ಸರ್ವಾಧಿಕಾರಿ ಧೋರಣೆ ನಡೆಯದು;ಬಿಎಸ್‌ವೈಗೆ ಈಶ್ವರಪ್ಪ ಬಹಿರಂಗ ಎಚ್ಚರಿಕೆ


Team Udayavani, Apr 28, 2017, 10:06 AM IST

27BNP-(2).jpg

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಡೆಸಿದ ಸಂಧಾನದ ಬಳಿಕ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ  ಮತ್ತೆ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಕಿಡಿ ಕಾರಲು ಆರಂಭಿಸಿದ್ದಾರೆ.ಅಷ್ಟೇ ಅಲ್ಲ ಯಡಿಯೂರಪ್ಪ ಅವರಿಗೆ ಸಾರ್ವಜನಿಕ ವೇದಿಕೆಯಿಂದಲೇ ಎಚ್ಚರಿಕೆ ನೀಡುವ ಹಂತಕ್ಕೂ ಅವರು ತಲುಪಿದ್ದಾರೆ.

“ನೀವು ರಾಜ್ಯ ಬಿಜೆಪಿ ಅಧ್ಯಕ್ಷರು, ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದಾಗ ನಾವು ಖುಷಿಯಿಂದ ಒಪ್ಪಿಕೊಂಡಿದ್ದೇವೆ. ಹಾಗೆಂದ ಮಾತ್ರಕ್ಕೆ ನಿಮಗೆ ಬೇಕಾಗಿದ್ದನ್ನಮಾಡಿಕೊಂಡು ಹೋದರೆ ಸುಮ್ಮನಿರಲು ಸಾಧ್ಯವಿಲ್ಲ. ನಿಮ್ಮ ಸರ್ವಾಧಿಕಾರಿ ಧೋರಣೆ ಬಿಜೆಪಿಯಲ್ಲಿ ನಡೆಯುವುದಿಲ್ಲ’ ಎಂದು ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಗುರುವಾರ ನಗರದ ಅರಮನೆ ಮೈದಾನಲ್ಲಿ ಹಮ್ಮಿಕೊಂಡಿದ್ದ “ಸಂಘಟನೆ ಉಳಿಸಿ’ ಬಿಜೆಪಿ ಪ್ರಮುಖ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿಮಾತನಾಡಿದ ಅವ‌ರು,ತಮ್ಮ ಭಾಷಣದುದ್ದಕ್ಕೂ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು ಈ ಹಿಂದೆ ಲಕ್ಷಾಂತರ ಕಾರ್ಯಕರ್ತರು ಬೇಡ, ಬೇಡ ಎಂದು ಗೋಗರೆದರೂ ಯಾರ ಮಾತೂ ಕೇಳದೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ್ದೀರಿ.  ಚುನಾವಣೆಯಲ್ಲಿ ನಿಮಗೆ ಕೇವಲ ಆರು ಸ್ಥಾನ ಮಾತ್ರ ಬಂತು. ಬಿಜೆಪಿ 40 ಸ್ಥಾನ ಗಳಿಸಿತು. ನೀವು ಬಿಜೆಪಿಗೆ ವಾಪಸಾದ ಬಳಿಕ ನೀವೆ ಪಕ್ಷದ ಮುಖ್ಯಮಂತ್ರಿಅಭ್ಯರ್ಥಿ ಎಂದು ಘೋಷಿಸಲಾಗಿದೆ. ಇನ್ನಾದರೂ ಹಳೆಯ ತಪ್ಪು ಮರುಕಳಿಸದಂತೆ ಪಕ್ಷದ ನಿಷ್ಠಾವಂತರನ್ನು ವಿಶ್ವಾಸಕ್ಕೆ ತಗೆದುಕೊಂಡು ಮುಂದುವರಿಯಿರಿ ಎಂಬ ಸಲಹೆಯನ್ನೂ ಅವರು ನೀಡಿದರು ಸಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಪಕ್ಷ ನೀಡಿದ ಎಚ್ಚರಿಕೆ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ಇಲ್ಲಿ ಕೂತವರು ನಾಯಿ-ನರಿಗಳಲ್ಲ, ಹುಲಿಗಳು. ನಮ್ಮ ಪ್ರಾಣ ಹೋದರೂ ರಕ್ತದ ಕಣ ಕಣದಲ್ಲಿ ಬಿಜೆಪಿ ಇದೆ. ಪದವಿ, ಹಣಕ್ಕಾಗಿ ಕುತ್ತಿಗೆ ಕೊಯ್ದರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಬೇರೆ ಪಕ್ಷ ಸೇರುವುದಿಲ್ಲ ಮತ್ತು ಹೊಸ ಪಕ್ಷ ಕಟ್ಟುವುದೂ ಇಲ್ಲ. ಪಕ್ಷ ವಿರೋಧಿ ಕೆಲಸ ಮಾಡಿದರೆ ತಾಯಿಗೆ ದ್ರೋಹ ಬಗೆದಂತೆ ಎಂದು ನಂಬಿರುವವರು ನಾವು. ಅಂತಹದ್ದರಲ್ಲಿ ಪಕ್ಷ ಬಿಟ್ಟುಹೋಗಿ ಮತ್ತೆ ಬಂದವರು ನಮಗೆ ಎಚ್ಚರಿಕೆ ಕೊಡುತ್ತಾರೆ ಎನ್ನುವುದಾದರೆ ಈ ಸಭೆ ಅಂಥವರಿಗೆ ಎಚ್ಚರಿಕೆ ಕೊಡುತ್ತದೆ ಎಂದು ಹೇಳುವ ಮೂಲಕ ಯಡಿಯೂರಪ್ಪ ಮತ್ತು ಬೆಂಬಲಿಗರಿಗೆ ಟಾಂಗ್‌ ನೀಡಿದರು.

