ನಗರಕ್ಕೆ 4 ಸುರಂಗ ಮಾರ್ಗ
Team Udayavani, Apr 28, 2017, 11:43 AM IST
ಬೆಂಗಳೂರು: ಬಸವೇಶ್ವರ ವೃತ್ತ-ಹೆಬ್ಟಾಳ ನಡುವೆ ನಿರ್ಮಿಸಲು ಉದ್ದೇಶಿಸಿದ್ದ ವಿವಾದಿತ ಉಕ್ಕಿನ ಸೇತುವೆ ಕೈಬಿಟ್ಟ ಬೆನ್ನಲ್ಲೇ ಪರ್ಯಾಯ ಮಾರ್ಗಗಳತ್ತ ಚಿತ್ತ ಹರಿಸಿರುವ ಸರ್ಕಾರ, ಸುರಂಗ ಮಾರ್ಗಗಳ ನಿರ್ಮಾಣಕ್ಕೆ ಮುಂದಾಗಿದೆ.
ಟಿ. ಚೌಡಯ್ಯ ರಸ್ತೆಯಿಂದ ಎಸ್ಟೀಮ್ ಮಾಲ್, ನಾಯಂಡಹಳ್ಳಿ ಜಂಕ್ಷನ್‌ನಿಂದ ಮೆಜೆಸ್ಟಿಕ್‌ನ ಶಾಂತಲಾ ಸಿಲ್ಕ್ಹೌಸ್, ಗೊರ ಗುಂಟೆಪಾಳ್ಯದಿಂದ ಡಾ.ರಾಜ್‌ಕುಮಾರ್ ಸಮಾ ಹೊರವರ್ತುಲ ರಸ್ತೆ ಹಾಗೂ ಜಾಲಹಳ್ಳಿ ಅಯ್ಯಪ್ಪ ದೇವಸ್ಥಾನದಿಂದ ವಾಯುಸೇನೆಯ ನಿಲ್ದಾಣದವರೆಗೆ ಒಟ್ಟಾರೆ ಅಂದಾಜು 12.5 ಕಿ.ಮೀ. ಉದ್ದದ ಸುರಂಗ ಮಾರ್ಗಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಯೋಜನೆಯ ಸಾಧಕ-ಬಾಧಕಗಳ ಅಧ್ಯಯನ ನಡೆಸಲಿದೆ.
ಈ ಸಂಬಂಧ ಈಗಾಗಲೇ ಬೆಂಗಳೂರು ಅಭಿವೃದ್ ಸಚಿವ ಕೆ.ಜೆ. ಜಾರ್ಜ್, ಬಲ್ಗೇ ರಿಯಾ ತಜ್ಞರೊಂದಿಗೆ ಮಾತುಕತೆ ನಡೆಸಿದ್ದು, ಬಹುತೇಕ ನಿಯೋಗದಲ್ಲಿದ್ದ ತಜ್ಞರ ತಂಡವೇ ಈ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧಪಡಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಹಿಂದೆಯೂ ಇದೇ ಚಿಂತನೆ ಬಂದಿತ್ತು: ಅಷ್ಟಕ್ಕೂ ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣ ಯೋಜನೆ ಹೊಸದಲ್ಲ. 2010-11ರಲ್ಲೇ ಅವೆನ್ಯುರಸ್ತೆಯ ಸಿಟಿ ಮಾರುಕಟ್ಟೆ- ಮೈಸೂರು ಬ್ಯಾಂಕ್ ವೃತ್ತ, ವಿಕ್ಟೋರಿಯ ಆಸ್ಪತ್ರೆಯಿಂದ ಪ್ಯಾಲೇಸ್ ಗುಟ್ಟಹಳ್ಳಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಮೈಸೂರು ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣದಿಂದ ಮಿನರ್ವ ವೃತ್ತ, ವೆಲ್ಲಾರ್ ಜಂಕ್ಷನ್‌ನಿಂದ ಕೋಲ್ಸ್‌ಪಾರ್ಕ್ ಮಧ್ಯೆ ಸುರಂಗ ರಸ್ತೆಗಳ ನಿರ್ಮಾಣಕ್ಕೆ ಚಿಂತನೆ ನಡೆದಿತ್ತು. ಆದರೆ, ಯಾವುದೇ ಪ್ರಗತಿ ಕಾಣಲಿಲ್ಲ.
ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಮಾದರಿ?
ಉದ್ದೇಶಿತ ಈ ಮಾರ್ಗಗಳಲ್ಲಿ ಸಂಚಾರದಟ್ಟಣೆಗೆ ಅನುಗುಣವಾಗಿ ದ್ವಿಪಥದ ಸುರಂಗ ರಸ್ತೆ ನಿರ್ಮಿಸಬೇಕಿದೆ. ಒಂದು ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ 500 ಕೋಟಿ ರೂ. ವೆಚ್ಚ ಆಗಲಿದೆ. ಇದು ದುಬಾರಿ ಅಗಲಿರುವ ಹಿನ್ನೆಲೆಯಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆಗೆ ಕೈಹಾಕಲು ಸರ್ಕಾರ ಚಿಂತನೆ ನಡೆಸಿದೆ. ಹಾಗೊಂದು ವೇಳೆ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೆತ್ತಿಕೊಂಡರೆ, ಟೋಲ್ ಶುಲ್ಕ ವಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇನ್ನು ಸುರಂಗ ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನದ ಸಮಸ್ಯೆ ಉದ್ಭವಿಸುವುದಿಲ್ಲ. ಮರಗಳ ಬಲಿಯೂ ಆಗುವುದಿಲ್ಲ ಎಂಬ ಲೆಕ್ಕಾಚಾರವೂ ಇದೆ. ನಾಯಂಡಹಳ್ಳಿಯಿಂದ ಮೆಜೆಸ್ಟಿಕ್‌ವರೆಗಿನ ಸುರಂಗ ಮಾರ್ಗ (7 ಕಿ.ಮೀ.) ನಾಲ್ಕನೇ ಅತಿದೊಡ್ಡ ಮಾರ್ಗ ಆಗಲಿದೆ. ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.