“ಸಬ್ಕಾ ಸಾತ್‌ ಸಬ್ಕಾ ವಿಕಾಸ್‌’ ಯೋಜನೆಯ ಹರಿಕಾರ ಬಸವಣ್ಣ 


Team Udayavani, Apr 30, 2017, 3:45 AM IST

PTI4_29_2017_000056b.jpg

ನವದೆಹಲಿ: ಅಕ್ಷರಶಃ ಕನ್ನಡಿಗರ ಪಾಲಿಗೆ ಶನಿವಾರ ಶುಭದಿನ. 12ನೇ ಶತಮಾನದ ದಾರ್ಶನಿಕ, ಸುಧಾರಣಾವಾದಿ ಬಸವಣ್ಣ ಅವರ ಸಾಧನೆಗಳು ಇಡೀ ಜಗತ್ತಿಗೆ ತಲುಪುವ ಕೆಲಸ ಮಾಡಿದ ವಿಶೇಷ ದಿನ. ಶಿವಶರಣ ಬಸವಣ್ಣ ಅವರ 2,500 ವಚನಗಳನ್ನು 23 ಭಾಷೆಗೆ ತರ್ಜುಮೆ ಮಾಡಲಾಗಿದ್ದು, ಇದರ ಡಿಜಿಟಲ್‌ ಸಂಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದರು. ದೆಹಲಿಯ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಯಿತು.

ಈ ವೇಳೆ ಮಾತನಾಡಿದ ಮೋದಿ, ಬಸವಣ್ಣನವರು 12ನೇ ಶತಮಾನದಲ್ಲಿ ಮಾಡಿದ ಕ್ರಾಂತಿಯ ನೆನಪುಗಳನ್ನು ಮೆಲುಕು ಹಾಕಿದರು. ಇಸ್ಲಾಂ ಧರ್ಮದಲ್ಲಿರುವ ತ್ರಿವಳಿ ತಲಾಖ್‌ನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಈ ಮಹಾನ್‌ ದಾರ್ಶನಿಕನ ಹೋರಾಟದ ಹಾದಿಯನ್ನು ಅನುಸರಿಸುವಂತೆಯೂ ಕರೆ ನೀಡಿದರು. ಮಹಿಳಾ ಸಬಲೀಕರಣ ವಿಚಾರದಲ್ಲಿ ಬಸವಣ್ಣ ಅವರು ಮಾಡಿದ ಕ್ರಾಂತಿಯ ಬಗ್ಗೆ ಉಲ್ಲೇಖೀಸಿದ ಅವರು, ಬಸವಣ್ಣ ಇಡೀ ಜಗತ್ತಿಗೆ ಸುಧಾರಣೆಯ ದಾರಿ ತೋರಿದ್ದರು ಎಂದು ಹೇಳಿದರು.

ನಾವು ಈಗ ಪಾಲಿಸುವ ಸಂಸದೀಯ ವ್ಯವಸ್ಥೆಯನ್ನು 12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪದ ಮೂಲಕ ಸ್ಥಾಪನೆ ಮಾಡಿದ್ದರು. 18ನೇ ಶತಮಾನದ ಬ್ರಿಟಿಷರ ಮಾಗ್ನಾ ಕಾರ್ಟ್‌ ಭಾರತೀಯ ಸಂಸದೀಯ ವ್ಯವಸ್ಥೆಯ ಸ್ಥಾಪಕ ಎಂದು ನಾವು ಹೇಳುತ್ತೇವೆ. ಆದರೆ, 6 ಶತಮಾನಗಳ ಮುಂಚೆಯೇ ಈ ವ್ಯವಸ್ಥೆಯನ್ನು ಬಸವಣ್ಣ ಲೋಕಕ್ಕೆ ಸಾರಿದ್ದರು. ಮಹಿಳೆಯರ ಸಬಲೀಕರಣಕ್ಕೆ ಅನುಭವ ಮಂಟಪದಿಂದಲೇ ನಾಂದಿ ಹಾಡಿದ್ದರು ಎಂದರು.

