
ಚೆನ್ನೆಮಣೆ ಹೋಯಿತು, ಮೊಬೈಲ್ ಗೇಮ್ ಬಂತು!
Team Udayavani, Apr 28, 2017, 3:45 AM IST

ನಾವೆಲ್ಲರೂ ಚಿಕ್ಕದಿರುವಾಗ ದಸರಾ ರಜೆ, ಬೇಸಿಗೆ ರಜೆಗಳೆಲ್ಲ ಬರುವುದೇ ಕಾಯುತ್ತ ಇದ್ದೆವು. ಬೇಸಿಗೆ ರಜೆ ಬರುವಾಗ ಶಾಲೆಯಲ್ಲಿ ಕೊಟ್ಟ ಹೋಮ್‌ವರ್ಕ್ ನ್ನೆಲ್ಲಾ ಪರೀಕ್ಷೆ ಆದ ತಕ್ಷಣ ಶಾಲೆಯಲ್ಲಿ ಹತ್ತು ದಿನ ಸುಮ್ಮನೆ ಶಾಲೆಗೆ ಬಂದು ಹೋಗುವುದಿರುತ್ತಲ್ಲ ಆ ಸಮಯದಲ್ಲಿ ಒಂದು ನಿಮಿಷಾನೂ ಬಿಡದೆ ರಜೆಗೆ ಅಂತ ಕೊಟ್ಟ ಹೋಮ್‌ವರ್ಕ್‌ನೆಲ್ಲಾ ಆ ಹತ್ತು ದಿನದಲ್ಲೇ ಮುಗಿಸಿಕೊಳ್ಳುತ್ತಿದ್ದೆವು. ನಂತರ ರಜೆ ಕೊಟ್ಟ ದಿನದಿಂದಲೇ ಅಕ್ಕ-ಪಕ್ಕದ ಮನೆಯ ಫ್ರೆಂಡ್ಸ್ ಜೊತೆಗೆ ಮತ್ತು ರಜೆ ಎಂದು ನೆಂಟರ ಮನೆಗೆ ಬಂದವರು ಸ್ವಲ್ಪ ಜನ ಎಲ್ಲ ಸೇರಿ ಹೊಸ ಹೊಸ ಫ್ರೆಂಡ್ಸ್ ಎಲ್ಲಾ ಸಿಗುತ್ತಿದ್ದರು. ನಾವೆಲ್ಲರೂ ಸೇರಿಕೊಂಡು ದಿನಾಲೂ ಕರೆಂಟ್ ಇದ್ದರೆ ಟಿ.ವಿ. ನೋಡುತ್ತಿದ್ದೆವು. ಕರೆಂಟ್ ಇಲ್ಲ ಎಂದರೆ ಹೊರಗಡೆ ಬಂದು ಚಿನ್ನಿ-ದಾಂಡು-ಲಗೋರಿ-ಕವಡೆ-ಗೋಲಿ- ಚೆನ್ನೆಮಣೆ- ಕುಂಟಾಬಿಲ್ಲೆ ಆಡುತ್ತಿದ್ದೆವು.
ಮರಕ್ಕೆ ಅಮ್ಮನ ಸೀರೆಯನ್ನು ಕಟ್ಟಿ ಜೋಕಾಲಿ ಮಾಡಿಕೊಂಡು ತೂಗುತ್ತಿದ್ದೆವು. ಇವನ್ನೆಲ್ಲ ಆಡಿ ಮನೆಗೆ ಐದು-ಆರು ಗಂಟೆಗೆ ಹಿಂದಿರುಗುತ್ತಿದ್ದೆವು. ಅಪ್ಪ-ಅಮ್ಮ-ಅಜ್ಜಿ ಎಲ್ಲರೂ ಸಹ ಮನೆಗೆ ಬಂದ ತತ್‌ಕ್ಷಣ “ಇದೇನು ಇಷ್ಟು ಬಟ್ಟೆ ಮಣ್ಣು ಮಾಡಿಕೊಂಡು ಬಂದಿದ್ದೀಯಾ’ ಎಂದು ಬೈಯುತ್ತಿದ್ದರು. ಆದರೂ ಈ ಆಟಗಳಿಂದ ಏನೋ ಒಂಥರಾ ಸಂತೋಷ ಸಿಗುತ್ತಿತ್ತು. ಆದರೆ, ಈಗಿನ ಚಿಕ್ಕ ಚಿಕ್ಕ ಹಳ್ಳಿ ಮಕ್ಕಳು ಹೊರಗಡೆ ಹೋಗುವುದೇ ಕಮ್ಮಿ. ಕರೆಂಟ್ ಇದ್ದರೆ ಟಿ. ವಿ. ನೋಡುತ್ತಾರೆ. ಕರೆಂಟ್ ಇಲ್ಲ ಎಂದರೆ ಮೊಬೈಲ್‌ನಲ್ಲಿ ಗೇಮ್ಸ್ ಆಡ್ತಾರೆ. ಕೆಲವು ಸಲ ಕರೆಂಟ್ ಇದ್ರೂ ಸಹ ಕೈಯಲ್ಲೊಂದು ಮೊಬೈಲ್ ಇರುತ್ತೆ. ಟಿ.