ಕೇಜ್ರಿಗೆ ಕ್ಯಾಪಿಟಲ್‌ ಪನಿಶ್‌ಮೆಂಟ್‌


Team Udayavani, Apr 27, 2017, 2:07 PM IST

BJP-Dehli-27-4.jpg

ಹೊಸದಿಲ್ಲಿ: ಇತ್ತೀಚೆಗಷ್ಟೇ ನಡೆದ ಪಂಚ ರಾಜ್ಯ ಚುನಾವಣೆಗಳಲ್ಲಿ ಭಾರೀ ಗೆಲುವು ಸಾಧಿಸಿದ್ದ ಬಿಜೆಪಿಗೆ, ರಾಜಧಾನಿ ದಿಲ್ಲಿಯ ಮತದಾರ ಕೂಡ ಸಿಹಿ ಫ‌ಲಿತಾಂಶ ನೀಡಿದ್ದಾನೆ. ಲೋಕಸಭೆ ಚುನಾವಣೆ ವೇಳೆ ದಿಲ್ಲಿಯ ಏಳೂ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, ನಂತರ ನಡೆದ ವಿಧಾನಸಭೆ ಚುನಾವಣೆ ವೇಳೆ ಕೇವಲ 3 ಸ್ಥಾನಗಳಲ್ಲಿ ಗೆದ್ದು ಭಾರೀ ಮುಜುಗರ ಅನುಭವಿಸಿತ್ತು. ಆಗಿನ ಚುನಾವಣೆಯಲ್ಲಿ 60 ಸ್ಥಾನಗಳ ಪೈಕಿ 57ರಲ್ಲಿ ಜಯಗಳಿಸಿದ್ದ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಕ್ಷ, ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಗೆಲ್ಲುವ ಕನಸು ಕಂಡಿತ್ತು. ಆದರೆ, ಆಡಳಿತಾರೂಢ ಆಪ್‌ನ ಮತಯಾಚನೆಗೆ ಕಿವಿಗೊಡದ ರಾಜಧಾನಿಯ ಮತದಾರ, ಕಳೆದೆರಡು ಬಾರಿಯಂತೆ ಈ ಬಾರಿಯೂ ಬಿಜೆಪಿ ಕೈಹಿಡಿದಿದ್ದಾನೆ. ಜತೆಗೆ ಪಾಲಿಕೆಗಳಲ್ಲೂ ಅಧಿಕಾರಕ್ಕೇರಬೇಕು ಎಂಬ ಆಪ್‌ ಕನಸನ್ನು ನುಚ್ಚು ನೂರು ಮಾಡಿದ್ದಾನೆ.

ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಕೊಟ್ಟ ಕಾಣಿಕೆ ಎಂದು ಬಿಜೆಪಿ ಹೇಳಿದರೆ, ಇವಿಎಂಗಳಲ್ಲಿ ಮೋಸ ಮಾಡಿ ಬಿಜೆಪಿ ಗೆದ್ದಿದೆ ಎಂದು ಆಪ್‌ ಆರೋಪಿಸಿದೆ. ಆದರ ಸೋಲು ಒಪ್ಪಿಕೊಂಡಿರುವ ಕಾಂಗ್ರೆಸ್‌, ಸಾಂಪ್ರದಾಯಿಕ ಮತದಾರರು ವಾಪಸ್‌ ಬಂದಿದ್ದಾರೆ ಎಂದಿದೆ. ಜತೆಗೆ ಪ್ರದೇಶ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜಯ್‌ ಮಾಕೇನ್‌ ರಾಜೀನಾಮೆ ನೀಡಿದ್ದಾರೆ. ಮೂರು ಪಾಲಿಕೆಗಳನ್ನು ಒಟ್ಟಾರೆಯಾಗಿ ಸೇರಿಸಿ 270 ಸ್ಥಾನಗಳಲ್ಲಿ ಬಿಜೆಪಿ 181ರಲ್ಲಿ ಗೆದ್ದಿದೆ. ಆಪ್‌ 48ರಲ್ಲಿ ಗೆದ್ದಿದ್ದರೆ, ಕಾಂಗ್ರೆಸ್‌ 30ರಲ್ಲಿ ಗೆದ್ದು ಮೂರನೇ ಸ್ಥಾನಕ್ಕೆ ಕುಸಿದಿದೆ. ಇತರೆ ಅಭ್ಯರ್ಥಿಗಳು 11ರಲ್ಲಿ ಜಯಿಸಿದ್ದಾರೆ. 

