ಕನಸು ಕಾಣುವ ಪುಟ್ಟ


Team Udayavani, Apr 27, 2017, 3:47 PM IST

kathe1–puttana-kanasu1.jpg

ಪುಟ್ಟನಿಗೆ ಕನಸು ಕಾಣುವುದೆಂದರೆ ಬಹಳ ಇಷ್ಟ. ಒಮ್ಮೆ ಪ್ರಸಿದ್ಧ ಸಂಗೀತಗಾರನಾದ ಹಾಗೆ, ಇನ್ನೊಮ್ಮೆ ಪ್ರಖ್ಯಾತ ಓಟಗಾರನಾದ ಹಾಗೆ, ಮಗದೊಮ್ಮೆ ತರಗತಿಗೇ ಮೊದಲಿಗನಾಗಿ ಒಳ್ಳೆಯ ಅಂಕ ಪಡೆದ ಹಾಗೆ… ಹೀಗೆಲ್ಲಾ ಕನಸುಗಳನ್ನು ಕಾಣುತ್ತಿದ್ದನು.ಅವನ ಕನಸಿನಲ್ಲಿ ಯಾವತ್ತೂ ಸಾಧನೆ ಮಾಡುತ್ತಿದ್ದನು. ಆವಾಗ ಸುತ್ತಲಿದ್ದವರು ಭೇಷ್‌ ಎನ್ನುತ್ತಿದ್ದರು. ಆಗ ಪುಟ್ಟನಿಗೆ ಖುಷಿಯೋ ಖುಷಿ! ಆದರೆ ನಿದ್ದೆಯಿಂದ ಎದ್ದು ಕಣ್ಣು ತೆರೆದಾಗ ಅದು ಕನಸೆಂದು ತಿಳಿದು ಪೆಚ್ಚಾಗುತ್ತಿದ್ದನು.

ಒಂದು ದಿನ ಏಳುವುದು ತಡವಾಗಿ. “ಏಳ್ಳೋ ಬೇಗ…’ ಎಂದು ತೋಳು ಹಿಡಿದು ಅಮ್ಮ ಎಬ್ಬಿಸಿದಳು. ಪುಟ್ಟ ಅರೆಮನಸ್ಸಿನಿಂದ ಎದ್ದನು. ತಡವಾದುದರಿಂದ ಟೀಚರ್‌ ಕೊಟ್ಟ ಹೋಂವರ್ಕ್‌ನ್ನು ಮಾಡದೆ ಹಾಗೆಯೇ ಶಾಲೆಗೆ ಹೋದನು. ಶಿಕ್ಷೆಯನ್ನೂ ಅನುಭವಿಸಿದನು. ಮಕ್ಕಳೆಲ್ಲ ಅವನನ್ನು ಕಂಡು ನಗುತ್ತಿದ್ದರು.

ಕನಸಿನಲ್ಲಿ ಅವನನ್ನು ಹೊಗಳುತ್ತಾ, ಶಹಬ್ಟಾಸ್‌ಗಿರಿ ನೀಡುತ್ತಿದ್ದವರೆಲ್ಲರೂ ವಾಸ್ತವದಲ್ಲಿ ಏವನನ್ನು ಗೇಲಿ ಮಾಡುತ್ತಿದ್ದವರಾಗಿದ್ದರು. ಎಲ್ಲರ ಮೆಚ್ಚುಗೆ ಪಡೆಯಬೇಕೆಂಬ ಹುಮ್ಮಸ್ಸಿನಲ್ಲಿ ಶಾಲೆಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದನಾದರೂ ಯಾವುದರಲ್ಲೂ ಅವನಿಗೆ ಬಹುಮಾನ ಸಿಗುತ್ತಿರಲಿಲ್ಲ. ಅವನಿಗೆ ಹಾಡುವುದೆಂದರೆ ತುಂಬಾ ಇಷ್ಟ. ಅವನು ಹಾಡುತ್ತಿದ್ದ ಕನಸುಗಳೇ ಹೆಚ್ಚು ಬೀಳುತ್ತಿದ್ದುದು. ಆದರೆ ವಾಸ್ತವದಲ್ಲಿ ಅವನು ಚೆನ್ನಾಗಿ ಹಾಡುತ್ತಿರಲಿಲ್ಲ. ಏಕೆಂದರೆ ಅವನು ಅಭ್ಯಾಸ ಮಾಡುತ್ತಿರಲಿಲ್ಲ. ಬರಿ ಕನಸು ಕಾಣುತ್ತಿದ್ದ ಅಷ್ಟೆ.