ವಿ. ಇದ್ರೂ ಅದರ ಪಾಡಿಗೆ ಅದು ಚಾಲೂ ಇರುತ್ತದೆ. ಮಕ್ಕಳು ಇವರ ಪಾಡಿಗೆ ಇವ್ರು ಮೊಬೈಲ್‌ನಲ್ಲಿ ಗೇಮ್ಸ್ ಆಡ್ತಾನೇ ಇರುತ್ತಾರೆ. “ಹೊರಗಡೆ ಹೋಗುವ ಬನ್ನಿ’ ಎಂದರೆ, “ಇಲ್ಲ ಸ್ವಲ್ಪ ಕೆಲಸ ಇದೆ’ ಎಂದು ಹೇಳ್ತಾರೆ. ಈ ಆಟಗಳ ಹೆಸರನ್ನೆಲ್ಲಾ ಹೇಳಿ ಆಟ ಆಡುವ ಬನ್ನಿ ಎಂದು ಹೇಳಿದರೆ, “ನಾನು ಬರುವುದಿಲ್ಲಪ್ಪಾ… ಅಪ್ಪ ಅಮ್ಮ ಬೈತಾರೆ ಬಟ್ಟೆ ಮಣ್ಣಾಗುತ್ತದೆ’ ಎಂದು ಹೇಳಿ ದೊಡ್ಡ ದೊಡ್ಡ ಮೊಬೈಲ್ ಹಿಡಿದು ಗೇಮ್ಸ್ ಆಡ್ತಾ ಇರ್ತಾರೆ. “ರಜೆ ಬಂತು, ಸ್ವಲ್ಪ ದಿನ ನೆಂಟರ ಮನೆಯಲ್ಲಿ ಹೋಗಿ ಇರ್ತೀಯಾ’ ಎಂದರೆ, “ಇಲ್ಲಪ್ಪಾ ಅಲ್ಲಿ ಆಟ ಆಡುವುದಕ್ಕೆ ಯಾರೂ ಮೊಬೈಲ್ ಕೊಡುವುದಿಲ್ಲ’ ಎಂದು ಹೋಗುವುದೇ ಇಲ್ಲ. ಅಪ್ಪಿತಪ್ಪಿ ಹೊರಟರೂ ಸಹ ಅಪ್ಪ-ಅಮ್ಮ ಜೊತೆಗೆ ಇರಲೇಬೇಕು. ಕಾರಣ, ಮಗು ಕೇಳಿದಾಗಲೆಲ್ಲ ಮೊಬೈಲ್ ಕೊಟ್ಟು ಕೊಟ್ಟು ಮಕ್ಕಳನ್ನು ಮುದ್ದಾಗಿ ಸಾಕಿರುವುದು. ಆಗ ಮಕ್ಕಳು ಅಪ್ಪ ತೋಟದ ಕೆಲಸ ಮಾಡಿ ಮನೆಗೆ ಬಂದ ತಕ್ಷಣ, “ಅಪ್ಪಾ ಹೊರಗಡೆ ಹೋಗಿ ಆಟ ಆಡಿ ಬರುತ್ತೇನೆ’ ಎಂದು ಕೇಳುತ್ತಿದ್ದರು. ಈಗಿನ ಮಗು “ಅಪ್ಪಾ ಮೊಬೈಲ್ ಎಲ್ಲಿಟ್ಟಿದ್ದೀರಾ, ಸ್ವಲ್ಪ ಕೊಡಿ ಗೇಮ್ಸ್ ಆಡಿ ಕೊಡುತ್ತೇನೆ’ ಎಂದು ಕೇಳುತ್ತದೆ.
– ಸಿಂಚನಾ ಎಂ. ಆರ್.
ದ್ವಿತೀಯ ಬಿ. ಎ., ಎಂಜಿಎಂ ಕಾಲೇಜು, ಉಡುಪಿ
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Padubidri: ಅಪರಿಚಿತ ವಾಹನ ಢಿಕ್ಕಿ; ಪಾದಚಾರಿಗೆ ತೀವ್ರ ಗಾಯ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Surathkal: ಅಡುಗೆ ಅನಿಲ ಸೋರಿಕೆ ಪ್ರಕರಣ; ಸುಧಾರಿಸದ ಗಾಯಾಳುಗಳ ಆರೋಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.