋರ್ಡ್‌ನಲ್ಲಿ ಸದ್ಯ ಜಾಗವೇ ಇಲ್ಲ. ಆದರೂ ಈ ಬ್ರಾಂಡ್‌ ಮಳಿಗೆಗಳಿಗೆ ಹೋದರೆ 3-4 ಜೊತೆ ಬಟ್ಟೆ ಖರೀದಿಸದೇ ವಾಪಸು ಬರುವುದಿಲ್ಲ.  

ನೀವು ಬರೀ ವೆರ್ಸ್ಟನ್‌ ಉಡುಗೆ ಮಾತ್ರ ತೊಡುವುದಾ?
 ನಾನು 5 ನಿಮಿಷದಲ್ಲಿ ಸೀರೆ ಉಡುತ್ತೇನೆ ಗೊತ್ತಾ? ಸಾಂಪ್ರದಾಯಕ ಹುಡುಗಿ ಹಾಗೆ ರೆಡಿಯಾಗಲು ನನಗೆ ಹತ್ತೇ ನಿಮಿಷ ಸಾಕು. ನನ್ನ ಬಳಿ ಸೀರೆಗಳ ದೊಡ್ಡ ಭಂಡಾರವೂ ಇದೆ. 

ಸುದೀಪ್‌ಗೆ ನಾಯಕಿಯಾಗುವ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ರಿ? ಆಮೇಲೆ ನಾಪತ್ತೆಯಾದಿರಲ್ಲಾ?
ನಾಪತ್ತೆಯಾಗಿಲ್ಲ. ಈಗ ಗಣೇಶ್‌ ಜೊತೆ ಪಟಾಕಿ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮಧ್ಯ ತಮಿಳಿನ ಒಂದು ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಬಂದೆ. ಜೊತೆಗೆ ನಟನೆಗೆ ಸಂಬಂಧಿಸಿದ ಕೋರ್ಸನ್ನೂ ಮಾಡಿದೆ. “ಮಾಣಿಕ್ಯ’ ಸಿನಿಮಾ ವೇಳೆ ನೋಡಿದ ರನ್ಯಾಗೂ ಇಂದಿನ ರನ್ಯಾಗೂ ಸಾಕಷ್ಟು ವ್ಯತ್ಯಾಸ ಇದೆ. ಆಗ ನಟನೆಯ ಎಬಿಸಿಡಿಯೂ ಗೊತ್ತಿರಲಿಲ್ಲ. ಸೆಟ್‌ಗೆ ಹೋದ ಮೇಲೆಯೇ ನಾನೊಬ್ಬಳು ನಟಿ ಎಂಬುದು ನನಗೆ ನೆನಪಾಗುತ್ತಿತ್ತು. ಈಗ ನಟನೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಜೊತೆಗೆ ನನ್ನ ಲುಕ್‌ ಕೂಡ ಸಾಕಷ್ಟು ಬದಲಾಗಿದೆ. 

ನೀವು ಅಷ್ಟಾಗಿ ಸೊಷಿಯಲ್‌ ಮೀಡಿಯಾದಲ್ಲಿ ಕಾಣಿಸುವುದಿಲ್ಲವಲ್ಲ?
ನಾನು ಸಾಮಾಜಿಕವಾಗಿ ಆ್ಯಕ್ಟಿವ್‌ ಆಗಿರುವ ವ್ಯಕ್ತಿಯಲ್ಲ. ನಾನಾಯಿತು ನನ್ನ ಪಾಡಾಯಿತು ಎಂಬಂತೆ ಇರುತ್ತೇನೆ. ನಿಮಿಷಕ್ಕೊಮ್ಮೆ ಜಾಲತಾಣದೊಳಗೆ ಇಣುಕುವುದು, ದಿನಕ್ಕೊಂದು ಫೋಟೊ ಹಾಕುವುದು ನನ್ನ ವ್ಯಕ್ತಿತ್ವಕ್ಕೆ ಆಗಿಬರುವುದಿಲ್ಲ.