ಸಂಘಟನೆಯ ಸರ್ಕಾರ ಅಧಿಕಾರಕ್ಕೆ ಬರಬೇಕು:
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿರುವ ಸಂದರ್ಭದಲ್ಲಿ ಎಲ್ಲರೂ ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಮಗೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂಬ ಆಸೆಯಿದೆ ಹಾಗೂ ಅಧಿಕಾರಕ್ಕೆ ಬಂದೇ ಬರುತ್ತದೆ ಎಂಬ ವಿಶ್ವಾಸವೂ ಇದೆ. ಆದರೆ, ಹೇಗೋ ಸರ್ಕಾರ ಬರಬೇಕು. ಬಿಜೆಪಿಯ ತತ್ವ, ಸಿದ್ಧಾಂತ, ಸಂಘಟನೆ ಬಗ್ಗೆ ಗೊತ್ತಿಲ್ಲದೇ ಇದ್ದರೂ ಪರವಾಗಿಲ್ಲ, ಅಂಥವರನ್ನೆಲ್ಲಾ ಗೆಲ್ಲಿಸಿಕೊಂಡು ಬಂದು ಸರ್ಕಾರ ಮಾಡಲು ಅವಕಾಶ ನೀಡುವುದಿಲ್ಲ. ಸಂಘಟನೆಯೂ ಉಳಿಯಬೇಕು. ಮತ್ತು ಆ ಸಂಘಟನೆಯದ್ದೇ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಹೋರಾಟ. ತುರ್ತು ಪರಿಸ್ಥಿತಿಯಲ್ಲಿ ಜೈಲು ಸೇರಿದವರು, ಪೊಲೀಸರಿಂದ ಒದೆ ತಿಂದು ಸಂಘಟನೆ ಕಟ್ಟಿದವರು, ನಿಷ್ಠಾವಂತ ಕಾರ್ಯಕರ್ತರ ಬಿಜೆಪಿ ಸರ್ಕಾರ ಧಿಕಾರಕ್ಕೆ ಬರಬೇಕು ಎಂದು ಈ ಸಭೆ ಕರೆದಿದ್ದೇವೆ. ಇಲ್ಲಿಗೆ ಬಂದಿರುವವರು ಜೀವನದ ಕೊನೆಯವರೆಗೂ ಬಿಜೆಪಿಯಲ್ಲಿ ಇರುವವರು, ಪಕ್ಷ ಉಳಿಸುತ್ತೇವೆ ಎನ್ನುವವರು. ಪ್ರಾಣ ಬಿಟ್ಟಾರೇ ಹೊರತು ಪಕ್ಷ ಬಿಡದವರು ಎಂದು ಹೇಳಿದರು.

ಈ ಸಭೆ ಕರೆದಿರುವುದು ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ. ಸಂಘಟನೆಯ ಒಳಿತಿಗಾಗಿ. ನಮ್ಮನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರು ಎಂದಾದರೂ ಕರೆಯಿರಿ, ಭಿನ್ನಮತೀಯ ಚಟುವಟಿಕೆ ನಡೆಸುವವರು ಎಂದಾದರೂ ಹೇಳಲಿ. ಆದರೆ, ನಾವು ತಂದೆ ತಾಯಿಗೆ ಹುಟ್ಟಿದವರು ನಾವು. ಬಿಜೆಪಿ ಬಿಡುವುದಿಲ್ಲ ಮತ್ತು ಬೇರೆ ಪಕ್ಷ ಕಟ್ಟುವುದೂ ಇಲ್ಲ. ಇದು ನಮ್ಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು.

