ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದ ಸುಬ್ರತ ಪೌಲ್
Team Udayavani, Apr 26, 2017, 1:55 PM IST
ಹೊಸದಿಲ್ಲಿ: ಭಾರತ ಖ್ಯಾತ ಫುಟ್ಬಾಲ್ ಗೋಲ್ ಕೀಪರ್ ಸುಬ್ರತ ಪೌಲ್ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮೊದಲ ಹಂತದ ಪರೀಕ್ಷೆಯಲ್ಲಿ ಅವರು ಉದ್ದೀಪನ ಮದ್ದು ಸೇವಿಸಿರುವುದು ಖಚಿತಗೊಂಡಿದೆ. ಇನ್ನು ‘ಬಿ’ ಸ್ಯಾಂಪಲ್ ಪರೀಕ್ಷೆ ಬಾಕಿ ಇದ್ದು ಅದರಲ್ಲೂ ಅವರು ಅನುತೀರ್ಣಗೊಂಡೆರೆ ಕನಿಷ್ಠ ಎಂದರೂ 4 ವರ್ಷ ನಿಷೇಧಕ್ಕೆ ಒಳಗಾಗಬಹುದು.
ಸದ್ಯ ತನ್ನ ಮೇಲಿನ ಉದ್ದೀಪನ ಔಷಧ ಸೇವನೆ ಆರೋಪವನ್ನು ಸುಬ್ರತ ಪೌಲ್ ನಿರಾಕರಿಸಿದ್ದಾರೆ. ತಾನು ಏನೂ ತಪ್ಪು ಮಾಡಿಲ್ಲ ಎಂದು ಅವರು ಅಲವತ್ತುಕೊಂಡಿದ್ದಾರೆ. ಮುಂದೆ ಇವರು ‘ಬಿ’ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಅಖೀಲ ಭಾರತೀಯ ಫುಟ್ಬಾಲ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಕುಶಲ್ ದಾಸ್ ತಿಳಿಸಿದ್ದಾರೆ. ಮಾ. 18ರಂದು ಸುಬ್ರತ ಪೌಲ್ ಸೇರಿದಂತೆ ಭಾರತ ಫುಟ್ಬಾಲ್ ತಂಡದ ಎಲ್ಲ ಆಟಗಾರರಿಂದ ನಾಡಾ ಮೂತ್ರದ ಮಾದರಿಯನ್ನು ಪಡೆದಿತ್ತು. ಇವರು ಮಾತ್ರವಲ್ಲ ಪೌಲ್ ಉದ್ದೀಪನ ಸೇವನೆ ಸುದ್ದಿ ಕೇಳಿ ನನಗೆ ಆಘಾತವಾಯಿತು. ಇದನ್ನು ನಂಬುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಕುಶಲ್ ದಾಸ್ ತಿಳಿಸಿದ್ದಾರೆ.
ಸದ್ಯ ಪೌಲ್ ಅಮಾನತು
ಮುಂದಿನ ಪರೀಕ್ಷೆ ನಡೆದು ವರದಿ ಬರುವರೆಗೆ ಸುಬ್ರತ ಪೌಲ್ ಯಾವುದೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವಂತಿಲ್ಲ. ಇವರು ತಾತ್ಕಾಲಿಕವಾಗಿ ಅಮಾನತ್ತಿಗೆ ಒಳಗಾಗಲಿದ್ದಾರೆ. ಒಂದು ವೇಳೆ ಪರೀಕ್ಷೆಯಲ್ಲಿ ಇವರು ತಪ್ಪು ಮಾಡಿರುವುದು ಸಾಬೀತಾದರೆ ವಾಡಾ ಪರಿಷ್ಕೃತ ಶಿಕ್ಷೆಯ ಪ್ರಮಾಣದ ಪ್ರಕಾರ 4 ವರ್ಷ ಕಠಿನ ನಿಷೇಧ ಶಿಕ್ಷೆ ಅನು ಭವಿಸಬೇಕಾಗುತ್ತದೆ. 10 ವರ್ಷಗಳಿಂದ ದೇಶಕ್ಕಾಗಿ ಆಡುತ್ತಿದ್ದೇನೆ. ಪ್ರಮಾಣಿಕತೆ, ರಾಷ್ಟ್ರೀಯ ಭಾವೈಕ್ಯವನ್ನು ಮೈಗೂಡಿಸಿಕೊಂಡಿದ್ದೇನೆ. ಇಂಥದೊಂದು ಸನ್ನಿವೇಶ ಎದುರಾಗುತ್ತದೆ ಎಂದು ನಾನು ಅಂದುಕೊಂಡೇ ಇರಲಿಲ್ಲ. ಎಲ್ಲ ಆಟಗಾರರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ನನಗೆ ಮಾತ್ರ ನೆಗೆಟಿವ್ ಬಂದಿದೆ ಎಂದು ಪೌಲ್ ತಿಳಿಸಿದ್ದಾರೆ.
ಪೌಲ್ 2007ರಿಂದ 2009ವರೆಗೆ ನೆಹರೂ ಕಪ್ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಪಂದ್ಯಗಳನ್ನು ಇವರು ಆಡಿಲ್ಲ. ಇವರ ಬದಲಿಗೆ ತಂಡದಲ್ಲಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.