ಈ ಬೇಸಿಗೆಯ ಔಟಿಂಗ್‌ ಪ್ಲಾನ್‌?
ಮುಂದಿನ ತಿಂಗಳು ಫ್ಯಾಮಿಲಿ ಸಮೇತ ಲಂಡನ್‌ಗೆ ಹೋಗ್ತಾ ಇದ್ದೇನೆ. ಸಿಕ್ಕಾಪಟ್ಟೆ ಶಾಪಿಂಗ್‌ ಮಾಡೊ ಪ್ಲಾನ್‌ ಇದೆ. ಇತ್ತೀಚೆಗೆ ಫೋಟೊಶೂಟ್‌ ಮಾಡಿಸಲು ಕೇಪ್‌ಟೌನ್‌ಗೆ ಹೋಗಿದ್ದೆ. 3 ದಿನಗಳ ಕೆಲಸ ಇತ್ತು. ಆದರೆ ನಾನು 10 ದಿನ ಅಲ್ಲಿ ಉಳಿದೆ. ಅಷ್ಟು ಸುಂದರ ಜಾಗ ಅದು. ನನ್ನ ಇಡೀ ಫ್ಯಾಮಿಲಿಗೆ ಆ ಪ್ರದೇಶ ತೋರಿಸಬೇಕು ಅಂತ ಆಸೆ ಇದೆ.  

ಮನೆಯಲ್ಲಿ ನೀವೇ ಹಿರಿಯಕ್ಕಾನಾ?
ಹೌದು ನನಗೆ ಒಬ್ಬಳು ತಂಗಿ, ಇಬ್ಬರು ತಮ್ಮಂದಿರಿದ್ದಾರೆ. ಮೂವರನ್ನೂ ನಾನು ತುಂಬಾ ಮುದ್ದು ಮಾಡುತ್ತೇನೆ. ನನ್ನ ತಂಗಿ ನನ್ನ ಬೆಸ್ಟ್‌ ಕ್ರಿಟಿಕ್‌. ನಾನು ಆಚೆ ಹೋಗುವಾಗ ನಾನು ಅವಳ ಮುಂದೆ ಹೋಗಿ ನಿಲ್ಲುತ್ತೇನೆ. ನನ್ನ ಡ್ರೆಸ್‌, ಮೇಕಪ್‌ಅನ್ನು ಅವಳು ಓಕೆ ಮಾಡಿದ ಮೇಲೆಯೇ ಮನೆಯಿಂದ ಹೊರಡುವುದು.

ಹುಡುಗಿಯರು ಚಂದ ಕಾಣಲು ಟಿಪ್ಸ್‌ ಕೊಡಿ.
ತುಂಬಾ ಮೇಕಪ್‌ ಮಾಡಬೇಡಿ. ಲಘುವಾಗಿ ಇರಲಿ ಮೇಕಪ್‌. ನಿಮಗೆ ಆರಾಮವೆನಿಸುವ ವಸ್ತ್ರ ಧರಿಸಿ. ನಿಮ್ಮದೇ ಆದ ಸ್ಟೈಲ್‌ ಮೇಂಟೇನ್‌ ಮಾಡಿ. ಆಗ ಚಂದ ಕಾಣಿ¤àರ.

ಬಾಯಿ ಚಪ್ಪರಿಸಿ ತಿನ್ನುವ ಅಡುಗೆ ಯಾವುವು?
ಪಕ್ಕಾ ಮಲೆನಾಡ ಅಡುಗೆ ನನಗಿಷ್ಟ. ಅಮ್ಮ ಮಾಡುವ ಶಾವಿಗೆ, ಸಣ್ಣ ಕಡುಬು, ಅಕ್ಕಿ ರೊಟ್ಟಿ, ಮಾಂಸದ ಸಾರು, ಮಟನ್‌ ಪೆಪ್ಪರ್‌ ಫ್ರೈ ತುಂಬಾ ಇಷ್ಟ. ನಾನು ಕಾಂಟಿನೆಂಟಲ್‌ ಅಡುಗೆಗಳನ್ನು ತಯಾರಿಸುತ್ತೇನೆ. ಸ್ಪಾನಿಷ್‌ ಆಮ್ಲೆಟ್‌ ತುಂಬಾ ರುಚಿಯಾಗಿ ತಯಾರಿಸುತ್ತೇನೆ.