ಗೊಂದಲ ಬಗೆಹರಿಸಲು ರಾಷ್ಟ್ರೀಯ ಅಧ್ಯಕ್ಷರು ಹೇಳಿದರೂ ಸಭೆ ಕರೆಯುವುದಿಲ್ಲ ಎನ್ನುವುದು, 24 ಮಂದಿ ಅಸಮಾಧಾನ ವ್ಯಕ್ತಪಡಿಸಿದಾಗ ಇಬ್ಬಿಬ್ಬರನ್ನು ಕರೆದು ಚರ್ಚಿಸುತ್ತೇನೆ ಎಂದು ಹೇಳುವುದು ಸರಿಯಲ್ಲ. ಈಗಲೂ ಹೇಳುತ್ತೇನೆ. ಇನ್ನೂ ಕಾಲ ಮಿಂಚಿಲ್ಲ. ಎಲ್ಲವನ್ನೂ ಚರ್ಚೆ, ಮಾತುಕತೆ ಮೂಲಕ ಬಗೆಹರಿಸಿಕೊಂಡು ಹೋಗೋಣ ಎಂದು ಸಲಹೆ ಮಾಡಿದರು.

ಯಡಿಯೂರಪ್ಪ ಅವರಿಗೆ ಈಶ್ವರಪ್ಪ ಹಾಕಿರುವ ಪಂಚ ಪ್ರಶ್ನೆಗಳು
– ಬಿಜೆಪಿಯಲ್ಲಿ ನಿಮಗೇನು ಕಮ್ಮಿ ಮಾಡಲಾಯಿತು ಎಂದು ಕೆಜೆಪಿ ಕಟ್ಟಿದ್ದಿರಿ? ಅಲ್ಲಿ ಹೋಗಿ ಕೇವಲ ಆರು ಸ್ಥಾನ ಗಳಿಸಿದ್ದೀರಿ. ಬಿಜೆಪಿಗೆ 40 ಸ್ಥಾನ ಬಂತು. ಅನ್ಯಾಯವಾಗಿ ನಿಮ್ಮಿಂದ ಬಿಜೆಪಿ ಬದಲು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಂತಾಯಿತು. ಆಗ ನಿಮ್ಮ ಜತೆಗಿದ್ದವರು ಕೆಜೆಪಿ ಕಟ್ಟುವಂತೆ ಮಾಡಿ ನಿಮ್ಮನ್ನು ಮಣ್ಣು ಮುಕ್ಕಿಸಿದರು. ಈಗ ಮತ್ತೆ ಅಂತಹದ್ದೇ ಪ್ರಯತ್ನಕ್ಕೆ ಮುಂದಾಗುತ್ತಿದ್ದು, ಅವರ ಮಾತು ನಂಬಿ 20-30 ವರ್ಷ ಪಕ್ಷಕ್ಕೆ ದುಡಿದ ನಿಷ್ಠಾವಂತರನ್ನು ಮೂಲೆಗುಂಪು ಮಾಡುವುದು ಸರಿಯೇ?

– ಈಗಾಗಲೇ ನಿಮ್ಮನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದು, ಎಲ್ಲರೂ ಅದಕ್ಕೆ ಒಪ್ಪಿ ಕೆಲಸ ಮಾಡುತ್ತಿದ್ದೇವೆ. ಆದರೆ, ನೀವು ಯಡಿಯೂರಪ್ಪ ಅವರ ಸುತ್ತ ಸುತ್ತಿದರೆ, ಅವರಿಗೆ ಜಿಂದಾಬಾದ್‌ ಕೂಗಿದರೆ ಪದಾಧಿಕಾರಿಗಳಾಗಬಹುದು ಎಂದು ಭಾವಿಸಿ ಆ ಕೆಲಸ ಮಾಡಿದವರನ್ನು ಹಿಂದುಳಿದ ವರ್ಗಗಳ ಮೋರ್ಚಾ, ಸ್ಲಂ ಮೋರ್ಚಾಗೆ ಅಧ್ಯಕ್ಷರನ್ನಾಗಿ ನೇಮಿಸಿದಿರಿ. ಈಗಲೂ ಸುಮ್ಮನಿದ್ದರೆ ಮುಂದೆ ಸರ್ಕಾರ ಬಂದಾಗ ಅವರೇ ಮಂತ್ರಿಗಳಾಗುವ ಸಾಧ್ಯತೆಯಿದೆ