ಫ‌ಲಿತಾಂಶ ಹೊರಬೀಳುತ್ತಿದ್ದಂತೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ‘ನೇತ್ಯಾತ್ಮಕ ರಾಜಕಾರಣವನ್ನು ಜನ ತಿರಸ್ಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಒಪ್ಪಿಕೊಂಡಿದ್ದಾರೆ,” ಎಂದು ಹೇಳಿದ್ದಾರೆ. ಜತೆಗೆ, ಬಿಜೆಪಿ ಬೆಂಬಲಿಸಿದ ದಿಲ್ಲಿ ಜನತೆಗೆ ಅವರು ಧನ್ಯವಾದ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದು, ಗೆಲುವಿಗೆ ಕಾರಣರಾದ ಪ್ರದೇಶ ಬಿಜೆಪಿ ಘಟಕ, ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.

ಈ ಮಧ್ಯೆ, ಬೆಳಗ್ಗೆಯಿಂದ ಯಾವುದೇ ಪ್ರತಿಕ್ರಿಯೆ ನೀಡದೇ ದೂರ ಉಳಿದಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಮಧ್ಯಾಹ್ನದ ಅನಂತರ ಸರಣಿ ಟ್ವೀಟ್‌ ಮಾಡಿದ್ದಾರೆ. ಜನತೆ ನೀಡಿರುವ ತೀರ್ಪು ಒಪ್ಪಿಕೊಳ್ಳುತ್ತೇವೆ, ಪಾಲಿಕೆಯಲ್ಲಿ ಅಧಿಕಾರ ಹಿಡಿಯಲಿ ರುವ ಬಿಜೆಪಿ ಜತೆ ಉತ್ತಮ ಸಹಕಾರದೊಂದಿಗೆ ಆಡಳಿತ ನಡೆಸಿಕೊಂಡು ಹೋಗುತ್ತೇವೆ ಎಂದಿದ್ದಾರೆ. ಆದರೆ ಎಲ್ಲಿಯೂ ಇವರು ಇವಿಎಂಗಳ ದೋಷದಿಂದಾಗಿ ಬಿಜೆಪಿ ಗೆದ್ದಿದೆ ಎಂದು ಹೇಳಲಿಲ್ಲ.

ಮಾಕೇನ್‌ ರಾಜೀನಾಮೆ: ಕಡೇ ಪಕ್ಷ ಗೆಲ್ಲದಿದ್ದರೂ ಎರಡನೇ ಸ್ಥಾನಕ್ಕಾದರೂ ಬರುವ ಭರವಸೆಯಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್‌, ಮೂರನೇ ಸ್ಥಾನಕ್ಕೆ ಇಳಿದಿದೆ. ಪಕ್ಷದ ಸೋಲಿನ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ಮಾಕೇನ್‌ ಮತ್ತು ಪಕ್ಷದ ಉಸ್ತುವಾರಿ ಪಿ.ಸಿ. ಚಾಕೋ ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ, ಪಕ್ಷದ ನಾಯಕತ್ವದ ವಿರುದ್ಧ ಗರಂ ಆದ ಮಾಜಿ ಮುಖ್ಯಮಂತ್ರಿ ಶೀಲಾ ದಿಕ್ಷೀತ್‌ ಅವರು, ನರೇಂದ್ರ ಮೋದಿ ಅಲೆ ಇರುವುದು ಸತ್ಯ ಎಂಬುದು ಈ ಫ‌ಲಿತಾಂಶದಿಂದ ಗೊತ್ತಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ತಾವು ಈ ಚುನಾವಣೆಯಿಂದ ದೂರ ಉಳಿಯಲು ಕಾರಣ, ಯಾವುದೇ ನಾಯಕರು ತಮ್ಮನ್ನು ಪ್ರಚಾರಕ್ಕೆ ಕರೆಯದೇ ಇದ್ದುದು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಪಕ್ಷವನ್ನು ಮೇಲೆತ್ತಲು ರಾಹುಲ್‌ ಗಾಂಧಿ ನೇತೃತ್ವ ವಹಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