ಇಂದಿನ ಶಿಕ್ಷಣ ಪದ್ಧತಿಯಲ್ಲಿ ಹಲವಾರು ಲೋಪದೋಷಗಳಿವೆ. ದೇಶದ ಮಹಾನ್‌ ದಾರ್ಶನಿಕರ ಜೀವನ ಚರಿತ್ರೆಯೇ ಮಕ್ಕಳಿಗೆ ಗೊತ್ತಾಗದಂತಹ ಪರಿಸ್ಥಿತಿ ಉದ್ಭವವಾಗಿದೆ. ಹೀಗಾಗಿಯೇ ಇಂದು ನಮ್ಮ ಯುವಕರು ಇಂತಹ ಸುಧಾರಣಾವಾದಿಗಳ ಬಗ್ಗೆ ಅರಿವು ಹೊಂದಲು ಸಾಧ್ಯವಾಗಿಲ್ಲ. 700 ವರ್ಷಗಳ ಹಿಂದೆ ಬಸವಣ್ಣ ಅವರು ಮಹಿಳಾ ಸಬಲೀಕರಣ ಮತ್ತು ಸಾಮಾಜಿದ ಅನಿಷ್ಠಗಳನ್ನು ಹೋಗಲಾಡಿಸಲು ಮಾಡಿದ ಹೋರಾಟವನ್ನು ಇಂದಿನ ಮಕ್ಕಳು ಪಠ್ಯದಲ್ಲಿ ಓದಬೇಕು. ಭಾರತ ಸಂತರು ಮತ್ತು ಸುಧಾರಣಾವಾದಿಗಳಿಂದ ಆಶೀರ್ವಾದ ಪಡೆದು ಸುಧಾರಣಾ ಸಮಾಜವನ್ನು ನಿರ್ಮಿಸಿಕೊಂಡಿದೆ. ದೇಶದ ಇತಿಹಾಸದಲ್ಲಿ ನಮ್ಮ ಹಿರಿಯರು ಕೇವಲ ಬಡತನ ಮತ್ತು ವಸಾಹತುಶಾಹಿಯನ್ನಷ್ಟೇ ಹೊಡೆದೋಡಿಸಲಿಲ್ಲ. ಉತ್ತಮ ಆಡಳಿತ, ಅಹಿಂಸೆ ಮತ್ತು ಸತ್ಯಾಗ್ರಹದ ದಾರಿಯನ್ನು ತೋರಿಸಿಕೊಟ್ಟರು ಎಂದು ಮೋದಿ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ಮಾಜಿ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ಅವರು 1964ರಲ್ಲಿ ಸ್ಥಾಪಿಸಿದ್ದ ಬಸವ ಸೊಸೈಟಿಗೆ ಸ್ವರ್ಣ ಮಹೋತ್ಸವದ ಸಂಭ್ರಮ. ಜತ್ತಿ ಅವರಿಗೂ ಮೋದಿ ಗೌರವ ಸಲ್ಲಿಸಿದರು.

ಕಲಬುರ್ಗಿ ಸಂಪಾದಿಸಿದ ಕೃತಿ:
ಬಸವಣ್ಣ ಅವರ ಈ ಬೃಹತ್‌ ವಚನ ಸಂಪುಟವನ್ನು ಕಳೆದ ವರ್ಷ ಧಾರವಾಡದಲ್ಲಿ ಹತ್ಯೆಗೀಡಾದ ಕನ್ನಡದ ವಿದ್ವಾಂಸ ಮತ್ತು ವಿಚಾರವಾದಿ ಎಂ.ಎಂ.ಕಲಬುರ್ಗಿ ಅವರು ಸಂಪಾದಿಸಿದ್ದರು. ಹೀಗಾಗಿ, ಇದರ ಬಿಡುಗಡೆ ವೇಳೆ, ಅವರು ಕುಟುಂಬಸ್ಥರೂ ವಿಜ್ಞಾನ ಭವನದಲ್ಲಿ ಹಾಜರಿದ್ದರು. ಕಾರ್ಯಕ್ರಮದ ವೇಳೆ, ಅವರ ಬಳಿಗೆ ತೆರಳಿದ ಮೋದಿ, ಕೆಲ ಹೊತ್ತು ಮಾತುಕತೆ ನಡೆಸಿದರು.

