ಮಂಗಳೂರು ಜಂಕ್ಷನ್-ಯಶವಂತಪುರ ರೈಲು ಸೆಂಟ್ರಲ್‌ಗೆ ವಿಸ್ತರಿಸಲು ಆಗ್ರಹ
Team Udayavani, Apr 26, 2017, 10:39 AM IST
ಮಂಗಳೂರು : ಇತ್ತೀಚೆಗೆ ಆರಂಭವಾಗಿರುವ ಮಂಗಳೂರು ಜಂಕ್ಷನ್- ಯಶವಂತಪುರ ರೈಲನ್ನು (ನಂ. 16575/ 16576) ಮಂಗಳೂರು ಸೆಂಟ್ರಲ್‌ಗೆ ವಿಸ್ತರಿ ಸುವಂತೆ ಪಾಲಾ^ಟ್ ವಿಭಾಗ ರೈಲ್ವೇ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ಆಗ್ರಹಿಸಿದ್ದಾರೆ.
ಬಳಕೆದಾರರ ಸಲಹಾ ಸಮಿತಿ ಸಭೆ ಪಾಲಾ^ಟ್‌ನಲ್ಲಿ ಎ. 27ರಂದು ಜರಗಲಿದ್ದು, ಈ ವಿಭಾಗದಲ್ಲಿ ಮಂಗಳೂರಿಗೆ ಸಂಬಂಧಿಸಿದ ಪ್ರಮುಖ ರೈಲು ಬೇಡಿಕೆಗಳ ಬಗ್ಗೆ ಚರ್ಚೆ ನಡೆಯಲಿದೆ. ಈನೆಲೆಯಲ್ಲಿ ಪಾಲಾ^ಟ್ ವಿಭಾಗ ರೈಲ್ವೇ ಬಳಕೆದಾರರ ಸಭೆ ಮಹತ್ವ ಪಡೆದುಕೊಂಡಿದೆ.
ಡೆಮು ವೇಳಾಪಟ್ಟಿ ಪರಿಷ್ಕರಣೆ ಮಂಗಳೂರು- ಕಾರವಾರ ನಡುವೆ ಪ್ರಸ್ತುತ ಸಂಚರಿಸುತ್ತಿರುವ ಡೆಮು ರೈಲಿನ ವೇಳಾಪಟ್ಟಿ ಪರಿಷ್ಕರಿಸಿ ಪ್ರಯಾಣಿಕರಿಗೆ ಹೆಚ್ಚು ಉಪಯೋಗವಾಗುವಂತೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಉದ್ಯೋಗಿ, ವ್ಯಾಪಾರಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸೇರಿ
ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರು-ಉಡುಪಿ-ಕಾರವಾರ ಮಾರ್ಗದಲ್ಲಿ ಪ್ರಯಾಣಿಕರಿದ್ದಾರೆ. ಆದರೆ ಪ್ರಸ್ತುತ ಈ ರೈಲು ಮಂಗಳೂರು ಸೆಂಟ್ರಲ್‌ನಿಂದ ಅಪರಾಹ್ನ 3ಕ್ಕೆ ಹೊರಡುತ್ತಿದ್ದು, ಇದರಿಂದ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಸಂಜೆ 4ರ ಬಳಿಕ ಅದರಲ್ಲೂ ಸಂಜೆ 5.30ರ ಬಳಿಕ ಈ ರೈಲು ಹೊರಟರೆ ಹೆಚ್ಚಿನ ಜನರಿಗೆ ಪ್ರಯೋಜನವಾಗಲಿದೆ. ಆದುದರಿಂದ ಇದನ್ನು ಪರಿಶೀಲಿಸಿ ಕೊಂಕಣ ರೈಲ್ವೇಗೆ ಜಾರಿಗೊಳಿಸಲು ಶಿಫಾರಸು ಮಾಡಬೇಕು ಎಂದು ಕಾಮತ್ ಸಲಹೆ ಮಾಡಿದ್ದಾರೆ.
ಮಂಗಳೂರು ಸೆಂಟ್ರಲ್-ಮಂಗಳೂರು ಜಂಕ್ಷನ್ ನಡುವೆ 1 ಕಿ.ಮೀ. ಮಾರ್ಗ ಹಳಿ ದ್ವಿಗುಣಗೊಳಿಸಲು ಬಾಕಿ ಇದೆ. ಇದರಿಂದ ರೈಲು ಆಗಮನ, ನಿರ್ಗಮನದಲ್ಲಿ ವಿಳಂಬವಾಗುತ್ತಿದೆ. ಆದುದರಿಂದ ಬಾಕಿ ಉಳಿದಿರುವ ಮಾರ್ಗದಲ್ಲಿ ಹಳಿ ದ್ವಿಗುಣಗೊಳಿಸಬೇಕು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.