ಅಂಗನವಾಡಿಗಳು ಬಾಲಸ್ನೇಹಿಯಾಗಿರಲಿ: ಅಹ್ಮದ್ ಹಾಜಿ
Team Udayavani, Apr 26, 2017, 3:44 PM IST
ಬಂಟ್ವಾಳ : ಮಗುವಿನ ಭವಿಷ್ಯ ನಿರ್ಮಾಣದ ಮೊದಲನೆಯ ಹಂತವಾದ ಅಂಗನವಾಡಿಗಳು ಸಕಲ ವ್ಯವಸ್ಥೆಗಳೊಂದಿಗೆ ಬಾಲಸ್ನೇಹಿ ಯಾಗುವುದು ಅತ್ಯಗತ್ಯವಾಗಿದೆ ಎಂದು ಬಿ.ಎ. ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಬಿ.ಎ. ಅಹ್ಮದ್ ಹಾಜಿ ಮುಹಿಯುದ್ದೀನ್ ಹೇಳಿದರು.
ಅವರು ದ.ಕ. ಜಿ. ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ತುಂಬೆ ಸರಕಾರಿ ಶಾಲೆ ಬಳಿ ಊರಿನ ದಾನಿಗಳ ಸಹಾಯದಿಂದ ನವೀಕೃತಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ತಾಯಿ ಮಗುವಿನ ಮೊದಲ ಶಿಕ್ಷಕಿಯಾದರೆ, ಅಂಗನವಾಡಿ ಮಗುವಿನ ಭವಿಷ್ಯ ನಿರ್ಮಾಣದ ಮೊದಲ ಮೆಟ್ಟಿಲಾಗಿದೆ. ಆದ್ದರಿಂದ ಅಂಗನವಾಡಿ ಕಟ್ಟಡಗಳು ಸಕಲ ವ್ಯವಸ್ಥೆಗಳನ್ನು ಹೊಂದಿ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದು ಹೇಳಿದರು.
ತುಂಬೆ ಗ್ರಾ.ಪಂ. ಉಪಾಧ್ಯಕ್ಷ ಪ್ರವೀಣ್ ಬಿ. ತುಂಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಒಂದು ಲಕ್ಷ ರೂ. ಅನುದಾನ ಸಹಿತ ಊರಿನ ದಾನಿಗಳ ಸಹಾಯ ಸಹಕಾರದೊಂದಿಗೆ ಈ ಅಂಗನವಾಡಿ ಕೇಂದ್ರ ಸುಂದರವಾಗಿ ಮೂಡಿ ಬಂದಿದೆ. ತುಂಬೆ ಗ್ರಾಮದಲ್ಲಿ
ರುವ ಒಟ್ಟು ಆರು ಅಂಗನವಾಡಿ ಗಳನ್ನು ನವೀಕರಿಸುವ ಕನಸನ್ನು ಹೊಂದಲಾಗಿದ್ದು ಆ ಪೈಕಿ ಈಗಾಗಲೇ ಮೂರು ಅಂಗನವಾಡಿ ಗಳನ್ನು ನವೀಕರಿಸಿ ಲೋಕಾರ್ಪಣೆಗೊಳಿಸಲಾಗಿದೆ. ಈ ಅಂಗನವಾಡಿಯ ನವೀಕರಣಕ್ಕೆ ಎಲ್ಲ ರೀತಿಯ ಸಹಾಯ, ಸಹಕಾರ ನೀಡಿದವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿಯ ನವೀಕರ ಣಕ್ಕೆ ವಿವಿಧ ರೀತಿಯಲ್ಲಿ ಸಹಾಯ, ಸಹಕಾರ ನೀಡಿದ ದಾನಿಗಳಿಗೆ ಹಾಗೂ ಸ್ಥಳವಕಾಶ ಹಾಗೂ ಅಂಗನವಾಡಿ ಕಟ್ಟಡ ಒದಗಿಸಿಕೊಟ್ಟ ಬಿ.ಅಹ್ಮದ್ ಹಾಜಿ ಮುಹಿಯುದ್ದೀನ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಜಿಪಂ ಸದಸ್ಯ ರವೀಂದ್ರ ಕಂಬಳಿ, ಗ್ರಾಮ ಪಂಚಾಯತ್ ಅಧ್ಯಕ್ಷತೆ ಹೇಮಾವತಿ, ಮಾಜಿ ಅಧ್ಯಕ್ಷ ಮಹಮ್ಮದ್ ವಳವೂರು, ಸದಸ್ಯ ಪ್ರಕಾಶ್ ಆಚಾರ್ಯ, ಮಾಜಿ ಸದಸ್ಯ ಮೋನಪ್ಪ ಮಜಿ ಮಾತನಾಡಿದರು.
ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಕಿರಣ್ ಶೆಟ್ಟಿ, ತಾಪಂ ಸದಸ್ಯ ಗಣೇಶ್ ಸುವರ್ಣ ತುಂಬೆ, ಗ್ರಾಪಂ ಸದಸ್ಯರಾದ ಝಹೂರ್ ಅಹ್ಮದ್, ಸಂಜೀವ ಪೂಜಾರಿ, ಶೋಭಾ ಲತಾ, ಹರಿಣಾಕ್ಷಿ, ನೇತ್ರಾ, ಆತಿಕಾ ಬಾನು, ಮಾಜಿ ಸದಸ್ಯರಾದ ಅಝೀಝ್ ತುಂಬೆ, ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಸಂದ್ಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.