ಪಡುತೋನ್ಸೆ: ಗರಿಷ್ಠ ಅನುದಾನದಲ್ಲಿ ಅಭಿವೃದ್ಧಿ: ಸಚಿವ ಪ್ರಮೋದ್
Team Udayavani, Apr 29, 2017, 2:29 PM IST
ಮಲ್ಪೆ: ಪಡುತೋನ್ಸೆ ಗ್ರಾಮ ಹಿಂದೆ ರಾಜಕೀಯ ಕಾರಣಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿತ್ತು. ಇದೀಗ ಈ ಗ್ರಾಮದ ಇತಿಹಾಸದಲ್ಲಿಯೇ ಪ್ರಥಮ ಎಂಬಂತೆ ಸುಮಾರು 23 ಕೋಟಿ ರೂಪಾಯಿ ವಿನಿಯೋಗಿಸಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದ್ದು, ಮುಂದೆ ಹಂತ ಹಂತವಾಗಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಶುಕ್ರವಾರ ಅವರು 31ನೇ ಕೆಮ್ಮಣ್ಣು ಗ್ರಾಮ ಪಂಚಾಯತ್‌ನ ಪಡುತೋನ್ಸೆ ಗ್ರಾಮ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಹೊಸಮನೆ ನಿರ್ಮಾಣಕ್ಕೆ ಹಿಂದುಳಿದ ವರ್ಗಗಳಿಗೆ 1.50 ಲಕ್ಷ ಮತ್ತು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ವರ್ಗದವರಿಗೆ 1.75 ಲಕ್ಷ ರೂ. ನೀಡಲಾಗುತ್ತಿದೆ. ಖಾಸಗಿ ಬಸ್ ಮಾಲಕರ ವಿರೋಧದ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ನರ್ಮ್ ಬಸ್‌ಗಳನ್ನು ಓಡಿಸಲಾಗುತ್ತಿದೆ. ಜನರಿಗೆ ಅಗತ್ಯವಿದ್ದಲ್ಲಿ ಮುಂದೆ ಎಷ್ಟು ಬೇಕೋ ಅಷ್ಟು ಸರಕಾರಿ ಬಸ್
ಗಳನ್ನು ಒದಗಿಸಲಾಗುವುದು ಎಂದರು.
ಉಚಿತ ಕರೆಂಟ್ ವ್ಯವಸ್ಥೆ
ಸಿದ್ದರಾಮಯ್ಯ ಸರಕಾರ ನೂರಕ್ಕೆ ನೂರು ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಉಡುಪಿ ವಿಧಾನಸಭಾ ಕ್ಷೇತ್ರ ಒಂದರಲ್ಲೇ ಇದುವರೆಗೆ ಸುಮಾರು 16,000 ಬಿಪಿಎಲ್ ಕಾರ್ಡ್ ವಿತರಣೆಯಾಗಿದೆ. ಬಿಪಿಎಲ್ ಕಾರ್ಡಿನಲ್ಲಿ ಕೇವಲ ಅಕ್ಕಿ ಮಾತ್ರವಲ್ಲ. ನೂರಾರು ಸೌಲಭ್ಯಗಳನ್ನು ಪಡಕೊಳ್ಳುವ ಅವಕಾಶಗಳಿವೆ. ಈ ಹಿಂದೆ ಕೇಂದ್ರದಲ್ಲಿ ಯುಪಿಎ ಸರಕಾರ ಇರುವಾಗ ಬಿಪಿಎಲ್ ಕಾರ್ಡ್‌ದಾರರಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ವ್ಯವಸ್ಥೆಯನ್ನು ರಾಜ್ಯ ಸರಕಾರ ಇದೀಗ ರಾಜ್ಯದ ಜನರಿಗೆ ನೀಡುತ್ತಿದೆ. ಡೋರ್‌ನಂಬರ್, ಆರ್‌ಟಿಸಿ ಇಲ್ಲದರಿಗೂ ಇದು ಅನ್ವಯವಾಗುತ್ತದೆ ಎಂದು ಸಚಿವರು ತಿಳಿಸಿದರು.
ಕೆಮ್ಮಣ್ಣು ಚರ್ಚ್‌ನ ಧರ್ಮಗುರು ವಂ| ಕಾರ್ಡಿಯ ಗೋನ್ಸಲ್ವಿಸ್, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ತಾ.ಪಂ. ಸದಸ್ಯೆ ಸುಲೋಚನಾ, ತಹಶೀಲ್ದಾರ ಪ್ರದೀಪ್ ಕರೋಡ್ಕರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಡಾ| ಸರ್ವೋತ್ತಮ, ತಾ.ಪಂ. ಮಾಜಿ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಹಾರಾಡಿ, ಮಾಜಿ ಸದಸ್ಯ ರಹಮತುಲ್ಲಾ ತೋನ್ಸೆ, ಪಂಚಾಯತ್‌ನ ಮಾಜಿ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ವೆಂಕಟೇಶ್ ಕುಂದರ್, ಉಪಾಧ್ಯಕ್ಷೆ ಲತಾ, ಸದಸ್ಯರಾದ ಗುರುರಾಜ್ ಭಟ್, ಜೆನಿವಿ ಪಿಂಟೋ, ಪುರಂದರ ಕುಂದರ್, ಮಹಮ್ಮದ್ ಇದ್ರಿಸ್, ಶ್ರೀಧರ್, ದಮಯಂತಿ, ಮಾಲತಿ, ದಿನೇಶ್, ಅಶ³ಕ್, ತಾಹೀರಾ ಬಾನು, ಹಮೀದಬಾನು, ಮುಬಿನಾ, ಜಮೀಲಾ, ನಗರಾಭಿವೃದ್ಧಿ ಸದಸ್ಯ ಸಂಪತ್ ಕುಮಾರ್, ರಘುರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ವಿವಿಧ ಸವಲತ್ತು ವಿತರಣೆ
ಸಚಿವ ಪ್ರಮೋದ್ ಮಧ್ವರಾಜ್ ಅವರ ಶಿಫಾರಸಿನ ಮೇರೆಗೆ ಅನುಷ್ಠಾನ ಗೊಂಡ ಮುಖ್ಯಮಂತ್ರಿ ಪರಿಹಾರ ನಿಧಿ, ರಾಷ್ಟ್ರೀಯ ಕುಟುಂಬ ಸಹಾಯ ಧನ ಅಂತ್ಯಸಂಸ್ಕಾರ ನಿಧಿ, ಸಂಧ್ಯಾ ಸುರಕ್ಷಾ ಯೋಜನೆ, ವಿಕಲಚೇತನ ವೇತನ, ಶಿಶು ಅಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು 36 ಫಲಾನುಭವಿಗಳಿಗೆ ವಿತರಿಸಲಾಯಿತು. ಕೆಮ್ಮಣ್ಣು ಗ್ರಾ.ಪಂ. ಅಧ್ಯಕ್ಷೆ ಫೌಜಿಯಾ ಸಾಧಿಕ್ ಸ್ವಾಗತಿಸಿದರು. ಜಿ.ಪಂ. ಮಾಜಿ ಸದಸ್ಯೆ ವರೋನಿಕಾ ಕೆರ್ನೆಲಿಯೋ ಪ್ರಸ್ತಾವನೆಗೈದರು. ಸತೀಶ್‌ಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಿಡಿಒ ಕಮಲಾ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.