ಸಂಭ್ರಮವಿಲ್ಲ: ಮೂರು ಪಾಲಿಕೆಗಳ ಚುನಾವಣೆಯಲ್ಲೂ ಅಭೂತಪೂರ್ವವಾಗಿ ಗೆಲುವು ಸಾಧಿಸಿದರೂ ಬಿಜೆಪಿ ಎಲ್ಲೂ ಸಂಭ್ರಮಾಚರಣೆ ನಡೆಸಲಿಲ್ಲ. ಮೂರು ದಿನಗಳ ಹಿಂದಷ್ಟೇ ಛತ್ತೀಸ್‌ಗಢದಲ್ಲಿ ಹುತಾತ್ಮರಾದ ಯೋಧರಿಗೆ ಗೆಲುವನ್ನು ಅರ್ಪಿಸಿ, ಸಂಭ್ರಮಾಚರಣೆ ಮಾಡುವುದಿಲ್ಲ ಎಂದು ಪ್ರಕಟಿಸಿತು. ಈ ನಡುವೆಯೇ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ನರೇಂದ್ರ ಮೋದಿ ಅವರ ಕೆಲಸಕ್ಕಾಗಿ ತಮಗೆ ಗೆಲುವು ಸಿಕ್ಕಿದೆ ಎಂದು ಕೊಂಡಾಡಿದ್ದಾರೆ. ಮತ್ತೂಬ್ಬ ನಾಯಕ ವೆಂಕಯ್ಯ ನಾಯ್ಡು ಅವರು, ಇವಿಎಂ ದೋಷದ ಬಗ್ಗೆ ಮಾತನಾಡಿದ ಆಪ್‌ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಪ್‌ ಗೆದ್ದದ್ದು ಈ ಇವಿಎಂಗಳಿಂದಲೇ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ

ಆಪ್‌ನಲ್ಲಿ ಭಿನ್ನ ರಾಗ
ಸೋಲುವುದು ಖಚಿತವಾಗುತ್ತಿದ್ದಂತೆ, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಸೇರಿದಂತೆ ಹಲವಾರು ನಾಯಕರು ಇವಿಎಂ ದೋಷಗಳ ಬಗ್ಗೆ ಮಾತುಗಳನ್ನಾಡಿದರು. ಇಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲ. ಇವಿಎಂಗಳನ್ನು ತಿರುಚಿ ಗೆದ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ತಮ್ಮ ಪಕ್ಷದ ನಾಯಕರ ಮಾತುಗಳನ್ನು ಅಲ್ಲಗೆಳೆದಿರುವ ಸಂಸದ ಭಗವಂತ್‌ ಮಾನ್‌ ಮತ್ತಿತರರು, ಸೋಲಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಇವಿಎಂ ದೋಷದ ಬಗ್ಗೆ ಮಾತುಗಳನ್ನಾಡುವುದನ್ನು ಬಿಟ್ಟು, ಸೋತದ್ದು ಏಕೆ ಎಂಬ ಬಗ್ಗೆ ಚಿಂತಿಸಿ ಎಂದಿದ್ದಾರೆ. ಈ ಮಧ್ಯೆ ದಿಲ್ಲಿಯ ಆಪ್‌ ಸಂಚಾಲಕ ದಿಲೀಪ್‌ ಪಾಂಡೆ ಅವರು ರಾಜೀನಾಮೆ ನೀಡಿದ್ದಾರೆ.  ಈ ಬೆಳವಣಿಗೆಗಳ ಮಧ್ಯೆಯೇ, ಕೇಜ್ರಿವಾಲ್‌ ಅವರು ಸಂಪುಟದಲ್ಲಿ ದಲಿತ ನಾಯಕರೊಬ್ಬರಿಗೆ ಸ್ಥಾನ ಕೊಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಸೋಲಿನ ಹಿನ್ನೆಲೆಯಲ್ಲಿ ಶಾಸಕಿ ಅಲ್ಕಾ ಲಂಬಾ ಅವರು ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. 

