ಕೆರೆ ಮಲಿನ ಮಾಡುವ ಕೈಗಾರಿಕೆಗೆ ಪವರ್ ಕಟ್
Team Udayavani, Apr 28, 2017, 11:39 AM IST
ಬೆಂಗಳೂರು: ಕೆರೆ ಹಾಗೂ ಕಾಲುವೆಗೆ ತ್ಯಾಜ್ಯ ನೀರು ಹರಿಸುವ ಕೈಗಾರಿಕೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷಣ್ ಅವರು ಬೆಸ್ಕಾಂಗೆ ಸೂಚಿಸಿದ್ದಾರೆ.
ಕೆರೆ ಹಾಗೂ ಕಾಲುವೆಗಳಿಗೆ ತ್ಯಾಜ್ಯ ನೀರು ಹರಿಸುತ್ತಿರುವ 40 ಕೈಗಾರಿಕೆಗಳನ್ನು ಕೂಡಲೇ ಮುಚ್ಚುವಂತೆ ಮಂಡಳಿಯ ಅಧಿಕಾರಿಗಳು ಬುಧವಾರ ಆದೇಶ ಹೊರಿಡಿದ್ದರು. ಆದರೆ, ಈವರೆಗೆ ಕೈಗಾರಿಕೆಗಳು ಆದೇಶ ಪಾಲನೆಗೆ ಮುಂದಾಗದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಕೋರಿರುವ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಕೆರೆ ತ್ಯಾಜ್ಯ ಹರಿಸುವ ಕೈಗಾರಿಕೆಗಳನ್ನು ಯಾವುದೇ ಮುಲಾಜಿಲ್ಲದೆ ಮುಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಹಲವಾರು ಕೈಗಾರಿಕೆಗಳಿಗೆ ಗುರುವಾರ ಕೈಗಾರಿಕೆ ಮುಚ್ಚುವಂತೆ ನೀಡಲಾಗಿರುವ ನೋಟಿಸ್ ತಲುಪಿಸಲಾಗಿದೆ. ಉಳಿದ ಕೈಗಾರಿಕೆಗಳಿಗೆ ಒಂದೆರಡು ದಿನಗಳಲ್ಲಿ ತಲುಲಿದ್ದು, ಆದೇಶ ಪ್ರತಿ ಸಿಕ್ಕ ಕೂಡಲೇ ಕೈಗಾರಿಕೆಗಳು ಮುಚ್ಚಬೇಕು ಎಂದು ತಿಳಿಸಿದ್ದಾರೆ.
ಮುಂದುವರಿದ ಸ್ವತ್ಛತಾ ಕಾರ್ಯ
ಇನ್ನು, ಬೆಳ್ಳಂದೂರು ಕೆರೆಯಲ್ಲಿ ಗುರುವಾರವೂ ಬಿಡಿಎ ಅಧಿಕಾರಿಗಳು ಹಲ್ಲು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದರು. ಪ್ರಮುಖವಾಗಿ ನಗರಕ್ಕೆ ಚೆನ್ನೈನಿಂದ ಆಗಮಿಸುತ್ತಿರುವ ಜೊಂಡು ತೆರವುಗೊಳಿಸುವ ಬೃಹತ್ ಯಂತ್ರಗಳು ಕೆರೆಯನ್ನು ಪ್ರವೇಶಿಸಲು ಅಗತ್ಯವಾದ ವ್ಯವಸ್ಥೆ ಕೆಲಸ ಮುಂದುವರಿಯಿತು. ಬಿಡಿಎ ಅಧಿಕಾರಿಗಳು ಸದ್ಯ ಎರಡು ಹಿಟಾಚಿಗಳು ಮತ್ತು ಒಂದು ಜೆಸಿಬಿ ತೆರವುಗೊಳಿಸುವ ಹುಲ್ಲನ್ನು ಸಾಗಿಸಲು ದಾರಿ ಮಾಡುತ್ತಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಚೆನ್ನೈನಿಂದ ಎರಡು ಬೃಹದಾಕಾರದ ಯಂತ್ರಗಳು ಬರಲಿದ್ದು, ಸೋಮವಾರದಿಂದ ತೆರವು ಕಾರ್ಯ ಪ್ರಾರಂಭಸಲಿವೆ. ಯಂತ್ರ ಒಮ್ಮೆಗೆ ಕೆರೆಯನ್ನು ಪ್ರವೇಶಿಸಿದರೆ 10-12 ಟನ್ನಷ್ಟು ಜೊಂಡನ್ನು ತೆರವುಗೊಳಿಸಿ ಕೆರಯಿಂದ ಹೊರಕ್ಕೆ ತೆಗೆದುಕೊಂಡು ಬರಲಿದೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.