– ಹಿಂದೆ ಯಾರಧ್ದೋ ಮಾತು ಕೇಳಿಕೊಂಡು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಮತ್ತೆ ಬಿಜೆಪಿಗೆ ಬಂದಾಗ, ಬಿಜೆಪಿಯಲ್ಲಿರುವ ದೇವ ದುರ್ಲಬ ಕಾರ್ಯಕರ್ತರು ಎಲ್ಲೂ ಸಿಗುವುದಿಲ್ಲ ಎಂದು ನನ್ನ ಬಳಿ ಹೇಳಿಕೊಂಡಿದ್ದೀರಿ. ಆದರೆ, ಈಗ ಇನ್ಯಾರಧ್ದೋ ಮಾತು ಕೇಳಿಕೊಂಡು ರಾಜ್ಯದಲ್ಲಿ ಒಂದು ಕೋಟಿ ಬಿಜೆಪಿ ಸದಸ್ಯತ್ವ ಮಾಡಿದ ಅಂತಹ ಪ್ರಾಮಾಣಿಕ, ದೇವ ದುರ್ಲಭ ಕಾರ್ಯಕರ್ತರನ್ನೇ ಅಮಾನತು ಮಾಡುತ್ತೀರಾ?

– ಅಮಿತ್‌ ಶಾ ಅವರು ಸಂಧಾನ ಸಭೆ ನಡೆಸಿದಾಗ ಕಾಂಗ್ರೆಸ್‌ನವರು ಹಿಂದುಳಿದ ವರ್ಗಗಳಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಬ್ರಿಗೇಡ್‌ ಮುಂದುವರಿಸಿ ಹಿಂದುಳಿದವರನ್ನು ಸಂಘಟಿಸಿ ಎಂದು ಹೇಳಿದ್ದರು. ಅದರಂತೆ ನಡೆದುಕೊಂಡಿದ್ದರು. ಅದೇ ಸಂದರ್ಭದಲ್ಲಿ ಸಂಘಟನೆ ಮತ್ತು ಕಾರ್ಯಕರ್ತರ ಗೊಂದಲವನ್ನು ಫೆ. 10ರೊಳಗೆ ಬಗೆಹರಿಸಿ ಎಂದು ನಿಮಗೆ ಹೇಳಿದ್ದರು. ಅದಕ್ಕೆ ಸಮಿತಿ ಮಾಡಿದ್ದರು. ಜಿಲ್ಲೆಯ ಕಾರ್ಯಕರ್ತರನ್ನು ಕರೆದು ಗೊಂದಲ ನಿವಾರಣೆ ಮಾಡಿ ಅಂದಿದ್ದರು. ಆದರೆ, ಇವತ್ತಿನವರೆಗೆ ಆ ಫೆ. 10 ಬಂದಿಲ್ಲ. ಇದಕ್ಕೇನು ಹೇಳುತ್ತೀರಿ?

– ಒಬ್ಬಿಬ್ಬರ ಜತೆ ಸೇರಿಕೊಂಡು ನಿರ್ಧಾರ ತೆಗೆದುಕೊಳ್ಳುತ್ತಿದ್ದೀರಿ. ನಿಷ್ಠಾವಂತರನ್ನು ಕಸ ಸರಿಸಿದಂತೆ ಬದಿಗೆ ಸರಿಸಿದ್ದೀರಿ. ಅದನ್ನು ಪ್ರಶ್ನಿಸಿದರೆ ಎಚ್ಚರಿಕೆ ಕೊಡುತ್ತೀರಿ. ನೀವು ಒಮ್ಮೆ ದುಡುಕಿ ತಪ್ಪು ಮಾಡಿದ್ದೀರಿ. ಪಕ್ಷ ಉಳಿಸಲು ಜತೆಗೆ ಬರುವವರನ್ನು ಕೂಡಿಸಿಕೊಂಡು ಉತ್ಕೃಷ್ಟ ಸರ್ಕಾರ ತರುತ್ತೀರಿ ಎಂದು ಈಗಲೂ ನನಗೆ ನಂಬಿಕೆ ಇದೆ. ಇದಕ್ಕಾಗಿ ನೀವೇನು ಮಾಡುತ್ತೀರಿ?

ಟಾಪ್ ನ್ಯೂಸ್

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Smart water meters revolutionize water conservation

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Viral Pics: ಡೇಟಿಂಗ್‌ ರೂಮರ್ಸ್‌ ನಡುವೆ ವಿಜಯ್‌ – ರಶ್ಮಿಕಾ ಸೀಕ್ರೆಟ್‌ ಲಂಚ್‌ ಡೇಟ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

HDK (4)

JDS ರಾಮನಗರದಿಂದಲೂ ಔಟ್‌: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ

12

Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್‌; ತನಿಖೆ ಚುರುಕು

CM DCM

Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Varanasi: ಕುಟುಂಬಿಕರ ಎದುರಿಗೆ ಪೊಲೀಸ್‌ ಅಧಿಕಾರಿಗೆ ಥಳಿಸಿದ ಗುಂಪು

Rishabh Pant gave gifts to those who helped during the accident

Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್‌ ನೀಡಿದ ರಿಷಭ್‌ ಪಂತ್‌

Prabhutva movie review

Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.