ಬಂಟ್ವಾಳ ಪುರಸಭೆ: ಧರಣಿ ಹಿಂಪಡೆದ ಬಿಜೆಪಿ ಸದಸ್ಯರು
Team Udayavani, Apr 28, 2017, 2:16 PM IST
ಬಂಟ್ವಾಳ: ಪುರಸಭೆಯ ಸಾಮಾನ್ಯ ಸಭೆಯಲ್ಲಿ ಎ.27ರಂದು ಬೆಳಗ್ಗಿನಿಂದ ಧರಣಿ ಕುಳಿತಿದ್ದ ಸದಸ್ಯರಿಗೆ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಸನ್ನ ಅವರು ಸಮಸ್ಯೆ ಬಗೆಹರಿಸುವ ಬಗ್ಗೆ ಲಿಖೀತ ಭರವಸೆ ನೀಡಿದ್ದರಿಂದ ಧರಣಿ ನಿರತ ಬಿಜೆಪಿ ಸದಸ್ಯರು ಸಂಜೆ 7 ಗಂಟೆ ಸುಮಾರಿಗೆ ಸದನ ಬಾವಿಯಿಂದ ಹೊರ ನಡೆದರು.
ಮಫತ್‌ಲಾಲ್ ಉದ್ಯಾನವನ ನಿರ್ಮಾಣ ಬಾಕಿ ಹಣ ಪಾವತಿಗೆ ತಡೆ, ಟೆಂಡರ್ ಕರೆಯದೆ ನಿರ್ಮಿಸಿರುವ ರಸ್ತೆ ಉಳಿಕೆ ಬಿಲ್ ಪಾವತಿ ನೀಡುವುದಿಲ್ಲ ಎಂದು ಭರವಸೆ ನೀಡಿದರು. ಅಲ್ಲದೆ ಇತರ ಕೆಲವು ವಿಷಯಗಳು ಲೋಕಾಯುಕ್ತ ತನಿಖೆಯಲ್ಲಿ ಇರುವುದರಿಂದ ಅದರ ಬಗ್ಗೆ ಏನನ್ನೂ ಹೇಳಲಾಗದು ಎಂದರು.
ಸಭೆಯಲ್ಲಿ ವಿಪಕ್ಷ ಸದಸ್ಯರಿಗೆ ಆಗುತ್ತಿರುವ ಅವಮಾನ ಸಹಿಸಲು ಸಾಧ್ಯವಾಗುವುದಿಲ್ಲ. ತೀರಾ ಬೇಸತ್ತು ಧರಣಿ ನಡೆ
ಸಿದ್ದೇವೆ. ವಿಪಕ್ಷ ಸದಸ್ಯರು ಧರಣಿ ನಡೆಸುವಾಗ ಸದನದಲ್ಲಿ ಸಭೆ ಮುಂದುವರಿಯುವಂತಿಲ್ಲ ಎಂದು ತಿಳಿದೂ ಮತ್ತೆ ಸಭೆ ನಡೆಸಿ ನಿರ್ಣಯ ಮಾಡಿದ್ದಾರೆ. ಅಂತಹ ನಿರ್ಣಯ ಸಿಂಧುವೇ ಎಂದು ಗೋವಿಂದ ಪ್ರಭು ಪ್ರಶ್ನಿಸಿದರು.
ಅಧ್ಯಕ್ಷರಿಗೆ ನಿರ್ಣಯವನ್ನು ಮಾಡುವುದಕ್ಕೆ ಪರಮಾಧಿಕಾರ ಇದೆ. ಆದರೆ ನಿಯಮಾನುಸಾರ ಮಾಡಬೇಕು. ಅದರ ಹೊರತುಪಡಿಸಿದ ನಿರ್ಣಯಗಳಿಗೆ ಅಂಗೀಕಾರ ಇಲ್ಲ ಎನ್ನುವ ಅಭಿಪ್ರಾಯವನ್ನು ನಿರ್ದೇಶಕರು ನೀಡಿದರು. ನಿರ್ದೇಶಕರು ನೀಡಿದ ಪ್ರತಿ ಅಸ್ಪಷ್ಟವಾಗಿದ್ದರಿಂದ ಅಲ್ಲಿದ್ದವರಿಗೆ ಅರ್ಥವಾಗದೆ ಕೊನೆಗೆ ಮುಖ್ಯಾಧಿಕಾರಿ ಆ ಬಗ್ಗೆ ವಿವರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆ ಬಳಿಕ ಧರಣಿ ನಿರತರು ಅಲ್ಲಿಂದ ತೆರಳಿದರು.
ಮುಖ್ಯಮಂತ್ರಿಗಳು ಬಂದಾಗ ಪ್ರತಿಭಟನೆ
ಪುರಸಭೆಯಲ್ಲಿ ನಡೆಯುವ ಅವ್ಯವಹಾರಗಳ ಬಗ್ಗೆ ಪಟ್ಟಿ ಮಾಡಿ ಅದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುವುದು. ಅವರು ಬಂಟ್ವಾಳಕ್ಕೆ ಬರುವ ಸಂದರ್ಭ ಧರಣಿ ಪ್ರತಿಭಟನೆ ನಡೆಸುವುದಾಗಿ ಗೋವಿಂದ ಪ್ರಭು ಧರಣಿ ಸ್ಥಳದಿಂದ ಹೊರ ನಡೆಯುವ ಸಂದರ್ಭ ಘೋಷಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.