ಇಷ್ಟೆಲ್ಲಾ ತಿಂದರೆ ಫಿಟೆ°ಸ್‌ ಕಥೆ ಏನು?
ಪ್ರತಿ ದಿನ ಒಂದು ಗಂಟೆ ವ್ಯಾಯಾಮ ತಪ್ಪಿಸುವುದಿಲ್ಲ. ವಾರದಲ್ಲಿ ಮೂರು ದಿನ ಡಿ-ಪಿಲ್ಯಾಟ್ಸ್‌ ವ್ಯಾಯಾಮ ಮಾಡಿದರೆ, ಇನ್ನು ಮೂರು ದಿನ ಕ್ರಾಸ್‌ ಫಿಟೆ°ಸ್‌ ಎಕ್ಸರ್‌ಸೈಝ್ ಮಾಡುತ್ತೇನೆ. 

ಈ ನಟಿಯರ ಬಗ್ಗೆ ನಿಮಗೇನನ್ನಿಸುತ್ತದೆ. ಒಂದು ಪದದಲ್ಲಿ ಹೇಳಿ
ದೀಪಿಕಾ ಪಡುಕೋಣೆ-ಹಾಟ್‌
ಐಶ್ವರ್ಯಾ ರೈ-ಆಲ್‌ ಟೈಮ್‌ ಬ್ಯೂಟಿ‌ಫ‌ುಲ್‌
ಕತ್ರೀನಾ- ಕ್ಯೂಟ್‌
ಕರೀನಾ-ದಿವಾ
ಆಲಿಯಾ- ಓಳ್ಳೆ ನಟಿ

ಮನಸ್ಸನ್ನು ತುಂಬಾ ಕಾಡಿದ ನಟಿ?
ರಾಧಿಕಾ ಆಪ್ಟೆ. ಪಾತ್ರವೇ ಅವರಾಗಿಬಿಡುತ್ತಾರೆ. ಅಷ್ಟು ಸಹಜತೆ, ತಲ್ಲೀನತೆ ಇರುತ್ತದೆ ಅವರ ಅಭಿನಯದಲ್ಲಿ. ಅವರಿಗೆ ಸಿಕ್ಕಂಥ ಪಾತ್ರ ನನಗೂ ಸಿಗಲಿ ಎಂದು ತುಂಬಾ ಆಸೆಯಾಗುತ್ತದೆ. ಕಾಜಲ್‌ ತುಂಬಾ ಇಷ್ಟ. ಅವರ ಹಾವಭಾವದಿಂದಲೇ ಆಕರ್ಷಿಸಿಬಿಡುತ್ತಾರೆ. ಆಕೆ ರಿಯಲ್‌ ಬ್ಯೂಟಿ.

ಚೇತನ ಜೆ.ಕೆ.

ಟಾಪ್ ನ್ಯೂಸ್

1-allu

”Pushpa 2′′ ಭಾಷೆಯ ತಡೆಯನ್ನು ಮುರಿಯುತ್ತಿದೆ, ತೆಲುಗು ಜನರಿಗೆ ಹೆಮ್ಮೆ: ಅಲ್ಲು ಅರ್ಜುನ್

arrested

Indiranagar; ಅಸ್ಸಾಂ ಯುವತಿ ಹ*ತ್ಯೆ ಕೇಸ್: ಆರೋಪಿ ಬಂಧಿಸಿದ ಪೊಲೀಸರು

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ

R Ashok (2)

ಚಂದ್ರಶೇಖರ ಶ್ರೀ ವಿರುದ್ಧ ಕೇಸ್‌; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್

Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

de

Guttigar: ಮಾವಿನಕಟ್ಟೆ; ಮರದಿಂದ ಬಿದ್ದು ವ್ಯಕ್ತಿ ಸಾವು

9

Kaup: ಬೀಚ್‌ನಲ್ಲಿನ್ನು ಪ್ಯಾರಾ ಮೋಟರಿಂಗ್‌

8(1

Udupi: ಸ್ಥಾಪಕರು ಜೀವನ ಪಾಠ ಮಾಡಿದ್ದ ಎಂಜಿಎಂ ಕಾಲೇಜಿಗೆ ಅಮೃತೋತ್ಸವ

7

Kollur: ದ್ವಿಪಥ ರಸ್ತೆ ನಿರ್ಮಾಣಕ್ಕೆ ಅಂಗಡಿ ಮುಂಗಟ್ಟು ತೆರವು ಆರಂಭ

6

Kundapura: ವಿಶ್ವ ವಿಖ್ಯಾತ ಮರವಂತೆಯಲ್ಲಿ ಬಸ್‌ ನಿಲ್ದಾಣವೇ ಇಲ್ಲ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.