ಕಾನೂನು ವಿವಿ 5ನೇ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ
Team Udayavani, Apr 28, 2017, 1:15 PM IST
ಧಾರವಾಡ: ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ ಎರಡು ದಿನಗಳ ಕಾಲ ಆಯೋಜಿಸಿರುವ 5ನೇ ಅಥ್ಲೆಟಿಕ್ ಕ್ರೀಡಾಕೂಟ-2017ಕ್ಕೆ ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಗುರುವಾರ ಚಾಲನೆ ದೊರೆಯಿತು. ಅತಿಥಿ, ಅಂತಾರಾಷ್ಟ್ರೀಯ ಕ್ರೀಡಾಪಟು ಜೆ.ಜೆ.ಶೋಭಾ ಮಾತನಾಡಿ, ವಿದ್ಯಾರ್ಥಿಗಳ ಸದೃಢ ಆರೋಗ್ಯಕ್ಕೆ ಕ್ರೀಡೆಗಳು ಪೂರಕವಾಗಿವೆ.
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶ ಸದುಪಯೋಗ ಪಡಿಸಿಕೊಂಡು ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ| ಸಿ.ಎಸ್.ಪಾಟೀಲ ಮಾತನಾಡಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದರು.
ಯಾವುದೇ ಕ್ಷೇತ್ರವಿರಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ವಿದ್ಯಾರ್ಥಿಗಳು ಇದನ್ನು ಮುಕ್ತವಾಗಿ ಸ್ವಾಗತಿಸಬೇಕು ಎಂದರು. ಮೌಲ್ಯಮಾಪನ ಕುಲಸಚಿವ ಡಾ| ಜಿ.ಬಿ.ಪಾಟೀಲ, ಹಣಕಾಸು ಅಧಿಕಾರಿ ಲಲಿತಾ ಲಮಾಣಿ ಇದ್ದರು. ಕುಲಸಚಿವರಾದ ಡಾ| ರತ್ನಾ ಆರ್. ಭರಮಗೌಡರ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಖಾಲಿದ ಖಾನ್ ವಂದಿಸಿದರು.
500 ಕ್ರೀಡಾಪಟುಗಳು ಭಾಗಿ: ಬೆಂಗಳೂರು, ಹುಬ್ಬಳ್ಳಿ, ಮಂಗಳೂರು ಹಾಗೂ ಕಲಬುರ್ಗಿ ವಲಯಗಳಿಂದ 58 ಕಾನೂನು ಮಹಾವಿದ್ಯಾಲಯಗಳಿಂದ 500 ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ವಿಶ್ವವಿದ್ಯಾಲಯವು ವಿವಿಧ ಕಾನೂನು ಮಹಾವಿದ್ಯಾಲಯಗಳಿಂದ ಆಗಮಿಸಿರುವ ಕ್ರೀಡಾಪಟುಗಳಿಗೆ ವಿವಿಧ ನಾಲ್ಕು ಬಣ್ಣಗಳ ಒಂದು ಜೊತೆ ಕ್ರೀಡಾ ಸಮವಸ್ತ್ರ ಹಾಗೂ ಉತ್ತಮ ಉಟೋಪಚಾರ ಮತ್ತು ಪ್ರಯಾಣ ಭತ್ಯೆಯ ಜೊತೆ ಸುಸಜ್ಜಿತ ವಸತಿ ವ್ಯವಸ್ಥೆಯನ್ನೂ ಪೂರೈಸಿದೆ.
ಮೊದಲ ದಿನದ ಫಲಿತಾಂಶ
ಪುರುಷರ ವಿಭಾಗ
1500 ಮೀಟರ್ ಓಟ: ಬಸವರಾಜ ನಾಗೋಡ, ಹುಬ್ಬಳ್ಳಿ (ಪ್ರಥಮ-4:46.67 ಸೆ), ಲಕೀತ್ ಟಿ.ಎಚ್, ಮೈಸೂರು (ದ್ವಿತೀಯ-4:45.51), ಪ್ರತಾಪ್ ನಾಯ್ಕ, ಹಾಸನ (ತೃತೀಯ-4:54.71 ಸೆ).
ಎತ್ತರ ಜಿಗಿತ: ರಾಘವ್ ಬಿ., ಬೆಂಗಳೂರು (ಪ್ರ-1.69 ಮೀ), ಸಂಪತ್‌ಕುಮಾರ ಮೇಟಿ, ನವನಗರ (ದ್ವಿ-1.60 ಮೀ), ಮಲ್ಲಿಕಾರ್ಜುನ ಎನ್.ಕೆ. (ತೃ-1.59 ಮೀ.).
ಶಾಟ್‌ಪುಟ್: ಪ್ರಜ್ವಲ್ ಶೆಟ್ಟಿ, ಉಡುಪಿ (ಪ್ರ-10.80 ಮೀ), ಜೋಬೈ ಜೋಯ, ಪುತ್ತೂರ (ದ್ವಿ-10.49 ಮೀ), ಗುರುರಾಜ ಭಂಡಾರಿ, ಕಲಬುರ್ಗಿ (ತೃ-9.99 ಮೀ).
ಮಹಿಳೆಯರ ವಿಭಾಗ
1500 ಮೀಟರ್ ಓಟ: ರಕ್ಷತಾ ಪಿ., ಮಂಗಳೂರು (ಪ್ರ-9:04.93 ಸೆ), ಶೃತಿ ಎ.ಕೆ., ಚಿಕ್ಕಮಗಳೂರು (ದ್ವಿ-7:07.23 ಸೆ), ಸುಧಾ ಎಚ್, ದಾವಣಗೆರೆ (ತೃ-7:32.96).
ಚಕ್ರ ಎಸೆತ: ಅನುಕ್ತಿ ಶೆಟ್ಟಿ, ಮಂಗಳೂರು, (ಪ್ರ-31.47 ಮೀ), ನಯನಾಶ್ರೀ, (ದ್ವಿ-24.25 ಮೀ), ನಿಷ್ಮಿತಾ, ಉಡುಪಿ, (ತೃ-23.50 ಮೀ).
ಉದ್ದ ಜಿಗಿತ: ರಶ್ಮಿತಾ ಕಲ್ಮಡಿ, ಉಡುಪಿ(ಪ್ರ-4.01 ಮೀ), ರವೀನಾ ವಿ.ವಿ. ಮಂಗಳೂರ (ದ್ವಿ-3.94 ಮೀ), ದೀಪಾ ಹಂಡಿ, ಬೆಳಗಾವಿ (ತೃ-3.89 ಮೀ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.