ಅದೊಂದು ದಿನ ಶಾಲೆಗೆ ಹೆಸರಾಂತ ಗಾಯಕರೊಬ್ಬರು ಬಂದಿದ್ದರು. ಅವರು ಪುಟ್ಟನ ಮೆಚ್ಚಿನ ಗಾಯಕರಾಗಿದ್ದರು. ಅವರ ಆಟೋಗ್ರಾಫ್ ಪಡೆಯುವ ಮನಸ್ಸು ಪುಟ್ಟನಿಗಾಯಿತು. ಮೆಲ್ಲನೆ ಸ್ಟೇಜ್‌ ಬಳಿಗೆ ಸಾಗಿದ ಪುಟ್ಟ. ಅಲ್ಲಿ ಸಂಗೀತ ವಿದ್ಯಾರ್ಥಿಗಳಿಂದ ಹಾಡುಗಾರಿಕೆ ನಡೆಯುವುದಿತ್ತು. ಅದಾದ ಮೇಲೆ ವೇದಿಕೆ ಮೇಲೆ ತೆರಳಿ ಹಸ್ತಾಕ್ಷರ ಪಡೆಯೋಣ ಎಂದುಕೊಂಡನ ಪುಟ್ಟ. ಆದರೆ ಅಷ್ಟರಲ್ಲಿ ಕರೆಂಟ್‌ ಹೋಯಿತು. ಯಾರಿಗೂ ಕಾಣದಂತೆ ಹಸ್ತಾಕ್ಷರ ಪಡೆಯಲು ಇದೇ ಸುಸಂದರ್ಭ ಎಂದುಕೊಂಡು ವೇದಿಕೆಯೇರಿದ ಪುಟ್ಟ. ಅವನು ಇನ್ನೂ ವೇದಿಕೆ ಮಧ್ಯದಲ್ಲಿರುವಂತೆಯೇ ಕರೆಂಟು ಬಂದಿತು. ಒಮ್ಮೆಲೇ ಜಗ್ಗೆಂದು ಎಲ್ಲೆಡೆ ಬೆಳಕಾಯಿತು! ನೋಡಿದರೆ ಅಲ್ಲಿ… ಪ್ರಿನ್ಸಿಪಾಲರು, ಶಿಕ್ಷಕರು, ವಿದ್ಯಾರ್ಥಿಗಳು ಎಲ್ಲರೂ ಇದ್ದಾರೆ! “ಓಹೋ ಹಾಡುವುದಕ್ಕೆ ಬಂದಿದ್ದಾನೆ ಮೈಕ್‌ ಕೊಡಿ ಇವನಿಗೆ’ ಎಂದು ಎಲ್ಲರೂ ಅಪಹಾಸ್ಯ ಮಾಡುತ್ತಿದ್ದಾರೆ!

ಪುಟ್ಟ ಅಳತೊಡಗಿದ. ಭಯದಿಂದ ತತ್ತರಗೊಂಡಿದ್ದ ಪುಟ್ಟನನ್ನು ಆ ಗಾಯಕರು ನೋಡಿದರು. ಮುಗುಳ್ನಗುತ್ತ ಹತ್ತಿರ ಬಂದು ಹೆಗಲ ಮೇಲೆ ಕೈಹಾಕಿದರು. ಅವರು ಪುಟ್ಟನನ್ನು ಮಾತಾಡಿಸಿದಾಗ ತನ್ನ ಸಂಗೀತಾಸಕ್ತಿಯ ಕುರಿತು ಹೇಳಿಕೊಂಡ. ಅವರು ವಾರಾಂತ್ಯದಲ್ಲಿ ಸಂಗೀತ ಪಾಠಕ್ಕೆ ತಮ್ಮ ಮನೆಗೇ ಬರುವಂತೆ ಆಹ್ವಾನಿಸಿದರು. ಪುಟ್ಟನಿಗೆ ಆದ ಸಂತಸ ಅಷ್ಟಿಷ್ಟಲ್ಲ. ಬರಿ ಕನಸು ಕಾಣುವುದರಿಂದ ಏನೂ ಸಾಧನೆ ಮಾಡಲಾಗುವುದಿಲ್ಲವೆಂದೂ, ಕನಸನ್ನು ನನಸು ಮಾಡುವುದಕ್ಕೆ ಪರಿಶ್ರಮ ಪಡಬೇಕೆಂಬ ಸತ್ಯ ಪುಟ್ಟನಿಗೆ ಅರ್ಥವಾಯಿತು ಸ್ಟೇಜ್‌ ಮೇಲೆ ಹಾಡಿ ಎಲ್ಲರ ಮೆಚ್ಚುಗೆ ಗಳಿಸಲೇಬೇಕೆಂಬ ಹುಮ್ಮಸ್ಸಿನಲ್ಲಿ ಪುಟ್ಟ ಈಗ ಸಂಗೀತಾಭ್ಯಾಸವನ್ನು ಮಾಡಿದ. ಶಾಲಾ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನೂ ಗೆದ್ದ. ಒಂದು ಸಮಯದಲ್ಲಿ ತಾನು ಕನಸು ಕಾಣುತ್ತಿದ್ದಂತೆ ಶಿಕ್ಷಕರ, ವಿದ್ಯಾರ್ಥಿಗಳ ಮೆಚ್ಚುಗೆಯನ್ನೂ ಪಡೆದ.

– ರಾಜೇಶ್ವರಿ ಜಯಕೃಷ್ಣ

ಟಾಪ್ ನ್ಯೂಸ್

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

1-abaz-matr-11

Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್‌ ಇದ್ರು ಸಿಕ್ಕಿದ್ದು ಕೇವಲ 155 ಮತ!!

Riots against mosque survey: Police fire tear gas at Sambhal

Sambhal: ಮಸೀದಿ ಸರ್ವೇ ವಿರೋಧಿಸಿ ಗಲಾಟೆ: ಅಶ್ರುವಾಯು ಸಿಡಿಸಿದ ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

11

IPL ‌Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?

Iyer

IPL ‌Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್‌ ಅಯ್ಯರ್‌ ಪಂಜಾಬ್‌ ಪಾಲಿಗೆ

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

IPL Mega Auction: ಹರಾಜು ಆರಂಭ; ಭರ್ಜರಿ ಬಿಡ್‌ ಗಳಿಸಿದ ವೇಗಿ ಅರ್ಶದೀಪ್‌ ಸಿಂಗ್

20-uv-fusion

UV Fusion: ಜೀವಂತಿಕೆ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Saira Banu: ಎ.ಆರ್‌.ರೆಹಮಾನ್‌ರಿಂದ ದೂರವಾದ ಬಗ್ಗೆ ಕೊನೆಗೂ ಮೌನ ಮುರಿದ ಸಾಯಿರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.