ಮಹಾಘಟಬಂಧನ್‌ಗೆ ಮತ್ತೆ ಆಹ್ವಾನ
ಬಿಜೆಪಿಯ ಗೆಲುವಿನ ಓಟವನ್ನು ತಪ್ಪಿಸುವ ಸಲುವಾಗಿ ಬಿಜೆಪಿಯೇತರ ಪಕ್ಷಗಳೆಲ್ಲವೂ ಒಟ್ಟಾಗಬೇಕು ಎಂದು ಕಾಂಗ್ರೆಸ್‌ ಹೇಳಿದೆ. ಸೋಲಿನ ನಂತರ ಟ್ವೀಟ್‌ ಮಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲ ಅವರು, ಬಿಹಾರದ ನಿತೀಶ್‌ಕುಮಾರ್‌, ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರಾದೇಶಕ ಪಕ್ಷಗಳೆಲ್ಲವೂ ಒಂದಾಗಬೇಕು ಎಂದು ಹೇಳಿದ್ದಾರೆ. 

ಸ್ವರಾಜ್‌ ಇಂಡಿಯಾ ಶೂನ್ಯ
ಕೇಜ್ರಿವಾಲ್‌ ಬಣದಿಂದ ಬೇರೆಯಾಗಿ ತಮ್ಮದೇ ಪಕ್ಷ ಕಟ್ಟಿಕೊಂಡು ಕಣಕ್ಕಿಳಿದಿದ್ದ ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರನ್ನೊಳಗೊಂಡ ಸ್ವರಾಜ್‌ ಇಂಡಿಯಾ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಶೂನ್ಯ ಸಾಧನೆ ಮಾಡಿದೆ. 211 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಈ ಪಕ್ಷ 111 ಮಹಿಳೆಯರಿಗೆ ಟಿಕೆಟ್‌ ಕೊಟ್ಟಿತ್ತು. ಗೆಲುವು ಕಷ್ಟ ಎಂಬುದು ಗೊತ್ತಿತ್ತು. ಆದರೂ ಮತದಾರರಲ್ಲಿ ಅರಿವು ಮೂಡಿಸುವುದಕ್ಕಾಗಿ ಸ್ಪರ್ಧಿಸಿದ್ದೆವು ಎಂದು ಯೋಗೇಂದ್ರ ಯಾದವ್‌ ಟ್ವೀಟಿಸಿದ್ದಾರೆ. ಇವಿಎಂಗಳ ಬಗ್ಗೆ ಮಾತನಾಡುವ ಆಪ್‌ ನಾಯಕರ ಬಗ್ಗೆಯೂ ಅವರು ಟೀಕಿಸಿದ್ದಾರೆ. 

ಗೆದ್ದದ್ದು ಹೇಗೆ?
– ಆಡಳಿತಾರೂಢ ವಿರೋಧಿ ಅಲೆ ಬೀಸಬಹುದು ಎಂದು ಹಾಲಿ ಸದಸ್ಯರಿಗೆ ಟಿಕೆಟ್‌ ನಿರಾಕರಣೆ

– 270 ವಾರ್ಡ್‌ಗಳಲ್ಲಿ 267ಕ್ಕೆ ಹೊಸ ಮುಖಗಳನ್ನೇ ಹಾಕಿದ್ದ ಬಿಜೆಪಿ ಹಾಲಿ ಸದಸ್ಯರ ಯಾವುದೇ ಕುಟುಂಬ ಸದಸ್ಯರಿಗೆ ಟಿಕೆಟ್‌ ಕೊಡಲಾಗಿಲ್ಲ