ಕೇಂದ್ರ ಸಚಿವರಾದ ಅನಂತ ಕುಮಾರ್‌, ಡಿ.ವಿ.ಸದಾನಂದಗೌಡ, ರಮೇಶ್‌ ಜಿಗಜಿಣಗಿ, ರಾಜ್ಯದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತು ಬಸವ ಸಮಿತಿ ಅಧ್ಯಕ್ಷ ಅರವಿಂದ್‌ ಜತ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ:
“ಬಸವಣ್ಣನ ವಚನಗಳ ಬಗ್ಗೆ ಅಂತರ್ಜಾಲದಲ್ಲಿ ಸ್ಪರ್ಧಾ ಕಾರ್ಯಕ್ರಮ ಏರ್ಪಡಿಸಿ. ಎಲ್ಲಾ ಭಾಷೆಗಳಲ್ಲೂ ಇದನ್ನು ಏರ್ಪಡಿಸಿ. ಜಗತ್ತಿನ ಎಲ್ಲ ಆಸಕ್ತ ನಾಗರಿಕರು ಅದರಲ್ಲಿ ಭಾಗವಹಿಸಲಿ. ಇದರಿಂದ ವಚನಗಳ ಬಗ್ಗೆ ಇರುವ ಜ್ಞಾನ ವೃದ್ಧಿ ಆಗುವುದು ಎಂದು ಬಸವ ಸಮಿತಿಗೆ ಪ್ರಧಾನಿ ಸಲಹೆ ನೀಡಿದರು. “ಸಬ್ಕಾ ಸಾತ್‌ ಸಬ್ಕಾ ವಿಕಾಸ್‌’ ಯೋಜನೆಯ ಹರಿಕಾರರು ಬಸವಣ್ಣನವರೇ ಆಗಿದ್ದಾರೆ. ಅವರ ಅನುಭವ ಮಂಟಪ ಇದೆ ಮಾದರಿಯಲ್ಲಿ ಕಾರ್ಯ ನಿರ್ವಹಿಸಿದೆ. ಲಂಡನ್‌ನ ಥೇಮ್ಸ… ನದಿ ತೀರದಲ್ಲಿ ಬಸವೇಶ್ವರರ ಶಿಲ್ಪವನ್ನು ನಾನೇ ಉದ್ಘಾಟನೆ ಮಾಡಿ¨ªೆ. ಈಗ ಈ ವಚನಗಳನ್ನು 23 ಭಾಷೆಗಳಲ್ಲಿ ನಾನೇ ಲೋಕಾರ್ಪಣೆ ಮಾಡಿರುವುದಕ್ಕೆ ಹೆಮ್ಮೆ ಪಡುತ್ತೇನೆ” ಎಂದರು.

ಈ ಕಾರ್ಯಕ್ರಮವನ್ನು ದೆಹಲಿಯ ವಿಜ್ಞಾನ ಭವನದಲ್ಲಿ ಮಾಡಬೇಕು ಎಂದು ಸಲಹೆ ನೀಡಿದ್ದೇ ಮೋದಿ ಜೀ. ಅಸ್ಪ್ರಶ್ಯತೆ ಹೋಗಲಾಡಿಸಿ ಅಂತರ್‌ ಜಾತಿ ವಿವಾಹಗಳನ್ನು ಅಂದೇ ಬಸವಣ್ಣನವರು ಮಾಡಿಸಿದರು. ಸಂವಿಧಾನದಲ್ಲಿ ನೋಡುವ ಮುಖ್ಯ ಅಂಶಗಳನ್ನು ಅವರು ಅಂದೇ ರೂಢಿಸಿಕೊಂಡಿದ್ದರು.
– ಅನಂತ ಕುಮಾರ್‌, ಕೇಂದ್ರ ಸಂಸದೀಯ ಮತ್ತು ರಸಗೊಬ್ಬರ ಸಚಿವ.

ಅಣ್ಣ ಬಸವಣ್ಣ ಅವರು ಜಗತ್‌ ಜ್ಯೋತಿ ಬಸವಣ್ಣರಾಗಿ ಜಗತ್ತಿಗೆ ಬೆಳಕಾದವರು. ಸಂಸದೀಯ ಪಾಠವನ್ನು ಅನುಭವ ಮಂಟಪದಲ್ಲಿ ಸ್ಥಾಪಿಸಿ ರಾಜ್ಯಭಾರ ಮಾಡಿದರು. ರಾಜ್ಯದ ಚಕ್ರವರ್ತಿಗಳಾಗಿ ಕೂಡ ಉತ್ತಮ ಆಡಳಿತವನ್ನು ನೀಡಿದರು. ಅವರ ವಚನಗಳನ್ನು ದೇಶದ ರಾಜಧಾನಿ ದೆಹಲಿಯಲ್ಲಿ ಬಿಡುಗಡೆಗೊಳಿಸಿರುವುದು ಶ್ಲಾಘನೀಯ ಸಂಗತಿ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ.

ಟಾಪ್ ನ್ಯೂಸ್

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Arrest

Ullala: ತ್ರಿವಳಿ ತಲಾಖ್‌ ಪ್ರಕರಣ: ಆರೋಪಿಯ ಸೆರೆ

women-suside

CID Investigate: ಬೋವಿ ಹಗರಣದ ಆರೋಪಿ ಮಹಿಳಾ ಉದ್ಯಮಿ ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

Winter Session: ಸಂಸತ್‌ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?

el

Election Results: ಝಾರ್ಖಂಡ್‌, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

BYV-yathnal

BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?

Vikram-Naxal-Mud

Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!

peethabailu-1

Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ

Egg-Students

Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!

Naxal-encounter-Vikram-1

Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.