ಬೆಳ್ತಂಗಡಿ, ಬಂಟ್ವಾಳ: ಉದಯವಾಣಿ ಏಜೆಂಟರು, ವಿತರಕರ ಸೌಹಾರ್ದ ಕೂಟ
Team Udayavani, Apr 28, 2017, 2:21 PM IST
ಮಂಗಳೂರು: “ಉದಯವಾಣಿ’ ಪತ್ರಿಕೆಯ ಬೆಳ್ತಂಗಡಿ – ಬಂಟ್ವಾಳ ತಾಲೂಕು ವ್ಯಾಪ್ತಿಯ ಎಲ್ಲ ಏಜೆಂಟರು ಹಾಗೂ ವಿತರಕರ ಸೌಹಾರ್ದ ಕೂಟವು ಗುರುವಾರ ಬಿ.ಸಿ.ರೋಡ್‌ನ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.
ಮಣಿಪಾಲ ಮೀಡಿಯ ನೆಟ್‌ವರ್ಕ್ ಲಿಮಿಟೆಡ್ ವತಿಯಿಂದ ಆಯೋಜಿಸಲಾದ ಈ ಸೌಹಾರ್ದ ಕೂಟದಲ್ಲಿ ಬೆಳ್ತಂಗಡಿ – ಬಂಟ್ವಾಳ ವ್ಯಾಪ್ತಿಯ ಸುಮಾರು 300ಕ್ಕೂ ಹೆಚ್ಚು ಸಂಖ್ಯೆಯ ಏಜೆಂಟರು ಹಾಗೂ ವಿತರಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಶನಲ್ ಹೆಡ್ (ಮ್ಯಾಗಜಿನ್ಸ್ ಆ್ಯಂಡ್ ಸ್ಪೆಶಲ್ ಇನಿಶಿಯೇಟಿವ್ಸ್) ರಾಮಚಂದ್ರ ಮಿಜಾರು ಮಾತನಾಡಿ, ಹಲವು ಕಷ್ಟಗಳ ನಡುವೆಯೂ ಉದಯವಾಣಿಯ ಮೇಲಿನ ಪ್ರೀತಿ ಹಾಗೂ ನಂಬಿಕೆಯ ಕಾರಣದಿಂದ ಸತತ 48 ವರ್ಷಗಳಿಂದ ಸ್ವಾರ್ಥ ರಹಿತವಾಗಿ ಸುಮಾರು 10,000 ಏಜೆಂಟರು ಹಾಗೂ ವಿತರಕರು ಅತ್ಯುತ್ತಮ ಸೇವೆ ನೀಡುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಇಂದು ರಾಜ್ಯದ ಶ್ರೇಷ್ಠ ಪತ್ರಿಕೆಗಳ ಸಾಲಿನಲ್ಲಿ ಉದಯವಾಣಿ ವಿರಾಜಮಾನವಾಗಿದೆ. ಕರಾವಳಿಯ ಜನಮನದಲ್ಲಿ ಪತ್ರಿಕೆಯು ಶ್ರೇಷ್ಠ ಸ್ಥಾನಮಾನವನ್ನು ಪಡೆಯುವಂತಾಗಿದೆ. ಇದಕ್ಕೆ ಕಾರಣಕರ್ತರಾದ ಏಜೆಂಟರು ಹಾಗೂ ವಿತರಕರ ಶ್ರಮ ಶ್ಲಾಘನೀಯ ಎಂದರು.
ಎಜಿಎಂ (ವ್ಯಾಪಾರ ಅಭಿವೃದ್ಧಿ) ಸತೀಶ್ ಶೆಣೈಮಾತನಾಡಿ, ನಮ್ಮೆಲ್ಲ ಏಜೆಂಟರು ಹಾಗೂ ವಿತರಕರು ಮುಖ್ಯ ಭೂಮಿಕೆಯಲ್ಲಿ ಕೆಲಸ ನಿರ್ವಹಿಸಿದ ಕಾರಣದಿಂದ ಕಳೆದ 48 ವರ್ಷಗಳಿಂದ ಉದಯವಾಣಿ ತನ್ನ ಸಾರ್ಥಕ ಸೇವೆ ನೀಡುತ್ತಿದೆ. ಎಲ್ಲ ಸುದ್ದಿಗಳನ್ನು ಒಳಗೊಂಡ ಹಾಗೂ ಇನ್ನಷ್ಟು ವೇಗವಾಗಿ ಓದುಗರ ಮನೆಬಾಗಿಲಿಗೆ ಉದಯವಾಣಿ ತಲುಪಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಶೀಘ್ರದಲ್ಲಿ ಹೊಸ ಪ್ರಿಂಟಿಂಗ್ ಪ್ರಸ್ ಪ್ರಾರಂಭಿಸಲಾಗುವುದು. ಜತೆಗೆ ಏಜೆಂಟರ ಹಲವು ಸಮಸ್ಯೆ, ಪರಿಹಾರ ಹಾಗೂ ಬೇಡಿಕೆಗಳ ಪೂರೈಕೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಮಾರುಕಟ್ಟೆ ವಿಭಾಗದ ಸಹ ಉಪಾಧ್ಯಕ್ಷ ಆನಂದ್ ಕೆ. ಸ್ವಾಗತಿಸಿದರು. ಸಂಪಾದಕ ಬಾಲಕೃಷ್ಣ ಹೊಳ್ಳ ವೇದಿಕೆಯಲ್ಲಿದ್ದರು. ಮಂಗಳೂರು ಪ್ರಸರಣ ವಿಭಾಗದ ಡೆಪ್ಯುಟಿ ಮ್ಯಾನೇಜರ್ ಯೋಗೀಶ್ ವಂದಿಸಿದರು. ಮಣಿಪಾಲ ಪ್ರಸರಣ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.