– ಆಯಾ ವಾರ್ಡ್‌ಗಳ ಜನರನ್ನೇ ಆರಿಸಿ ಟಿಕೆಟ್‌ ನೀಡಿದ್ದ ಬಿಜೆಪಿ

– ಪ್ರಧಾನಿ ನರೇಂದ್ರ ಮೋದಿ ಅವರಿಗಿರುವ ವರ್ಚಸ್ಸು ಬಳಸಿಕೊಂಡು ಮತಯಾಚನೆ

– ಅಮಿತ್‌ ಶಾರಿಂದ ಹಿರಿಯ ಕೇಂದ್ರ ಸಚಿವರ ಕೋರ್‌ ಕಮಿಟಿ ರಚಿಸಿ ಉಸ್ತುವಾರಿ

– ಕಾಂಗ್ರೆಸ್‌ ನಾಯಕರಾದ ಅರ್ವಿಂದರ್‌ ಲವ್ಲೀ, ಬರ್ಕಾ ಶುಕ್ಲಾ ಸಿಂಗ್‌ ಬಿಜೆಪಿ ಸೇರ್ಪಡೆ

– ಉತ್ತರ ಪ್ರದೇಶ, ಉತ್ತರಾಖಂಡದ ಗೆಲುವನ್ನು ಮುಂದಿಟ್ಟು ಮತಯಾಚನೆ 

ಅಧಿಕಾರ ದಾಹದಿಂದಾಗಿ ಈ ಸೋಲಾಗಿದೆ. ಕೇಜ್ರಿವಾಲ್‌ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ದಿಲ್ಲಿಯಲ್ಲಿ ಅಧಿಕಾರಕ್ಕೇರಿದಾಗ, ಜನರ ನಿರೀಕ್ಷೆ ಬಹಳಷ್ಟಿದ್ದವು. ಆದರೆ ಅವೆಲ್ಲವೂ ಸುಳ್ಳಾಗಿವೆ.
– ಅಣ್ಣಾ ಹಜಾರೆ, ಸಾಮಾಜಿಕ ಕಾರ್ಯಕರ್ತ

ಪಕ್ಷದ ಸೋಲಿಗಾಗಿ ಇವಿಎಂಗಳನ್ನು ಬೈಯ್ಯುವುದರಲ್ಲಿ ಅರ್ಥವೇ ಇಲ್ಲ. ಮೊದಲು ಸೋತದ್ದು ಏಕೆ ಎಂದು ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಿ. ಸ್ಥಳೀಯ ಕ್ರಿಕೆಟ್‌ ತಂಡದ ರೀತಿ ಆಡುವುದನ್ನು ಬಿಡಲಿ.
– ಭಗವಂತ್‌ ಮಾನ್‌, ಆಪ್‌ ಸಂಸದ

ಕೇಜ್ರಿವಾಲ್‌ಗೆ ಟ್ವೀಟರ್‌ನಲ್ಲಿ ಲೇವಡಿ
ಮತ ಹಾಕುವ ಮುನ್ನ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ ಅಂತ ಕೇಜ್ರಿವಾಲ್‌ ಹೇಳಿದ್ರು, ಜನ ಆಲೋಚಿಸಿ ಬಿಜೆಪಿಗೆ ಮತ ಹಾಕಿದ್ರು!
– ಸರ್‌ ಜಡೇಜಾ 

ಹೀಗಳೆದದ್ದು ಬಿಟ್ಟರೆ, ಕೇಜ್ರಿವಾಲ್‌ ಗ್ಯಾಂಗ್‌ ದಿಲ್ಲಿಗಾಗಿ ಬೇರೇನೂ ಮಾಡಲಿಲ್ಲ. ಅದರ ನೈಜ ಫ‌ಲಿತಾಂಶ ಈಗ ಬಂದಿದೆ. 
– ಅಶೋಕ್‌ ಕೆಕೆಸಿ9 

ಆಪ್‌ನವರು ಈಗಲೂ ಇವಿಎಂ ದೂರುತ್ತಿದ್ದಾರೆ; ನೀವು ಯಾವಾಗಲೋ ಒಂದು ಸಂದರ್ಭ ಜನರನ್ನು ಮೋಸಗೊಳಿಸಬಹುದು, ಆದರೆ ಯಾವಾಗಲೂ ಅದನ್ನು ಮಾಡಲು ಸಾಧ್ಯವಿಲ್ಲ. 
– ಸದಾಶಿವ್‌828

ಇವಿಎಂಗಳನ್ನು ದೂರುವ ಬದಲು, ಸಂಘಟನೆಗೆ ಒತ್ತುಕೊಟ್ಟಿದ್ದರೆ, ಆಪ್‌ ಗೆಲ್ಲುತ್ತಿತ್ತು. 
– ಸಂದೀಪ್‌

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.